ಹೊರೆ ಹೊತ್ತ ಮಹಿಳೆಗೆ ಸಾಥ್ ನೀಡಲಿದ್ದಾರೆ ಕಿಚ್ಚ ಸುದೀಪ್ !

   

Updated: May 4, 2018 , 10:51 PM IST
ಹೊರೆ ಹೊತ್ತ ಮಹಿಳೆಗೆ ಸಾಥ್ ನೀಡಲಿದ್ದಾರೆ ಕಿಚ್ಚ ಸುದೀಪ್ !

ಬೆಂಗಳೂರು: ಚುನಾವಣೆ ಸಂದರ್ಭದಲ್ಲಿ ಎಲ್ಲ ಪಕ್ಷಗಳು ತಮ್ಮ ಪ್ರಚಾರಕ್ಕೆ ತಾರಾ ವರ್ಚಸ್ಸು ತುಂಬಲು ಭಾರಿ ಕಸರತ್ತು ನಡೆಸುತ್ತವೆ. ಈಗ ಆ ನಿಟ್ಟಿನಲ್ಲಿ ಈಗ ಜೆಡಿಎಸ್ ಕೂಡ ಆ ಪ್ರಯತ್ನ ಮಾಡಿದೆ.

ಈ ಹಿಂದೆ ಸಿದ್ದರಾಮಯ್ಯನವರ ಭೇಟಿ ಮಾಡಿ ಸುದ್ದಿ ಮಾಡಿದ ಕನ್ನಡದ ಕಿಚ್ಚ ಸುದೀಪ್ ಈಗ ಮತ್ತೊಂದು ಅಚ್ಚರಿಯನ್ನು ನೀಡಿದ್ದಾರೆ. ಅದೇನಂತಿರಾ ಹಾಗಾದರೆ ? ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ತೆನೆ ಹೊತ್ತ ಮಹಿಳೆಗೆ ಸಾಥ್ ನಿಡುವ ಸಲುವಾಗಿ ಚುನಾವಣೆಯಲ್ಲಿ ಜೆಡಿಎಸ್ ನ ತಾರಾ ಪ್ರಚಾರಕರ ಪಟ್ಟಿಯಲ್ಲಿ  ಕಾಣಿಸಿಕೊಂಡಿದ್ದಾರೆ. 

ಈಗಾಗಲೇ ಈ ಹಿಂದೆ ಸುದೀಪ್ ಅವರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಸುದ್ದಿ ಮಾಡಿದ್ದರು, ಬಹುಶಃ ಆ ಹಿನ್ನಲೆಯಲ್ಲಿಯೇ ಈಗ ಅವರು  ಜೆಡಿಎಸ್ ಸ್ಟಾರ್ ಪ್ರಚಾರಾಗಿ ಚುನಾವಣಾ ಕದನದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. 

ಇನ್ನೊಂದೆಡೆ ಸಿದ್ದರಾಮಯ್ಯ ಕೂಡ ಸುದೀಪ್ ತಮ್ಮ ಪರವಾಗಿ ಪ್ರಚಾರ ಮಾಡಲಿದ್ದಾರೆ ಎಂದು ಹೇಳಿರುವುದು ಎಲ್ಲರಿಗೂ ಕೂತುಹಲ ಕೆರಳಿಸಿದೆ. ಈವರೆಗೂ ಸುದೀಪರಿಂದ ಈ ಕುರಿತಾಗಿ ಇನ್ನು ಬಹಿರಂಗ ಹೇಳಿಕೆ ಬಂದಿಲ್ಲ ಅಲ್ಲಿಯವರೆಗೆ ಅವರು ನಿಜಕ್ಕೂ ಯಾರ ಯಾರ ಪ್ರಚಾರ ಕೈಗೊಳ್ಳಲಿದ್ದಾರೆ ಎನ್ನುವುದು ನಿಜಕ್ಕೂ ಕೂತುಹಲ ಸಂಗತಿಯಾಗಿದೆ.

By continuing to use the site, you agree to the use of cookies. You can find out more by clicking this link

Close