ಕುಟುಂಬದೊಂದಿಗೆ ಕ್ರೇಜಿಸ್ಟಾರ್ ಸೆಲ್ಫಿ; ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್

ಕ್ರೇಜಿಸ್ಟಾರ್ ಕುಟುಂಬದ ಅಪರೂಪದ ಫೋಟೋಗೆ ಅಭಿಮಾನಿಗಳಿಂದ ಮೆಚ್ಚುಗೆ.

Last Updated : Oct 22, 2018, 10:24 AM IST
ಕುಟುಂಬದೊಂದಿಗೆ ಕ್ರೇಜಿಸ್ಟಾರ್ ಸೆಲ್ಫಿ; ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್  title=
Pic: Facebook

ಬೆಂಗಳೂರು: ಚಂದನವನದಲ್ಲಿ ಕನಸುಗಳ ಬಿತ್ತುವ ಮೂಲಕ ಕನಸುಗಾರ ಎಂದೇ ಮನೆಮಾತಾದ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಕುಟುಂಬದೊಂದಿಗೆ ತೆಗೆದಿರುವ ಸೆಲ್ಫಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಹೌದು, ಕ್ರೇಜಿಸ್ಟಾರ್ ನ ಹಲವು ಕ್ರೇಜಿ ಫೋಟೋಗಳನ್ನು ನಾವು ನೋಡಿದ್ದೇವೆ. ಆದರೆ ಅವರು ಕುಟುಂಬದ ಜೊತೆಯಲ್ಲಿ ಕಾಣಿಸಿಕೊಳ್ಳುವಂತ ಫೋಟೋಗಳು ಅತಿ ವಿರಳ. ಇದೀಗ ಅವರು ಕುಟುಂಬದೊಂದಿಗೆ ಸೆಲ್ಫಿ ತೆಗೆದು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ಅಪರೂಪದ ಫೋಟೋಗೆ ಅಭಿಮಾನಿಗಳಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.

ವಾಸ್ತವವಾಗಿ, ಅಕ್ಟೋಬರ್ 18 ರಂದು ರವಿಚಂದ್ರನ್ ಅವರು ಎಲ್ಲಾ ಕ್ರೇಜಿ ಅಭಿಮಾನಿಗಳಿಗೆ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುತ್ತಾ ಈ ಫೋಟೋವನ್ನು ಹಂಚಿಕೊಂಡಿದ್ದಾರೆ.

Trending News