ಕಣ್ಸನ್ನೆ ಹುಡುಗಿ ಪ್ರಿಯಾ ಪ್ರಕಾಶ್ ಬಾಲಿವುಡ್'ನಲ್ಲಿ ನಟಿಸ್ತಾರಾ?

ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಕಣ್ಸನ್ನೆಯಿಂದಲೇ ಸಂಚಲನ ಮೂಡಿಸಿದ್ದ ಮಲೆಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್, ಇದೀಗ ಬಾಲಿವುಡ್ ಪ್ರವೇಶಿಸಲಿದ್ದಾರಂತೆ! 

Updated: Mar 12, 2018 , 02:39 PM IST
ಕಣ್ಸನ್ನೆ ಹುಡುಗಿ ಪ್ರಿಯಾ ಪ್ರಕಾಶ್ ಬಾಲಿವುಡ್'ನಲ್ಲಿ ನಟಿಸ್ತಾರಾ?

ನವದೆಹಲಿ : ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಕಣ್ಸನ್ನೆಯಿಂದಲೇ ಸಂಚಲನ ಮೂಡಿಸಿದ್ದ ಮಲೆಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್, ಇದೀಗ ಬಾಲಿವುಡ್ ಪ್ರವೇಶಿಸಲಿದ್ದಾರಂತೆ! 

ಇತ್ತೀಚಿನ ಅಂತೆ-ಕಂತೆಗಳ ಪ್ರಕಾರ ರೋಹಿತ್‌ ಶೆಟ್ಟಿ ನಿರ್ದೇಶನದ ಸಿಂಬಾ ಚಿತ್ರದಲ್ಲಿ ಬಾಲಿವುಡ್‌ ನಟ  ರಣವೀರ್‌ ಸಿಂಗ್‌ ಜತೆಗೆ ಪ್ರಿಯಾ ನಟಿಸಲಿದ್ದಾಳಂತೆ. BollywoodLife.com ಪ್ರಕಾರ ಗೋಲ್ ಮಾಲ್ ಅಗೈನ್ ಚಿತ್ರವನ್ನು ನಿರ್ದೇಶಿಸಿದ್ದ ರೋಧಿತ್ ಶೆಟ್ಟಿ ಈ ಚಿತ್ರ ನಿರ್ದೇಶಿಸುತ್ತಿದ್ದು, ಕರಣ್‌ ಜೋಹರ್‌ ಅವರ ಧರ್ಮಾ ಪ್ರೊಕ್ಷನ್ಸ್‌ ಸಂಸ್ಥೆ ಈ ಚಿತ್ರ ನಿರ್ಮಿಸಲಿದೆ. 

ಈ ವಿಚಾರವನ್ನು ಡೆಕನ್ ಕ್ರೋನಿಕಲ್ ಪತ್ರಿಕೆ ಕೂಡ ಬಹಿರಂಗಪಡಿಸಿದ್ದು, ಸಿಂಬಾ ಚಿತ್ರದಲ್ಲಿ  ನಾಯಕಿಯ ಪಾತ್ರಕ್ಕೆ ಅಷ್ಟೇನೂ ಪ್ರಾಮುಖ್ಯ ಇರುವುದಿಲ್ಲ; ಆದರೆ ಪ್ರಿಯಾ ಕೇವಲ ಒಂದೇ ರಾತ್ರಿಯಲ್ಲಿ ಅಂತರಜಾಲದ ಮೂಲಕ ಸೆನ್ಸೇಶನ್‌ ಕ್ರಿಯೇಟ್ ಮಾಡಿದ ಕಾರಣಕ್ಕೆ ಚಿತ್ರಕ್ಕೆ ಹೆಚ್ಚು ಬೆಂಬಲ ಸಿಗುವ  ನಿರೀಕ್ಷೆ ಇದೆ ಎನ್ನಲಾಗಿದೆ. ಕರಣ್‌ ಜೋಹರ್‌ ನಿರ್ಮಾಣದ ಈ ಚಿತ್ರದಲ್ಲಿ ನಟಿಸುವುದರಿಂದ ಪ್ರಿಯಾಗೆ ಬಾಲಿವುಡ್‌ನ‌ಲ್ಲಿ ಮತ್ತಷ್ಟು ಅವಕಾಶಗಳು ಸಿಗಲಿವೆಯೀ ಎಂದು ಕಾದು ನೋಡಬೇಕಿದೆ.