ಯಡಿಯೂರಪ್ಪ ಒಂದು ದಿನದ ಮುಖ್ಯಮಂತ್ರಿ ಮಾತ್ರ -ರಣದೀಪ್ ಸಿಂಗ್ ಸುರ್ಜೆವಾಲಾ

   

Updated: May 17, 2018 , 07:09 PM IST
ಯಡಿಯೂರಪ್ಪ ಒಂದು ದಿನದ ಮುಖ್ಯಮಂತ್ರಿ ಮಾತ್ರ -ರಣದೀಪ್ ಸಿಂಗ್ ಸುರ್ಜೆವಾಲಾ

ನವದೆಹಲಿ: ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾದ ನಂತರ ಕಾಂಗ್ರೆಸ್ ಬಿಜೆಪಿ ವಿರುದ್ದ ಟೀಕಾ ಪ್ರಹಾರವನ್ನು ಮುಂದುವರೆಸಿದೆ.ಕಾಂಗ್ರೆಸ್ ವಕ್ತಾರ ರನದೀಪ್ ಸಿಂಗ್ ಸುರ್ಜೆವಾಲಾ ಮಾತನಾಡುತ್ತಾ ಯಡಿಯೂರಪ್ಪ ಕೇವಲ ಒಂದು ದಿನದ ಮುಖ್ಯಮಂತ್ರಿ ಮಾತ್ರ ಅವರ ಭವಿಷ್ಯ ನ್ಯಾಯಾಲಯದ ವಿಚಾರಣೆ ಮೇಲೆ ನಿಂತಿದೆ ಎಂದು ತಿಳಿಸಿದರು.

ದೆಹಲಿಯಲ್ಲಿ ಸುದ್ದಿಗಾರರೊಂದಿಗೆ  ಮಾತನಾಡುತ್ತಾ "ರಾಜ್ಯಪಾಲರು ಅದೇಗೆ ಸೂಕ್ತ ಸಂಖ್ಯೆ ಇಲ್ಲದೆ  ಬಿಜೆಪಿಯನ್ನು ಸರ್ಕಾರ ರಚಿಸಲು ಆಹ್ವಾನಿಸುತ್ತಾರೆ ಅವರು ಸಂವಿಧಾನವನ್ನು ಎನ್ಕೌಂಟರ್ ಮಾಡಿದ್ದಾರೆ ಎಂದು ಆರೋಪಿಸಿದರು.ರಾಜ್ಯಪಾಲರು ಬಿಜೆಪಿಯ ಕೇಂದ್ರ ನಾಯಕತ್ವದ ಮಾರ್ಗದರ್ಶನದಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ"ಎಂದು ಕಿಡಿಕಾರಿದರು.

ಕಾಂಗ್ರೆಸ್ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿದೆ ಎನ್ನುವ ಅಮಿತ್ ಷಾ ರವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸುರ್ಜೆವಾಲಾ  ಮೋದಿ ಮತ್ತು ಷಾ ಅವರಿಗೆ  ಧೈರ್ಯವಿದ್ದರೆ ನಾಳೆ ಕರ್ನಾಟಕದ ಸದನದಲ್ಲಿ ನಾಳೆಯೇ ಬಹುಮತವನ್ನು ಸಾಬಿತು ಪಡಿಸಲಿ ಸತ್ಯ ಏನು ಎನ್ನುವುದು ತಿಳಿಯುತ್ತದೆ ಎಂದು ಅವರು ಸವಾಲು ಹಾಕಿದರು.

By continuing to use the site, you agree to the use of cookies. You can find out more by clicking this link

Close