ಇಂದು ಡಿಸ್ಕವರಿ ವಿಲೇಜ್​​ನಲ್ಲಿ ದಿಗಂತ್-ಐಂದ್ರಿತಾ ಮೆಹಂದಿ ಶಾಸ್ತ್ರ!

ಪ್ರೇಮಿಗಳ ಸ್ವರ್ಗದಂತಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗಿರಿಧಾಮದಲ್ಲಿ ಕ್ಯೂಟ್ ಜೋಡಿ ಆ್ಯಂಡಿ ಹಾಗೂ ದಿಗ್ಗಿಯ ವಿವಾಹ ಕಾರ್ಯಕ್ರಮ ನೆರವೇರಲಿದೆ.

Last Updated : Dec 11, 2018, 03:34 PM IST
ಇಂದು ಡಿಸ್ಕವರಿ ವಿಲೇಜ್​​ನಲ್ಲಿ ದಿಗಂತ್-ಐಂದ್ರಿತಾ ಮೆಹಂದಿ ಶಾಸ್ತ್ರ! title=

ಬೆಂಗಳೂರು: ಸ್ಯಾಂಡಲ್‌ವುಡ್‌ನ ಕ್ಯೂಟ್ ಕಪಲ್ ದಿಗಂತ್ ಹಾಗೂ ಐಂದ್ರಿತಾ ರೇ ವಿವಾಹ ಕಾರ್ಯಕ್ರಮ ನಾಳೆ ಡಿಸ್ಕವರಿ ವಿಲೇಜ್ ನಲ್ಲಿ ಸಡಗರದಿಂದ ನಡೆಯಲಿದೆ. ಈ ಹಿನ್ನೆಲೆಯಲ್ಲಿ ವಿವಾಹ ಕಾರ್ಯಕ್ರಮದ ಭಾಗವಾಗಿ ಇಂದು ಸಂಜೆ ಮೆಹಂದಿ ಮತ್ತು ಹಳದಿ ಶಾಸ್ತ್ರ ನೆರವೇರಲಿದೆ. 

ಪ್ರೇಮಿಗಳ ಸ್ವರ್ಗದಂತಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗಿರಿಧಾಮದಲ್ಲಿ ಕ್ಯೂಟ್ ಜೋಡಿ ಆ್ಯಂಡಿ ಹಾಗೂ ದಿಗ್ಗಿಯ ವಿವಾಹ ಕಾರ್ಯಕ್ರಮ ನೆರವೇರಲಿದೆ. ನಂದಿ ಗಿರಿಧಾಮದ ತಪ್ಪಲಿನಲ್ಲಿರುವ ಡಿಸ್ಕವರಿ ವಿಲೇಜ್​​ನಲ್ಲಿ ವಿವಾಹ ಸಮಾರಂಭ ನಡೆಯಲಿದೆ. ನಿನ್ನೆಯೇ ಆ್ಯಂಡಿ ಹಾಗೂ ದಿಗಂತ್ ಕುಟುಂಬದವರು ಮದುವೆ ನಡೆಯುವ ಸ್ಥಳಕ್ಕೆ ಬಂದು ಸೇರಿದ್ದಾರೆ. ಈಗಾಗಲೇ ವಿವಾಹ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳೂ ಭರದಿಂದ ಸಾಗಿವೆ.

ಡಿ.11 ರಂದು ಬೆಂಗಾಲಿ ಸಂಪ್ರದಾಯದಂತೆ, ಡಿಸೆಂಬರ್ 12ರಂದು ಕೊಡವ ಸಂಪ್ರದಾಯದಂತೆ ದಿಗಂತ್​ ಹಾಗೂ ಐಂದ್ರಿತಾ ವಿವಾಹವಾಗಲಿದ್ದಾರೆ. ಮನಸಾರೆ, ಪಾರಿಜಾತ, ಪಂಚರಂಗಿ ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದ ನಟ ದಿಗಂತ್ ಹಾಗೂ ಐಂದ್ರಿತಾ ರೇ ಜೋಡಿಯ ನಿರ್ಮಲ ಪ್ರೀತಿಗೆ ಡಿಸೆಂಬರ್ 12 ರಂದು ಅಧಿಕೃತವಾಗಿ ಮದುವೆ ಮುದ್ರೆ ಬೀಳಲಿದೆ. 

Trending News