ಹೋಳಿ ಹಬ್ಬಕ್ಕೆ ರುಚಿಕರವಾದ ಅಡುಗೆ; ಇಲ್ಲಿದೆ ರೆಸಿಪಿ...

ದೇಶದೆಲ್ಲೆಡೆ ಈಗ ಹೋಳಿ ಹಬ್ಬದ ಸಂಭ್ರಮ. ಈ ಹೋಳಿ ಹಬ್ಬದಂದು ಇತರ ಹಬ್ಬಗಳಂತೆಯೇ ವಿಶೇಷ ತಿಂಡಿ-ತಿನಿಸುಗಳನ್ನು ತಯಾರಿಸಿ, ಎಲ್ಲರಿಗೂ ಹಂಚಿ ಸಂಭ್ರಮಿಸುತ್ತಾರೆ. ಆ ಹೋಳಿ ಹಬ್ಬದಡುಗೆ ಹೇಗೆ ಮಾಡುವುದು ಎಂಬುದನ್ನು ನಾವು ನಿಮಗೆ ತಿಳಿಸುತ್ತೇವೆ...

Last Updated : Feb 27, 2018, 06:41 PM IST
ಹೋಳಿ ಹಬ್ಬಕ್ಕೆ ರುಚಿಕರವಾದ ಅಡುಗೆ; ಇಲ್ಲಿದೆ ರೆಸಿಪಿ... title=

ನವ ದೆಹಲಿ: ದೇಶದೆಲ್ಲೆಡೆ ಈಗ ಹೋಳಿ ಹಬ್ಬದ ಸಂಭ್ರಮ. ಹೋಳಿ ಬಣ್ಣಗಳ ಜೊತೆಗೆ ಬೆಸೆದುಕೊಂಡ ಬಾಂಧವ್ಯವನ್ನು ಬೆಸೆಯುವ ಹಬ್ಬ. ಈ ಹೋಳಿ ಹಬ್ಬದಂದು ಇತರ ಹಬ್ಬಗಳಂತೆಯೇ ವಿಶೇಷ ತಿಂಡಿ-ತಿನಿಸುಗಳನ್ನು ತಯಾರಿಸಿ, ಎಲ್ಲರಿಗೂ ಹಂಚಿ ಸಂಭ್ರಮಿಸುತ್ತಾರೆ. ಆದರೆ ಕೆಲವರಿಗೆ ಈ ಹಬ್ಬದ ತಿನಿಸುಗಳು ಯಾವುವು ಮತ್ತು ಅದನ್ನು ಹೇಗೆ ರುಚಿಯಾಗಿ ತಯಾರಿಸುವುದು ಎಂಬುದು ಗೊತ್ತಿರುವುದಿಲ್ಲ. ಆದರೆ ಅದಕಾಗಿ ನೀವ್ಯಾರು ಚಿಂತಿಸಬೇಕಿಲ್ಲ. ಹೋಳಿ ಹಬ್ಬದಡುಗೆ ಹೇಗೆ ಮಾಡುವುದು ಎಂಬುದನ್ನು ನಾವು ನಿಮಗೆ ತಿಳಿಸುತ್ತೇವೆ...

ದಹೀ ಆಲೂ
ಬೇಕಾಗುವ ಸಾಮಗ್ರಿಗಳು : ಬೇಯಿಸಿದ ಆಲೂಗಡ್ಡೆ 2(ದೊಡ್ಡ ಗಾತ್ರದ್ದು), ಮೊಸರು 4 ಚಮಚ, ಎಣ್ಣೆ 2 ಚಮಚ, ಕೊತ್ತಂಬರಿಸೊಪ್ಪು ಸಣ್ಣಗೆ ಹೆಚ್ಚಿದ್ದು ಸ್ವಲ್ಪ, ಇಂಗು ಸ್ವಲ್ಪ, ಕಡಲೆಹಿಟ್ಟು 2 ಚಮಚ, ಪಲಾವ್ ಎಲೆ ಒಂದು, ಹಸಿ ಶುಂಠಿ ಹೆಚ್ಚಿದ್ದು ಸ್ವಲ್ಪ, ಹಸಿರು ಮೆಣಸಿನಕಾಯಿಗಳು 1 ಚಮಚ(ಸಣ್ಣಗೆ ಹೆಚ್ಚಿದ್ದು), ಧನಿಯಾ ಪುಡಿ 1 ಚಮಚ, ಜೀರಿಗೆ ಅರ್ಧ ಚಮಚ, ಅರಿಶಿನ ಪುಡಿ 1/2 ಚಮಚ ಮತ್ತು ಉಪ್ಪು, ನೀರು 1 1/2 ಕಪ್.

