ನಿಮಗೆ 'ಅಯ್ಯಂಗಾರ್ ಯೋಗ'ದ ಬಗ್ಗೆ ಎಷ್ಟು ಗೊತ್ತು?

    

Manjunath Naragund Manjunath Naragund | Updated: Jun 21, 2018 , 05:44 PM IST
ನಿಮಗೆ 'ಅಯ್ಯಂಗಾರ್ ಯೋಗ'ದ ಬಗ್ಗೆ ಎಷ್ಟು ಗೊತ್ತು?

ಯೋಗ ಇಡೀ ಜಗತ್ತಿಗೆ ಭಾರತ ಕೊಟ್ಟ ಅತಿ ದೊಡ್ಡ ಕೊಡುಗೆ ಎಂದು ಹೇಳಬಹುದು. ಭಾರತೀಯ ಸಂಸ್ಕೃತಿಯ ಭಾಗವಾಗಿ ಬೆಳೆದು ಬಂದಿರುವ ಈ ಯೋಗ ಪರಂಪರೆಯನ್ನು ಈಗ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಕೂಡ ಅಧಿಕೃತವಾಗಿ ಮಾನ್ಯತೆಯನ್ನು ನೀಡಲಾಗಿದೆ. ಆದ್ದರಿಂದ ಅದರ ಭಾಗವಾಗಿ  2015 ರಿಂದಲೂ ಈಗ ಜೂನ್ 21 ಅಂತರಾಷ್ಟ್ರೀಯ ಯೋಗ ದಿನ ಎಂದು ಆಚರಿಸಲಾಗುತ್ತದೆ. 

ಈ ಹಿನ್ನಲೆಯಲ್ಲಿ ನಾವು ಯೋಗ ದಿನದಂದು ಇಡೀ ಜಗತ್ತು ಸ್ಮರಿಸಬೇಕಾದ ಹೆಸರು ಬಿಕೆಎಸ್ ಅಯ್ಯಂಗಾರ್. ಹೌದು ಭಾರತೀಯ ಯೋಗ ಪರಂಪರೆಯನ್ನು ಪಾಶ್ಚಾತ್ಯ ರಾಷ್ಟ್ರಗಳಲ್ಲೂ ಕೂಡ ಹಬ್ಬಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಕನ್ನಡಿಗರಾರುವ ಬಿಕೆಎಸ್ ತಮ್ಮದೇ  ರೀತಿಯ ಯೋಗ ಶೈಲಿಯಿಂದಾಗಿ ಜಾಗತೀಕ ಮಟ್ಟದಲ್ಲಿ ಗುರುತಿಸಿಕೊಂಡರು.ಈ ಕಾರಣದಿಂದಲೇ ಅವರ ಯೋಗ ಶೈಲಿಯನ್ನು 'ಅಯ್ಯಂಗಾರ್ ಯೋಗ' ಎಂದೇ ಪ್ರತ್ಯೇಕವಾಗಿ ಗುರುತಿಸಲಾಗುತ್ತಿದೆ.

ಬಾಲ್ಯದಲ್ಲಿ ಇನ್ಫ್ಳುಯಂಜಾದಿಂದ ಬಳಲುತಿದ್ದ  ಬಿಕೆಎಸ್ ಮುಂದೆ ಇದೇ ಕಾರಣದಿಂದಲೇ ಮಲೇರಿಯಾ, ತೈಪೆಡ, ಅಸ್ತಮಾದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. 1934ರಲ್ಲಿ  ಅವರ ಸಂಬಂಧಿ ಶ್ರೀ ತಿರುಮಲ ಕೃಷ್ಣಾಚಾರ್ಯ ಅವರು 15 ವರ್ಷದ ಬಾಲಕ ಬಿಕೆಎಸ್ ಅವರನ್ನು ಅರೋಗ್ಯ ವೃದ್ದಿಗಾಗಿ ಯೋಗ ಅಭ್ಯಾಸ ಮಾಡಲು ಮೈಸೂರಿಗೆ ಆಹ್ವಾನಿಸಿದರು. ಕಾಲಾಂತರದಲ್ಲಿ ಅವರ ಆರೋಗ್ಯ ವೃದ್ದಿಯಾಗಿ ಮುಂದೆ 18 ರ ವಯಸ್ಸಿಗೆ ಯೋಗ ಶಿಕ್ಷಣವನ್ನು ಹರಡಲು ಅವರನ್ನು ಪುಣೆಗೆ ಕಳುಹಿಸಿದರು.

