ಈ ಎಲ್ಲ ಆಟದ ಹಿಂದೆ ಪ್ರಧಾನಿ ಮೋದಿ ಕೈವಾಡವಿದೆ- ಸಿದ್ದರಾಮಯ್ಯ

   

Updated: May 17, 2018 , 02:48 PM IST
ಈ ಎಲ್ಲ ಆಟದ ಹಿಂದೆ ಪ್ರಧಾನಿ ಮೋದಿ ಕೈವಾಡವಿದೆ- ಸಿದ್ದರಾಮಯ್ಯ

ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿಯಾಗಿ ಬಿ ಎಸ್ ಯಡಿಯೂರಪ್ಪ ಪ್ರಮಾಣ ಸ್ವೀಕರಿಸಿದ ಬೆನ್ನಲ್ಲೇ ಕಿಡಿ ಕಾರಿರುವ ಸಿದ್ದರಾಮಯ್ಯ ಈ ಎಲ್ಲ ಆಟಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರ ಕೈವಾಡವಿದೆ ಎಂದು ತಿಳಿಸಿದರು.

ರಾಜ್ಯಪಾಲರು ಬಿಜೆಪಿ ಆಹ್ವಾನ ನೀಡಿರುವುದರ ಕ್ರಮವನ್ನು ವಿರೋಧಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಈ ಎಲ್ಲ ಆಟದ ಹಿಂದೆ ಮೋದಿ ಕೈವಾಡವಿದೆ ಎಂದು ಕಿಡಿಕಾರಿದರು.

ಪ್ರಧಾನಿ  ಮೋದಿ ಮತ್ತು ಅಮಿತ್ ಷಾ ಇಂದು ಯಡಿಯೂರಪ್ಪನವರ ಪ್ರಮಾಣವಚನ ಸ್ವೀಕಾರ ಸಂದರ್ಭದಲ್ಲಿ  ಗೈರು ಹಾಜರಾಗಿದ್ದರು, ಬಿಜೆಪಿಗೆ ಬಹುಮತದ ಕೊರತೆ ಇದ್ದರು ಸಹಿತ ಸರ್ಕಾರ ರಚಿಸಲು ಆಹ್ವಾನ ನೀಡಿದ್ದಾರೆಂದು ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷವು ಆರೋಪಿಸಿವೆ ಅಲ್ಲದೆ ಹಲವು ಕಾನೂನು ತಜ್ಞರು ಕೂಡ ರಾಜ್ಯಪಾಲರ ನಡೆಗೆ ಸಂಶಯ ವ್ಯಕ್ತಪಡಿಸಿದ್ದಾರೆ.