ಯಾರೂ ಊಹಿಸಲಾಗದಷ್ಟು ಸಂಖ್ಯೆಯಲ್ಲಿ ಬಹುಮತ ಸಾಬೀತು ಪಡಿಸುತ್ತೇವೆ: ಶ್ರೀರಾಮುಲು ವಿಶ್ವಾಸ

ಬಿಜೆಪಿ ಜತೆ ಪಕ್ಷೇತರ ಶಾಸಕರೂ ಇದ್ದಾರೆ.

Updated: May 17, 2018 , 01:00 PM IST
ಯಾರೂ ಊಹಿಸಲಾಗದಷ್ಟು ಸಂಖ್ಯೆಯಲ್ಲಿ ಬಹುಮತ ಸಾಬೀತು ಪಡಿಸುತ್ತೇವೆ: ಶ್ರೀರಾಮುಲು ವಿಶ್ವಾಸ
Pic: Twitter@ANI

ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾದ ಬಿ.ಎಸ್. ಯಡಿಯೂರಪ್ಪನವರಿಗೆ ಅಭಿನಂದನೆಗಳನ್ನು ತಿಳಿಸಿದ ಮೊಳಕಾಲ್ಮೂರು ಶಾಸಕ ಬಿ. ಶ್ರೀರಾಮುಲು, ಯಾರೂ ಊಹಿಸಲಾಗದಷ್ಟು ಸಂಖ್ಯೆಯಲ್ಲಿ ನಾವು ಬಹುಮತ ಸಾಬೀತು ಪಡಿಸುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.

ನಮ್ಮ ಜೊತೆ ಬಹಳಷ್ಟು ಪಕ್ಷೇತರರು ಇದ್ದಾರೆ. ಕಾಂಗ್ರೆಸ್​-ಜೆಡಿಎಸ್ ನಲ್ಲಿ ದೊಡ್ಡ ಸಂಖ್ಯೆಯ ಅಸಮಾಧಾನಿತರಿದ್ದಾರೆ. ಅವರೆಲ್ಲರೂ ನಮ್ಮ ಜೊತೆ ಬಂದೇ ಬರ್ತಾರೆ. ಯಾರೂ ಊಹಿಸಲಾರದಷ್ಟು ಸಂಖ್ಯೆಯಲ್ಲಿ ನಮ್ಮ ಜೊತೆ ಶಾಸಕರು ಬರುತ್ತಾರೆ. ನಾವು ಬಹುಮತವನ್ನು ಸಾಬೀತು ಪಡಿಸುತ್ತೇವೆ ಎಂದು ಬಿಜೆಪಿ ಕಚೇರಿಯಲ್ಲಿ ಬಿ. ಶ್ರೀರಾಮುಲು ಹೇಳಿಕೆ ನೀಡಿದ್ದಾರೆ.

By continuing to use the site, you agree to the use of cookies. You can find out more by clicking this link

Close