ಡಾ.ರಾಜಕುಮಾರ್ ರವರ ಕಾಲಿಗೆ ಬಿದ್ದ ಕ್ಷಣ ನೆನೆದ ಸೂಪರ್ ಸ್ಟಾರ್ ರಜನಿಕಾಂತ್

      

Updated: Dec 28, 2017 , 03:57 PM IST
ಡಾ.ರಾಜಕುಮಾರ್ ರವರ ಕಾಲಿಗೆ ಬಿದ್ದ ಕ್ಷಣ ನೆನೆದ ಸೂಪರ್ ಸ್ಟಾರ್ ರಜನಿಕಾಂತ್

ನವದೆಹಲಿ: ಸೂಪರ್ ಸ್ಟಾರ್ ರಜನಿಕಾಂತ್ ಗೆ ಜಗತ್ತಿನಲ್ಲೆಡೆ ಕೋಟ್ಯಾಂತರ ಅಭಿಮಾನಿಗಳಿದ್ದಾರೆ.ರಜನಿ ಚಿತ್ರಗಳು ಬಿಡುಗಡೆಯಾದರೆ ತಮಿಳುನಾಡಿನಲ್ಲಂತೂ ಸ್ವಯಂ ಘೋಷಿತ ರಜೆಯ ವಾತಾವರಣ ಉಂಟಾಗುತ್ತದೆ. ಇಂತಹ ಸ್ಟಾರ್ ಕೂಡಾ ತನ್ನ ಬಾಲ್ಯದ ದಿನಗಳಲ್ಲಿ ಸ್ಟಾರ್ ನಟರ ಕಾಲಿಗೆ ಬಿದ್ದು ನಮಸ್ಕಾರ ಮಾಡುವ ಕುತೂಹಲದ ಸಂಗತಿಯನ್ನು ರಜನಿ ಅಭಿಮಾನಿಗಳ ಎದುರು ಬಿಚ್ಚಿಟ್ಟಿದ್ದಾರೆ. 

ಚೆನ್ನೈನಲ್ಲಿ ಅಭಿಮಾನಿಗಳ ಭೇಟಿಯ ಸಂದರ್ಭದಲ್ಲಿ  ಮಾತನಾಡಿದ ರಜನಿ ನನಗೆ ನಿಮ್ಮ ಉತ್ಸಾಹ ಅರ್ಥವಾಗುತ್ತದೆ, ನಾನು ಕೂಡಾ ಬೆಂಗಳೂರಿನಲ್ಲಿನ ಬಾಲ್ಯದ ದಿನಗಳಲ್ಲಿ ನಾನು ಡಾ.ರಾಜಕುಮಾರರ ಅತಿ ದೊಡ್ಡ ಅಭಿಮಾನಿ,ಅವರು ಶಿವಾಜಿ ಗಣೇಶನ ಮತ್ತು ಎಂಜಿಆರ್ ಅವರ ಸಮ್ಮಿಲನ ಎಂದು ರಾಜಕುಮಾರನ್ನು ಗುಣಗಾನ ಮಾಡಿದರು.

ನಾನು 14-15 ವರ್ಷದ ಹುಡುಗನಾಗಿದ್ದಾಗ ರಾಜಕುಮಾರ್ ರವರು ಚಿತ್ರದ ಶತದಿನೋತ್ಸಕ್ಕೆ ಬರುತ್ತಿದ್ದರು,ಆಗ ಮೊದಲ ಬಾರಿಗೆ ನಾನು ಅವರನ್ನು ನೋಡಿದಾಗ, ಬೆಳ್ಳಿ ತೆರೆಯ ಮೇಲೆ ಬರುವ ಅವರ ಚಿತ್ರಣ ನನ್ನ ಕಣ್ಣ ಮುಂದೆ ಬಂದು, ನಾನು ಅವರನ್ನು ನಿಜವಾಗಿಯೂ ನೋಡುತ್ತಿದ್ದೇನೆ ಎನ್ನುವದನ್ನು ಮರೆತು, ಅವರ ಪಾದಗಳಿಗೆ ನಾನು ನಮಸ್ಕರಿಸಲು ಹೋಗಿದ್ದೆ ಎಂದು ರಜನಿಕಾಂತ್ ತಮ್ಮ ಬಾಲ್ಯದ ಸಿನಿಮಾ ನಟರ ಆರಾಧನೆಯ ದಿನಗಳನ್ನು ಮೆಳುಕುಹಾಕಿದರು.