ತಯಾರಿಸುವ ವಿಧಾನ: 
* ಮೊದಲು ಬೇಯಿಸಿದ ಆಲೂಗಡ್ಡೆಗಳ ಸಿಪ್ಪೆ ತೆಗೆದು, ಸಣ್ಣ ತುಂಡುಗಳನ್ನಾಗಿ ಕತ್ತರಿಸಿ. 
* ನಂತರ ಮೊಸರು, ಶುಂಠಿ, ಹಸಿರು ಮೆಣಸಿನಕಾಯಿ, ಅರಿಶಿನ ಪುಡಿ, ಧನಿಯಾ ಪುಡಿ ಹಾಕಿ ಪೇಸ್ಟ್ ರೀತಿ ಮಿಶ್ರ ಮಾಡಿ.
* ನಂತರ ಪ್ಯಾನ್ ಬಿಸಿ ಮಾಡಿ, ಅದಕ್ಕೆ ಎಣ್ಣೆ ಹಾಕಿ ಜೀರಿಗೆ, ಇಂಗು ಹಾಕಿ ಅದನ್ನು ಫ್ರೈ ಮಾಡಿ. 
* ನಂತರ ಅರಿಶಿಣ ಪುಡಿ, ಪಲಾವ್ ಎಲೆ, ಕಡಲೆಹಿಟ್ಟು ಹಾಕಿ ಕೆಂಪು ಬಣಕ್ಕೆ ತಿರುಗುವವರೆಗೆ ಹುರಿಯಿರಿ. 
* ನಂತರ ಮೊಸರಿನ ಮಿಶ್ರಣ ಹಾಕಿ 2 ನಿಮಿಷ ಬಾಡಿಸಿ. ನಂತರ ಅದರಲ್ಲಿ ಎಣ್ಣೆ ಅಂಚಿನಲ್ಲಿ ಬರುವವರೆಗೂ ಬೇಯಿಸಿ. 
* ಈಗ ಆಲೂಗಡ್ಡೆ, ಉಪ್ಪು ಹಾಕಿ 2-3 ನಿಮಿಷ ಬೇಯಿಸಿ.
* ನಟರ ಒಂದು ಕಪ್ ನೀರು ಹಾಕಿ ಕಡಿಮೆ ಉರಿಯಲ್ಲಿ 4-5 ನಿಮಿಷ ಬೇಯಿಸಿ, ಕೊತ್ತಂಬರಿ ಸೋಪ್ಪಿನಿಂದ ಅಲಂಕರಿಸಿ'. ಈಗ ರುಚಿಕರವಾದ ದಹೀ ಆಲೂ ಸವಿಯಲು ಸಿದ್ಧ.

ಕಾಜೂ ಮಖಾನಾ ಕರ್ರಿ
ಬೇಕಾಗುವ ಸಾಮಗ್ರಿಗಳು : ಗೋಡಂಬಿ ½ ಕಪ್, ಕ್ರೀಮ್ ಅಥವಾ ಕೆನೆ ½ ಕಪ್, ಮಖನಾ ½ ಕಪ್, ಹಸಿರು ಅವರೆಕಾಳು 3/4, ಟೊಮ್ಯಾಟೊ 2, ಈರುಳ್ಳಿ 1, ಹಸಿರು ಮೆಣಸು 2, ಬೆಳ್ಳುಳ್ಳಿ ಎಸಳು 6-8, ಶುಂಠಿ 1/2 ಇಂಚು, ಕಸ್ತೂರಿ ಬೀಜ ½ ಟೀಸ್ಪೂನ್, ಧನಿಯಾ ಪುಡಿ 2 ಚಮಚ, ಕೆಂಪು ಮೆಣಸಿನಕಾಯಿ ಪುಡಿ 1/2 ಚಮಚ, ಅರಿಶಿನ ಪುಡಿ ¼ ಟೀಸ್ಪೂನ್ , ಗರಂ ಮಸಾಲಾ ಪುಡಿ ½ ಟೀಸ್ಪೂನ್, ಸಕ್ಕರೆ 1 ಟೀ ಚಮಚ, ಎಣ್ಣೆ ಅಥವಾ ತುಪ್ಪ 3 ಚಮಚ, ಕೊತ್ತಂಬರಿ, ಲವಂಗ, ಹಸಿರು ಏಲಕ್ಕಿ, ಬೇ ಎಲೆಗಳು, ದಾಲ್ಚಿನ್ನಿ, ಉಪ್ಪು ಸ್ವಲ್ಪ ಸ್ವಲ್ಪ.

