ಬಹುನಿರೀಕ್ಷಿತ 'ರಾಜು ಕನ್ನಡ ಮೀಡಿಯಂ' ಚಿತ್ರ ಜ.19ಕ್ಕೆ ಬಿಡುಗಡೆ

ಬೆಂಗಳೂರು : ಬಹು ದಿನಗಳಿಂದ ಬಿಡುಗಡೆಯ ನಿರೀಕ್ಷೆಯಲ್ಲಿದ್ದ 'ರಾಜು ಕನ್ನಡ ಮೀಡಿಯಂ' ಚಲನಚಿತ್ರ ಜನವರಿ 19, 2018 ರಂದು ಬಿಡುಗಡೆಯಾಗಲಿದೆ.

'ಫಸ್ಟ್ rank ರಾಜು' ಖ್ಯಾತಿಯ ಗುರುನಂದನ್‌ ಅಭಿನಯದ "ರಾಜು ಕನ್ನಡ ಮೀಡಿಯಂ' ಚಿತ್ರ ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಭಾರೀ ಕುತೂಹಲ ಮೂಡಿಸಿದ್ದು, ನರೇಶ್ ಕುಮಾರ್ ನಿರ್ದೇಶನದ ