ಅಭಿಜಾತ ಸಾಹಿತ್ಯದ ಕಣಜ 'ಮೂರ್ತಿ ಕ್ಲಾಸಿಕಲ್ ಲೈಬ್ರರಿ'

     

Manjunath Naragund Manjunath Naragund | Updated: Jan 18, 2018 , 05:12 PM IST
ಅಭಿಜಾತ ಸಾಹಿತ್ಯದ ಕಣಜ 'ಮೂರ್ತಿ ಕ್ಲಾಸಿಕಲ್ ಲೈಬ್ರರಿ'
Photo Courtesy: murtylibrary

ಮೂರ್ತಿ ಕ್ಲಾಸಿಕಲ್ ಲೈಬ್ರರಿಯು ಸುಧಾಮೂರ್ತಿ ಹಾಗೂ ನಾರಾಯಣ ಮೂರ್ತಿ ದಂಪತಿಯಗಳ ಮಗನಾದ ರೋಹನ್ ಮೂರ್ತಿಯವರ ಕನಸಿನ ಯೋಜನೆಯಾಗಿದ್ದು, ಈ ಲೈಬ್ರರಿ ಕಳೆದ ಎರಡು ಸಾವಿರ ವರ್ಷಗಳಿಂದ ಇರುವ ಭಾರತದ ಪ್ರಮುಖ ಸಾಹಿತ್ಯ ಕೃತಿಗಳನ್ನು ಓದುಗರಿಗೆ ಪರಿಚಯುಸುವ ನಿಟ್ಟಿನಲ್ಲಿ ಪ್ರಾರಂಭವಾಗಿದೆ. ಆ ನಿಟ್ಟಿನಲ್ಲಿ ಅನೇಕ ಕ್ಲಾಸಿಕ್ ಇಂಡಿಕ್ ಪಠ್ಯಗಳನ್ನು ಜಾಗತಿಕವಾಗಿ ತಲುಪಿಸುವ ನಿಟ್ಟಿನಲ್ಲಿ, ಇಂದು ಭಾರತದಲ್ಲಿನ ಶಾಸ್ತ್ರೀಯ ಗ್ರಂಥಾಲಯವಾಗಿ ದೇಶಿಯ ಮಟ್ಟದಲ್ಲಿರುವ ಪ್ರಾದೇಶಿಕ ಭಾಷೆಯ ಪುರಾತನ ಕೃತಿಗಳನ್ನು ಇಂಗ್ಲೀಷ್ ಗೆ ತರ್ಜುಮೆ ಮಾಡುವಂತಹ ಸಾಹಸಕ್ಕೆ ಕೈಹಾಕಿದೆ.

ಈ ಯೋಜನೆಯನ್ನು  ಸಾಧ್ಯಗೊಳಿಸಲು ರೋಹನ್ ಮೂರ್ತಿ ಉದಾರವಾದ ದೇಣಿಗೆಯನ್ನು ನೀಡಿದ್ದಾರೆ. ಇದರ ಪ್ರತಿಫಲವಾಗಿ ಈ 'ಮೂರ್ತಿ ಕ್ಲಾಸಿಕಲ್ ಲೈಬ್ರರಿ' ಹಾರ್ವರ್ಡ್ ವಿವಿಯ ಪ್ರೊಫೆಸರ್ ಷೆಲ್ಡನ್ ಪೊಲ್ಲಾಕ್ ರವರ ಸಂಪಾದಕತ್ವದಲ್ಲಿ ಹಲವಾರು  ಭಾರತೀಯ ಸರ್ವಶ್ರೇಷ್ಠ ಕೃತಿಗಳನ್ನು ಇಂಗ್ಲಿಷ್ ನಲ್ಲಿ ಪ್ರಕಟಿಸುತ್ತಿದೆ. ಈ ಮೂರ್ತಿ ಕ್ಲಾಸಿಕಲ್ ಲೈಬ್ರರಿ ಬಾಂಗ್ಲಾ, ಹಿಂದಿ, ಕನ್ನಡ, ಮರಾಠಿ, ಪಾಲಿ, ಪಂಜಾಬಿ, ಪರ್ಷಿಯನ್, ಸಂಸ್ಕೃತ, ಸಿಂಧಿ, ತಮಿಳು, ತೆಲುಗು ಮತ್ತು ಉರ್ದು ಸೇರಿದಂತೆ ಭಾರತೀಯ ಭಾಷೆಗಳ ಉತ್ಕೃಷ್ಟ ಸಾಹಿತ್ಯದ ಪ್ರಾದೇಶಿಕ ಲಿಪಿಯಲ್ಲಿನ ಪಠ್ಯದ ಅನುವಾದ ಜೊತೆಗೆ ಕೃತಿಯ ಪರಿಚಯ, ವಿವರಣಾತ್ಮಕ ವ್ಯಾಖ್ಯಾನ, ಮತ್ತು ಪಠ್ಯಟಿಪ್ಪಣಿಗಳು ಈ ಸಂಪುಟಗಳನ್ನು ಹೆಚ್ಚು ಅಧಿಕೃತವಾಗಿರುವಂತೆ ಅದರ ಗುಣಮಟ್ಟಕ್ಕೆ ಗಮನಹರಿಸಲಾಗಿದೆ.

