ಗೂಗಲ್ ನಿಂದ ಹರಗೋಬಿಂದ ಖೊರಾನಾ ಜನ್ಮದಿನಕ್ಕೆ ಡೂಡಲ್ ಸಮರ್ಪಣೆ

     

Updated: Jan 9, 2018 , 07:08 PM IST
ಗೂಗಲ್ ನಿಂದ ಹರಗೋಬಿಂದ ಖೊರಾನಾ ಜನ್ಮದಿನಕ್ಕೆ ಡೂಡಲ್ ಸಮರ್ಪಣೆ

ಗೂಗಲ್ ಇಂದು ಭಾರತದ ಖ್ಯಾತ ವಿಜ್ಞಾನಿ ಹರಗೋಬಿಂದ ಖೊರಾನಾ ರವರ ಜನ್ಮದಿನಕ್ಕೆ ಗೂಗಲ್ ಸಂಸ್ಥೆ ತನ್ನ ವಿಶಿಷ್ಟವಾದ ಡೂಡಲ್  ಮೂಲಕ ಅವರಿಗೆ ಗೌರವ ಸಲ್ಲಿಸಿದೆ. ಆದ್ದರಿಂದ ಅವರ ಜೀವನವನ್ನು ಪರಿಚಯಿಸುವ ಒಂದು ಸಣ್ಣ ಜೀವನದ ಚಿತ್ರಣ ಬರಹ ಇಲ್ಲಿದೆ ಓದಿ ನೋಡಿ.

ಹರ್ಗೋಬಿಂದ್ ಖೊರಾನಾ, ಪಂಜಾಬ್ನ ರಾಯ್ಪುರ್ನಲ್ಲಿರುವ ಒಂದು ಸಣ್ಣ ಗ್ರಾಮದಲ್ಲಿ 1922 ಜನೆವರಿ 9ರಂದು ಜನಿಸಿದ ಖೊರನ ಬಾಲ್ಯದಿಂದಲೂ ವಿಜ್ಞಾನದಲ್ಲಿ ಆಸಕ್ತಿಯನ್ನು ಹೊಂದಿದ್ದರು. ಖೊರಾನಾ ಅವರಿಗೆ ತಮ್ಮ ವಿದ್ಯಾಭ್ಯಾಸದ ಸಂದರ್ಭದಲ್ಲಿ ವಿದ್ಯಾರ್ಥಿವೇತನಗಳು ನೆರವಿಗೆ ಬಂದವು. 1943 ರಲ್ಲಿ ಬ್ಯಾಚುಲರ್ ಪದವಿಯನ್ನು ಪೂರ್ಣಗೊಳಿಸಿ ನಂತರ  1945 ರಲ್ಲಿ ಲಾಹೋರ್ ನ ಪಂಜಾಬ್ ವಿಶ್ವವಿದ್ಯಾಲಯದಿಂದ ಸ್ನಾತ್ತಕೋತ್ತರ ಪದವಿಯನ್ನು ಪಡೆದರು. ಮುಂದೆ ಅವರು ತಳಿಶಾಸ್ತ್ರದಲ್ಲಿನ ಅಧ್ಯಯನಕ್ಕಾಗಿ  1968 ರಲ್ಲಿ ನೊಬೆಲ್ ಬಹುಮಾನವನ್ನು ಪಡೆದ ಮೊದಲ ಭಾರತೀಯ ಎನ್ನುವ ಖ್ಯಾತಿಯನ್ನು ಪಡೆದಿದ್ದಾರೆ.

ಖೊರಾನಾ 1948 ರ ಸುಮಾರಿಗೆ ಲಿವರ್ಪೂಲ್ ವಿಶ್ವವಿದ್ಯಾನಿಲಯಕ್ಕೆ ಹೋದರು ಮತ್ತು ನಂತರ ಜುರಿಚ್ನಲ್ಲಿನ ಈಡ್ಜನೋಸಿಸೆ ಟೆಕ್ನಿಷೆಚೆ ಹೋಚ್ಸ್ಚ್ಯೂಲೆನಲ್ಲಿ ಅಧ್ಯಯನ ನಡೆಸಿದರು. ಆ ನಂತರ ಭಾರತದಲ್ಲಿ ಅವರು ಸ್ವಲ್ಪ ಸಮಯ ಕಳೆದು  ಪ್ರೋಟೀನ್ಗಳು ಮತ್ತು ನ್ಯೂಕ್ಲಿಯಿಕ್ ಆಮ್ಲಗಳ ಬಗ್ಗೆ ಅವರ ಸಂಶೋಧನೆಯನ್ನು ಕೈಗೊಳ್ಳಲು  ಕೇಂಬ್ರಿಡ್ಜ್ಗೆ ತೆರಳಿದರು . ಖೊರಾನಾ ರವರು  ಪ್ರೋಟೀನ್ಗಳು ಮತ್ತು ನ್ಯೂಕ್ಲಿಯಿಕ್ ಆಮ್ಲಗಳ ರಾಸಾಯನಿಕ ಸಂಶ್ಲೇಷಣೆಯ ಸಂಶೋಧನೆಯಲ್ಲಿ  ಪರಿಣತಿಯನ್ನು ಪಡೆದಿದ್ದಾರೆ.

ಅವರು ಇಂಗ್ಲೆಂಡ್, ಸ್ವಿಟ್ಜರ್ಲ್ಯಾಂಡ್ ಮತ್ತು ಕೆನಡಾದ ವಿಶ್ವವಿದ್ಯಾನಿಲಯಗಳಲ್ಲಿ ಅವರ ಸಂಶೋಧನಾ ಅಧ್ಯಯನವನ್ನು  ನಡೆಸಿದರು. 1968 ರಲ್ಲಿ ಅವರಿಗೆ ನೊಬೆಲ್ ಪ್ರಶಸ್ತಿ ಲಭಿಸಿತು. ಡಿಎನ್ಎಯಲ್ಲಿರುವ ನ್ಯೂಕ್ಲಿಯೊಟೈಡ್ಗಳ ಕ್ರಮವು ಯಾವ ಅಮೈನೋ ಆಮ್ಲಗಳನ್ನು ನಿರ್ಮಿಸಬಹುದೆಂದು ನಿರ್ಣಯಿಸಿದ ಕಾರಣಕ್ಕಾಗಿ ಅವರಿಗೆ ಈ ಪ್ರತಿಷ್ಠಿತ ಬಹುಮಾನವನ್ನು ನೀಡಲಾಯಿತು. ಖೊರಾನಾ ಅವರಿಗೆ  ಹಲವಾರು ಪ್ರಶಸ್ತಿಗಳು ಅವರ ಸಂಶೋಧನಾ ಕಾರ್ಯವನ್ನು ಮೆಚ್ಚಿ ಬಂದಿದ್ದವು. ಅವರು ನವೆಂಬರ್ 9, 2011 ರಂದು ಅಮೆರಿಕಾದ ಮಾಸ್ಸುಚುಸ್ಸೇತ್ಸ್ ನಲ್ಲಿ  ಕೊನೆಯುಸಿರೆಳೆದರು 

By continuing to use the site, you agree to the use of cookies. You can find out more by clicking this link

Close