ತಯಾರಿಸುವ ವಿಧಾನ
* ಗೋಡಂಬಿ ಮಖಾನಾ ಕರ್ರೀ ಮಾಡಲು, ಮೊದಲು ಈರುಳ್ಳಿ, ಬೆಳ್ಳುಳ್ಳಿ ಮತ್ತು ಶುಂಠಿಯನ್ನು ಹೆಚ್ಚಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ.
* ನಂತರ ತೊಮ್ಯತೋಗಳನ್ನು ತೊಳೆದು ಬೇರೆಯಾಗಿ ರುಬ್ಬಿಕೊಳ್ಳಿ. 
* ಈಗ ನಾನ್ ಸ್ಟಿಕ್ ಪ್ಯಾನ್ ತೆಗೆದುಕೊಂಡು ಎಣ್ಣೆ ಹಾಕಿ, ಬಿಸಿಯಾದ ಮೇಲೆ ಗೋಡಂಬಿ ಪ್ರತ್ಯೇಕವಾಗಿ ಹುರಿದು, ನಂತರ ಮಖನಾ ಹಾಕಿ ಟೋಸ್ಟ್ ಮಾಡಿ. 
* ನಂತರ ಸಾಧಾರಣ ಶಾಖದಲ್ಲಿ ಎಣ್ಣೆ ಕಾಯಿಸಿಕೊಂಡು, ಅದಕ್ಕೆ ಬೇ ಎಲೆ, ಲವಂಗ, ದಾಲ್ಚಿನ್ನಿ ಮತ್ತು ಏಲಕ್ಕಿ ಹಾಕಿ ಸುವಾಸನೆ ಬರುವವರೆಗೆ ಹುರಿದುಕೊಳ್ಳಿ. 
* ಈಗ ಅದಕ್ಕೆ ಈರುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವವರೆಗೆ ಬೇಯಿಸಿ. * ನಂತರ ಕೆಂಪು ಮೆಣಸಿನಕಾಯಿ ಪುಡಿ, ಧನಿಯಾ ಪುಡಿ, ಅರಿಶಿನ ಪುಡಿ, ಕಸ್ತೂರಿ ಮೇಥಿ ಮತ್ತು ಗರಂ ಮಸಾಲಾ ಪುಡಿ ಹಾಕಿ ಫ್ರೈ ಮಾಡಿ. 
* ಅದಕ್ಕೆ  ಕ್ರೀಮ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಅದಕ್ಕೆ ಒಂದು ಕಪ್ ನೀರು, ಸಕ್ಕರೆ, ಉಪ್ಪು ಹಾಕಿ ಚೆನ್ನಾಗಿ ಬೇಯಿಸಿ.
* ಮಿಶ್ರಣ ಕುಡಿಯಲು ಆರಂಭವಾದಾಗ ಹುರಿದ ಗೋಡಂಬಿ ಮತ್ತು ಮಖಾನ ಹಾಕಿ ಬೇಯಿಸಿ, 2 ನಿಮಿಷಗಳ ನಂತರ ಕೆಳಗಿಳಿಸಿ. 
ಈಗ ರುಚಿರುಚಿಯಾದ ಕಾಜೂ ಮಖಾನಾ ಕರ್ರಿ ಸವಿಯಲು ಸಿದ್ಧ.

Trending News