ಇಂದು ಭಾರತೀಯ ಸಾಹಿತ್ಯವು ಹಲವು ಭಾಷೆಗಳಿಂದ ರಚಿಸಲ್ಪಟ್ಟಿದೆ, ಅವುಗಳಲ್ಲಿ ದೇಶಿಯ ಭಾಷೆಯ ಸಾಹಿತ್ಯವು ಹಲವಾರು ಮೂಲಗಳಿಂದ  ಎರವಲು ಪಡೆದುಕೊಂಡಿವೆ, ಭಾರತೀಯ ಸಾಹಿತ್ಯದಲ್ಲಿರುವ ಭಾಷೆಗಳು ಯುರೋಪ್ಗಿಂತ ಹೆಚ್ಚು ಪ್ರದೇಶಗಳಲ್ಲಿ ಕಂಡುಬರುತ್ತವೆ, ಅದರಲ್ಲೂ ಪ್ರಮುಖವಾಗಿ ಪಶ್ಚಿಮದಲ್ಲಿ ಇಂದಿನ ಅಫಘಾನಿಸ್ತಾನದಿಂದ ಪೂರ್ವದಲ್ಲಿ ಮಯನ್ಮಾರ್ ಮತ್ತು ಉತ್ತರದ ನೇಪಾಳದಿಂದ ದಕ್ಷಿಣದ  ಶ್ರೀಲಂಕಾದವರೆಗೆ ವ್ಯಾಪಿಸಿದೆ. ಈ ಪ್ರದೇಶವಾರು ವಿಸ್ತರಣೆಯ ಮೂಲಕ ಭಾರತದ ಸಾಹಿತ್ಯವು ವಿಶ್ವದಲ್ಲೇ ಅತಿ ಸಂಕೀರ್ಣ ಬಹುಭಾಷಾ ಸಾಹಿತ್ಯದ ಪರಂಪರೆಯನ್ನು ಹೊಂದಿದೆ.

ಆದ್ದರಿಂದ ಇಂತಹ ಉತ್ತಮ ಸಾಹಿತ್ಯ ಕೃತಿಗಳನ್ನು ಜಾಗತಿಕ ಓದುಗರಿಗೆ ತಲುಪಿಸುವ ಕಾರ್ಯವನ್ನು ಮೂರ್ತಿ ಕ್ಲಾಸಿಕಲ್ ಲೈಬರಿ ಮಾಡುತ್ತಿದೆ. ಹಾಗಾದರೆ ನಿಮಗೆ ಇಂತಹ ಕ್ಲಾಸಿಕಲ್ ಸಾಹಿತ್ಯವನ್ನು ಓದುವ ಗೀಳಿದ್ದರೆ ಈ ಕೆಳಗಿನ ಲಿಂಕ್ ಗೆ ಹೋಗಿ  ಈಗಲೇ ನಿಮ್ಮ ಪ್ರತಿ ಕಾಯ್ದಿರಿಸಿಕೊಳ್ಳಿ http://www.murtylibrary.com/

 

 

By continuing to use the site, you agree to the use of cookies. You can find out more by clicking this link

Close