ನಮಗೆ ಬಹುಮತ ಸಾಬೀತುಪಡಿಸಲು 15 ದಿನಗಳು ಬೇಕಾಗಿಲ್ಲ- ಸಿಎಂ ಯಡಿಯೂರಪ್ಪ

    

Updated: May 17, 2018 , 09:18 PM IST
ನಮಗೆ ಬಹುಮತ ಸಾಬೀತುಪಡಿಸಲು 15 ದಿನಗಳು ಬೇಕಾಗಿಲ್ಲ- ಸಿಎಂ ಯಡಿಯೂರಪ್ಪ

ಬೆಂಗಳೂರು:  ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವ  ಬಿ ಎಸ್ ಯಡಿಯೂರಪ್ಪ ನವರು ಬಹುಮತ ಸಾಬೀತುಪಡಿಸಲು 15 ದಿನಗಳು ಬೇಕಾಗಿಲ್ಲ ಎಂದು ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು " ನಾನು ಎಲ್ಲ  224 ಶಾಸಕರ ಬೆಂಬಲವನ್ನು ಕೇಳುತ್ತೇನೆ.ಅವರು ತಮ್ಮ ಮನಸ್ಸು ಪೂರಕವಾಗಿ ಅವರು ಮತ ನೀಡುತ್ತಾರೆ ಎಂದು ತಿಳಿದಿದ್ದೇನೆ, ವಿಶ್ವಾಸಮತವನ್ನು ಗೆಲ್ಲುತ್ತೇನೆ ಎನ್ನುವ ವಿಶ್ವಾಸವಿದೆ ಎಂದು ತಿಳಿಸಿದರು.

ಇನ್ನು ಮುಂದುವರೆದು ಮಾತನಾಡಿದ ಅವರು ನಮಗೆ 15 ದಿನಗಳನ್ನು ನೀಡಿದ್ದಾರೆ ಬಹುಮತ ಸಾಭೀತು ಪಡಿಸಲು  ಆದರೆ ನಮಗೆ ಅಷ್ಟು ದಿನಗಳ ಅಗತ್ಯತೆ ಇಲ್ಲ ಅದಕ್ಕೂ ಮೊದಲೇ ನಾವು ಬಹುಮತವನ್ನು ಸಾಭಿತುಪಡಿಸುತ್ತೇವೆ ಎಂದು ತಿಳಿಸಿದರು.

ಇನ್ನೊಂದೆಡೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿರುವುದನ್ನು ವ್ಯಂಗವಾಡಿರುವ ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಏಕ್ ದೀನ್ ಕಾ ಚೀಫ್ ಮಿನಿಸ್ಟರ್ ಎಂದು ಪ್ರತಿಕ್ರಿಯಿಸಿದ್ದರು.

 

By continuing to use the site, you agree to the use of cookies. You can find out more by clicking this link

Close