ಆಸ್ಟಿಯೋಕ್ಲ್ಯಾಟೋಮಾ ಕಾಯಿಲೆಯಿಂದ ಗುಣಮುಖರಾದ ನಟಿ ರಮ್ಯಾ..! ಅದು ಹೇಗೆ ಅಂತೀರಾ?

 ಆಸ್ಟಿಯೋಕ್ಲ್ಯಾಟೋಮಾ ಎನ್ನುವ ಕಾಯಿಲೆಯಿಂದ ಬಳಲುತ್ತಿದ್ದ ಕಾರಣ ಅಂಬಿ ಅಂತ್ಯಕ್ರಿಯೆಗೆ ಪಾಲ್ಗೊಳ್ಳಲು ನಟಿ ರಮ್ಯಾಗೆ ಸಾಧ್ಯವಾಗಿರಲಿಲ್ಲ.ಈಗ ಅದರಿಂದ ಗುಣ ಮುಖರಾಗಿದ್ದಾರೆ.

Updated: Dec 6, 2018 , 05:36 PM IST
 ಆಸ್ಟಿಯೋಕ್ಲ್ಯಾಟೋಮಾ ಕಾಯಿಲೆಯಿಂದ ಗುಣಮುಖರಾದ ನಟಿ ರಮ್ಯಾ..! ಅದು ಹೇಗೆ ಅಂತೀರಾ?
Photo courtesy: Instagram

ಬೆಂಗಳೂರು:  ಆಸ್ಟಿಯೋಕ್ಲ್ಯಾಟೋಮಾ ಎನ್ನುವ ಕಾಯಿಲೆಯಿಂದ ಬಳಲುತ್ತಿದ್ದ ಕಾರಣ ಅಂಬಿ ಅಂತ್ಯಕ್ರಿಯೆಗೆ ಪಾಲ್ಗೊಳ್ಳಲು ನಟಿ ರಮ್ಯಾಗೆ ಸಾಧ್ಯವಾಗಿರಲಿಲ್ಲ.ಈಗ ಅದರಿಂದ ಗುಣ ಮುಖರಾಗಿದ್ದಾರೆ.

ಹಾಗಾದರೆ ಅದು ಹೇಗೆ ಅಂತೀರಾ? ಈಗ ಅವರು ತಮ್ಮ ಇನ್ಸ್ಟಾಗ್ರಾಂ ಸ್ಟೇಟಸ್ ನಲ್ಲಿ  ವೇಗವಾಗಿ ವಾಕ್ ಮಾಡುತ್ತಿರುವ ವಿಡಿಯೋವೊಂದನ್ನು ಹಂಚಿಕೊಂಡು " ಪ್ರತಿ ಹಂತದಲ್ಲಿಯೂ ಫಿಸಿಯೋಥೆರಫಿಯನ್ನು ಮಾಡಿಕೊಂಡ ನಂತರ ನಾನು ಇನ್ನು ಗಟ್ಟಿಯಾಗಿದ್ದೇನೆ. ಈ ವಿಚಾರವಾಗಿ ಹಕ್ಕಿ ಹಿಕ್ಕೆ ನನ್ನ ಮೇಲೆ ಬಿದ್ದರೂ ಸಹಿತ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ" ಎಂದು ಅವರು ಇನ್ಸ್ಟಾಸ್ಟೇಟಸ್ ನಲ್ಲಿ ಬರೆದುಕೊಂಡಿದ್ದಾರೆ. 

ಈ ಕಾಯಿಲೆಗೆ ಸಂಬಂಧಿಸಿದಂತೆ ನಟಿ ರಮ್ಯಾ ಅವರು ಅಕ್ಟೋಬರ್ 19 ರಂದು ಚಿಕಿತ್ಸೆ ಪಡೆಯುತ್ತಿರುವ ಚಿತ್ರವೊಂದನ್ನು ಅವರು ಇನ್ಸ್ಟಾಗ್ರಾಂನಲ್ಲಿ ಕಾಲಿನಲ್ಲಿ ದುರ್ಮಾಂಸದ ಬೃಹತ್ ಗೆಡ್ಡೆ ಬೆಳೆದುಕೊಂಡಿತ್ತು. ಆದರೆ ಇದು ಕ್ಯಾನ್ಸರ್ ಅಲ್ಲ. ಬಯೋಪ್ಸಿಗಾಗಿ ಎದುರು ನೋಡುತ್ತಿದ್ದೇನೆ ಎಂದು ಬರೆದುಕೊಂಡಿದ್ದರು. ಅಲ್ಲದೆ ತಮ್ಮ ಕಾಲಿಗೆ ಬ್ಯಾಂಡೇಜ್ ಸುತ್ತಿಕೊಂಡಿರುವ ಫೋಟೋವನ್ನು ಹಾಕಿಕೊಂಡು "ನಿಮ್ಮ ದೇಹದಲ್ಲಿ ನೋವು ಕಾಣಿಸಿಕೊಂಡ ಕೂಡಲೆ ವೈದ್ಯರನ್ನು ಸಂಪರ್ಕಿಸಿ. ನನ್ನಂತೆ ನಿರ್ಲಕ್ಷಿಸಬೇಡಿ" ಎಂಬ ಸಲಹೆಯನ್ನೂ ಸಹಿತ ನೀಡಿದ್ದರು.

ಈ ಕಾಯಿಲೆ ಸಂಬಂಧಿಸಿದಂತೆ ವೈದ್ಯರು  ಹೇಳುವ ಹಾಗೆ ಸ್ನಾಯು ರಜ್ಜುವಿನ ಕೋಶಕ್ಕೆ ಸಂಬಂಧಿಸಿದ ಗೆಡ್ಡೆ ಇದಾಗಿದ್ದು ಹತ್ತು ಲಕ್ಷ ಮಹಿಳೆಯರಲ್ಲಿ ಒಬ್ಬರಿಗೆ ಮಾತ್ರ ಈ ರೀತಿಯ ಸಮಸ್ಯೆ ಬರುವ ಸಾಧ್ಯತೆ ಇದೆ. ಸಲ್ಪ ಆರೈಕೆ ಮಾಡದಿದ್ದರೆ ಜೀವಕ್ಕೂ ಅಪಾಯಕಾರಿ ಎಂದು ಹೇಳಿದ್ದರು.  

 

By continuing to use the site, you agree to the use of cookies. You can find out more by clicking this link

Close