1937 ರಲ್ಲಿ ಪುಣೆಗೆ ಬಂದ ಅವರು  ಮುಂದೆ ಯೋಗ ಶಿಕ್ಷಣವನ್ನು  ಜಿಡ್ಡು ಕೃಷ್ಣಮೂರ್ತಿ,ಜಯಪ್ರಕಾಶ ನಾರಾಯಣ,ಯೆಹೂದಿ ಮೆಹ್ನ್ಹೂನ್.ಅಲ್ಲದೆ  ಬೆಲ್ಜಿಯಂ ನ ಎಲಿಜೆಬೆತ್ ರಾಣಿಗೆ ಶಿರ್ಶಾಸನವನ್ನು ಕಲಿಸಿದರು. ಬಾಲಿವುಡ್ ನಲ್ಲಿ  ಕರೀನಾ ಕಪೂರ್, ಮೀರಾ ನಾಯರ್, ಕ್ರಿಕೆಟ್ ಆಟಗಾರ್ ಸಚಿನ್ ತೆಂಡೂಲ್ಕರ್ ಇವರೆಲ್ಲರು ಕೂಡ ಬಿಕೆಎಸ್ ಬಳಿ ಯೋಗ ತರಬೇತಿಯನ್ನು ಪಡೆದವರು.

ಅಯ್ಯಂಗಾರ್ ಯೋಗ

ಬಿಕೆಎಸ್ ಅಯ್ಯಂಗಾರ್  1970 ರ ಅವಧಿಯಲ್ಲಿ ಮೊದಲಬಾರಿಗೆ ಈ ಆಸನವನ್ನು ಅಭಿವೃದ್ದಿ ಪಡಿಸಿದವರು. ಇಲ್ಲಿ ಪ್ರಮುಖವಾಗಿ ಉಸಿರಿನ ಮೂಲಕ ನಿಯಂತ್ರಣ ಸಾಧಿಸುವುದಲ್ಲದೆ ದೇಹದ ವಿವಿಧ ಭಾಗಗಳನ್ನು  ಆಸನಕ್ಕೆ ಒಳಪಡಿಸಿ ದೇಹದ ಮೇಲೆ ಸ್ಥಿರತೆಯನ್ನು ಸಾಧಿಸುವುದು ಈ ಯೋಗದ ಮೂಲ ಉದ್ದೇಶ.ಈ ಯೋಗವನ್ನು ಹಠಯೋಗದ ಭಾಗವು ಎಂದು ಹೇಳುವುದುಂಟು.

ಬಿಕೆಎಸ್ ಅಯ್ಯಂಗಾರ್ ಕೇವಲ ಪ್ರಾಯೋಗಿಕವಾಗಿ ಯೋಗವನ್ನು ಮಾಡುವುದರ ಜೊತೆಗೆ ಅದನ್ನು ಶಾಸ್ತ್ರ ಬದ್ದ ಅಧ್ಯಯನಕ್ಕೆ ಒಳಪಡಿಸಿ ಮುಂದೆ  'ಲೈಟ್  ಆನ್ ಯೋಗ' ದಿ ಆರ್ಟ್ ಆಫ್ ಯೋಗ, ಹಲವು ಯೋಗದ ಕುರಿತಾಗಿ ಕೃತಿಗಳನ್ನು ರಚಿಸಿದರು. ಇವು ಇಂದಿಗೂ ಕೂಡ ಯೋಗ ಅಧ್ಯಯನದಲ್ಲಿ ಮಹತ್ತರವಾದ ಮೈಲುಗಲ್ಲನ್ನು ಸಾಧಿಸಿವೆ ಎಂದು ಹೇಳಬಹುದು. 

ಬಿಕೆಎಸ್ 2014 ರಲ್ಲಿ 95 ನೇ ವಯಸ್ಸಿನಲ್ಲಿ ಪುಣೆಯಲ್ಲಿ ತಮ್ಮ ಕೊನೆಯುಸಿರೆಳೆದರು

By continuing to use the site, you agree to the use of cookies. You can find out more by clicking this link

Close