'ರಾಜ'ನಿಲ್ಲದ ಚಂದನವನದ ಆ ಹನ್ನೆರಡು ವರ್ಷಗಳು

    

Updated: Apr 12, 2018 , 01:40 PM IST
'ರಾಜ'ನಿಲ್ಲದ ಚಂದನವನದ ಆ ಹನ್ನೆರಡು ವರ್ಷಗಳು

ಇಂದಿಗೆ ಬರೋಬ್ಬರಿ ಹನ್ನೆರಡು ವರ್ಷಗಳಾಯಿತು ಆ ರಾಜ ನಿಲ್ಲದ ಚಂದನವನಕ್ಕೆ, ಭಾರತೀಯ ಚಲನ ಚಿತ್ರರಂಗದಲ್ಲಿ ರಾಜಕುಮಾರನಿಗೆ ವಿಶಿಷ್ಟ ಸ್ಥಾನಮಾನವಿದೆ.ಬೆಳ್ಳಿ ಪರದೆಯಲ್ಲಿ ಅದು ಸಾಮಾಜಿಕ, ಪೌರಾಣಿಕ,ಹಾಗೂ ಐತಿಹಾಸಿಕ ಚಿತ್ರಗಳ ಪಾತ್ರಗಳನ್ನು ನಿರ್ಹಹಿಸುವ ಮೂಲಕ ತಮ್ಮದೇ ಆದ ಛಾಪನ್ನು ಮೂಡಿಸಿದ್ದರು,ಅಷ್ಟೇ ಅಲ್ಲದೆ  ಶಾಸ್ತ್ರಿಯ ಸಂಗೀತದಲ್ಲಿಯೂ ಪ್ರಾವಿನ್ಯತೆಯನ್ನು ಪಡೆದು ಹಿನ್ನಲೆ ಗಾಯಕನಾಗಿಯೂ ಯಶಸ್ವಿಯಾಗಿದ್ದರು.ಪ್ರಾರಂಭದಿಂದಲೂ ಸಹಿತ ಕನ್ನಡದ ಸಂಸ್ಕೃತಿಯ ಹಿರಿಮೆಯನ್ನು ಸಾರುವ ಚಿತ್ರಗಳಲ್ಲಿ ನಟಿಸಿ ಕನ್ನಡದ ರಾಯಬಾರಿಯಾಗಿದ್ದರು.

ರಾಜಕುಮಾರ್ ಏಪ್ರಿಲ್ 24 ರಂದು  1929 ರಲ್ಲಿ ಗಾಜನೂರ್ ನಲ್ಲಿ ಪುಟ್ಟಸ್ವಾಮಯ್ಯ ಮತ್ತು ಲಕ್ಷಮ್ಮ ದಂಪತಿಗಳಿಗೆ ಜನಿಸಿದರು.ಮೂಲತ ಗುಬ್ಬಿ ನಾಟಕ ಕಂಪನಿಯಿಂದ ತಮ್ಮ ಬಣ್ಣದ ಬದುಕಿಗೆ ಕಾಲಿಟ್ಟ ರಾಜಕುಮಾರ್ ಮುಂದೆ 1954 ರಲ್ಲಿ ಬೇಡರ ಕಣ್ಣಪ್ಪ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು.ಮುಂದೆ ಸಂಪತ್ತಿಗೆ ಸವಾಲ್ ಚಿತ್ರದ ಮೂಲಕ 1974 ರಲ್ಲಿ ಹುಟ್ಟಿದ್ದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎನ್ನುವ ಹಾಡಿನ ಮೂಲಕ ಗಾಯಕನಾಗಿಯೂ ತಮ್ಮ ಜನಪ್ರಿಯತೆಯನ್ನು ಪಡೆದರು. 

ರಾಜಕುಮಾರ್ ಕನ್ನಡ ಭಾಷಾ ಹೋರಾಟಕ್ಕೆ ಕೂಡಾ ಧುಮುಕಿ ಕನ್ನಡದ ಕಟ್ಟಾಳು ಎಂದು ಹೆಸರು ಪಡೆದರು.80 ರ ದಶಕದಲ್ಲಿ ಗೋಕಾಕ ಚಳುವಳಿಯಲ್ಲಿ ಧುಮುಕುವ ಮೂಲಕ ಕನ್ನಡವನ್ನು ಪ್ರಾಥಮಿಕ ಶಿಕ್ಷಣದಲ್ಲಿ ಕಡ್ಡಾಯ ಗೊಳಿಸುವ ಹೋರಾಟದಲ್ಲಿ ರಾಜ್ಯದೆಲ್ಲೆಡೆ ಸಂಚರಿಸಿ ಜಾಗೃತಿ ಮೂಡಿಸಿದರು.

ರಾಜಕುಮಾರರು ಭಾರತೀಯ ಚಲನ ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಅವರಿಗೆ ಪದ್ಮಭೂಷಣ, ದಾದಾಸಾಹೇಬ್ ಫಾಲ್ಕೆ, ನಾಡೋಜ, ಕೆಂಟಕಿ ಕರ್ನಲ್ ರಂತಹ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಇಂತಹ ಹಲವು ಅಪರೂಪದ ಪ್ರಶಸ್ತಿ ಸಾಧನೆಗಳಿಗೆ ಕಾರಣರಾದ ರಾಜಕುಮಾರ್ 2006 ರ ಏಪ್ರಿಲ್ 12 ರಂದು ಹೃದಯಾಘಾತದಿಂದ ಸಾವನ್ನಪ್ಪಿದರು. 

By continuing to use the site, you agree to the use of cookies. You can find out more by clicking this link

Close