ಅರೆಬಿಕ್ ಆಧುನಿಕ ಸಾಹಿತ್ಯದ ಪ್ರವರ್ತಕ ಖಲೀಲ್ ಗಿಬ್ರಾನ್

     

Updated: Jan 9, 2018 , 06:21 PM IST
ಅರೆಬಿಕ್ ಆಧುನಿಕ ಸಾಹಿತ್ಯದ ಪ್ರವರ್ತಕ ಖಲೀಲ್ ಗಿಬ್ರಾನ್

ಖಲೀಲ್ ಗಿಬ್ರಾನ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ,ಈ ಮಹಾನ್ ಕವಿ ಕೇವಲ ಅರಬ್ ದೇಶಕ್ಕೆ ಮಾತ್ರ ಸೀಮಿತವಾದವನಲ್ಲ, ಬದಲಾಗಿ ಜಗತ್ತಿನೆಲ್ಲೆಡೆ ತಮ್ಮ ಸಾಹಿತ್ಯ ಮತ್ತು ರಾಜಕೀಯ ನಿಲುವುಗಳಿಂದಾಗಿ ತಮ್ಮ ಹೆಸರನ್ನು ಮಾಡಿದವರು. ಹೌದು ಅರಬ್ಬ ದೇಶದಲ್ಲಿದ್ದ ಸಾಂಪ್ರಾದಾಯಿಕ ಸಾಹಿತ್ಯಿಕ ಮಾದರಿಯನ್ನು ಕೊನೆಗೊಳಿಸಿ ಹೊಸ ಸಾಹಿತ್ಯ ಪರಂಪರೆಗೆ ನಾಂದಿ ಹಾಡಿದವರು.ಇಂತಹ ವ್ಯಕ್ತಿ ಇಂದು ಜನ್ಮ ತಳೆದ ದಿನ, ಆದ್ದರಿಂದ ಈ ಹಿನ್ನಲೆ ಯಲ್ಲಿ ಖಲೀಲ್ ಗಿಬ್ರಾನ್ ರವರ ವಿಚಾರಗಳನ್ನು ನಾವು ಮತ್ತೊಮ್ಮೆ ಮೆಲುಕು ಹಾಕಬೇಕಾಗಿದೆ. 

ಖಲೀಲ್ ಗಿಬ್ರಾನ್ ರವರು ಜನೇವರಿ 6, 1883 ಒಟ್ಟೋಮನ್ ಸಾಮ್ರಾಜ್ಯದ ಭಾಗವಾಗಿದ್ದ  ಲೆಬನಾನ್ ನಲ್ಲಿ ಜನಿಸಿದರು. ಪ್ರಾರಂಭದ ದಿನಗಳಲ್ಲಿ ಪ್ರಾಥಮಿಕ ಶಿಕ್ಷಣದಿಂದ ವಂಚಿತರಾಗಿದ್ದ  ಗಿಬ್ರಾನ್ ಮುಂದೆ ಪ್ರತಿದಿನ ಅವರ ಮನೆಗೆ ಪಾದ್ರಿಗಳು ಭೇಟಿ ನೀಡುತ್ತಿದ್ದುದರ ಫಲವಾಗಿ ಅರೆಬಿಕ್ ಮತ್ತು ಬೈಬಲ್ ಶಿಕ್ಷಣವನ್ನು ಪಡೆದರು.

ಗಿಬ್ರಾನ್ ತಮ್ಮ ಸಾಹಿತ್ಯ ಕೃತಿಯಾದ ದಿ ಪ್ರೊಫೆಟ್ 1960 ಕಾಲಾವಧಿಯಲ್ಲಿ ನವ ಚಳುವಳಿಯ ಮೂಲಕ ಖ್ಯಾತಿಗೆ ಬಂದಿತು.ನಂತರ ಈ ಕೃತಿ ಜಾಗತಿಕವಾಗಿ ಸುಮಾರು 40ಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಗೊಂಡಿದೆ.
ಗಿಬ್ರಾನ ತಮ್ಮ ಚಿತ್ರ ಕಲೆಯ ಮೂಲಕವು ಸಹ ಜನಪ್ರಿಯರಾಗಿದ್ದಾರೆ. 

ಅದರಲ್ಲಿ ಪ್ರಮುಖವಾಗಿ ಡಬ್ಲ್ಯೂ ಬಿ ಯೇಟ್ಸ್, ಕಾರ್ಲ್ ಜಂಗ್,ಅಗಸ್ಥೆ ರೋದೀನ್ ರವರ ಕಲಾಕೃತಿಗಳು ಪ್ರಮುಖವಾದವುಗಳು, ಗಿಬ್ರಾನ್ ಪ್ರಮುಖವಾಗಿ ಕ್ರೈಸ್ಟ್ ಮತ್ತು ಇಸ್ಲಾಂ,ಹಾಗೂ ಸೂಪಿಯ ವಿಚಾರಗಳಿಂದ ಪ್ರಭಾವಿತರಾಗಿದ್ದರು.ಮಾನವಿಯತೆಯ ಸಾರವನ್ನು ಜಗತ್ತಿಗೆ ಸಾರುವಲ್ಲಿ ಗಿಬ್ರಾನ್ ರವರ ವಿಚಾರಗಳು ಮಹತ್ತರ ಪಾತ್ರವನ್ನು ವಹಿಸಿವೆ.  

ಗಿಬ್ರಾನ್ ತಮ್ಮ 48 ನೇ ವಯಸ್ಸಿನಲ್ಲಿ ಅಮೆರಿಕಾದ ನ್ಯೂಯಾರ್ಕ್ ಸಿಟಿಯಲ್ಲಿ ಕಿಡ್ನಿ ವೈಫಲ್ಯದಿಂದಾಗಿ  ಕೊನೆಯುಸಿರೆಳೆದರು. 

By continuing to use the site, you agree to the use of cookies. You can find out more by clicking this link

Close