ಅಕ್ಟೋಬರ್ 18 ರಿಂದ ಅಬ್ಬರಿಸಲಿರುವ 'ದಿ ವಿಲನ್​' ಚಿತ್ರಕ್ಕೆ ಅಡ್ವಾನ್ಸ್​ ಟಿಕೆಟ್​ ಬುಕಿಂಗ್​..!

ಟೀಸರ್ ಮತ್ತು ಹಾಡುಗಳಿಂದ ಗಮನಸೆಳೆದಿರುವ ಈ ಚಿತ್ರ ಬಿಡುಗಡೆಗೂ ಮುನ್ನವೇ ಬಾಕ್ಸ್ ಆಫಿಸ್ ನಲ್ಲಿ ಆಡಿಯೋ ಮೂಲಕ ಸದ್ದು ಮಾಡಿದೆ.

Last Updated : Sep 20, 2018, 11:08 AM IST
ಅಕ್ಟೋಬರ್ 18 ರಿಂದ ಅಬ್ಬರಿಸಲಿರುವ 'ದಿ ವಿಲನ್​' ಚಿತ್ರಕ್ಕೆ ಅಡ್ವಾನ್ಸ್​ ಟಿಕೆಟ್​ ಬುಕಿಂಗ್​..! title=

ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಕಿಚ್ಚ ಸುದೀಪ್ ಅಭಿನಯದ ಪ್ರೇಮ್ ನಿರ್ದೇಶನದ ಬಹುನಿರೀಕ್ಷಿತ 'ದಿ ವಿಲನ್​' ಅಕ್ಟೋಬರ್ 18 ರಂದು ಆಯುಧ ಪೂಜೆ ದಿನ ನಿಮ್ಮೆಲ್ಲರನ್ನು ರಂಜಿಸಲು ತೆರೆಗೆ ಬರುತ್ತಿದ್ದು, ಈ ಸಿನಿಮಾ ಟಿಕೆಟ್​ನ ಅಡ್ವಾನ್ಸ್​ ಬುಕಿಂಗ್​ ಮಾತ್ರ ಎರಡು ವಾರ ಮೊದಲೇ ಆರಂಭವಾಗಲಿದೆ.

ಹೌದು, ಟೀಸರ್ ಮತ್ತು ಹಾಡುಗಳಿಂದ ಗಮನಸೆಳೆದಿರುವ ಈ ಚಿತ್ರ ಬಿಡುಗಡೆಗೂ ಮುನ್ನವೇ ಬಾಕ್ಸ್ ಆಫಿಸ್ ನಲ್ಲಿ ಆಡಿಯೋ ಮೂಲಕ ಸದ್ದು ಮಾಡಿರುವ ಈ ಚಿತ್ರಕ್ಕಾಗಿ ಎರಡು ವಾರ ಮೊದಲೇ ಅಡ್ವಾನ್ಸ್ ಬುಕ್ಕಿಂಗ್ ಮಾಡಲು ಚಿತ್ರ ತಂಡ ನಿರ್ಧರಿಸಿದೆ. ಅಕ್ಟೋಬರ್​ 2ರಿಂದ ಟಿಕೆಟ್​ಗಳನ್ನು ಮುಂಡಗವಾಗಿ ಬುಕ್​ ಮಾಡಿಕೊಳ್ಳಬಹುದಾಗಿದೆ. ಶಿವರಾಜ್​ಕುಮಾರ್​ ಹಾಗೂ ಸುದೀಪ್​  ಅಭಿನಯದ ಈ ಸಿನಿಮಾವನ್ನು ಮೊದಲ ದಿನವೇ ಮೊದಲ ಶೋ ನೋಡಲು ಬಯಸುವವರು ಅಕ್ಟೋಬರ್​ 2ರಂದೇ ಟಿಕೆಟ್​ ಖರೀದಿಸಬಹುದಾಗಿದೆ.

ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಇದೇ ಮೊದಲ ಬಾರಿಗೆ ಜೊತೆಯಾಗಿ ನಟಿಸಿದ್ದು, ಈಗ ಈ ಇಬ್ಬರು ಹಿರೋಗಳ ಅಭಿಮಾನಿಗಳು ಚಿತ್ರ ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಈಗ ಈ ಚಿತ್ರ ಬಿಡುಗಡೆಯಾಗುತ್ತಿದೆ. 

ಜೂನ್ ತಿಂಗಳಲ್ಲಿ ಬಿಡುಗಡೆಯಾದ ಈ ಚಿತ್ರದ ಎರಡು ಟೀಸರ್ ಗಳಲ್ಲಿ 24 ಗಂಟೆಯೊಳಗೆ ಒಂದು ಟೀಸರ್ 10 ಲಕ್ಷ ಹಾಗೂ ಇನ್ನೊಂದು ಟೀಸರ್ 15 ಲಕ್ಷ ತಲುಪಿತ್ತು. ಯ್ಯೂಟ್ಯೂಬ್ ಇತಿಹಾಸದಲ್ಲೇ ಅತ್ಯಂತ ವೇಗವಾಗಿ 10 ಲಕ್ಷ ವ್ಯೂ ತಲುಪಿದ ದಾಖಲೆ ನಿರ್ಮಿಸಿತ್ತು. 
 

Trending News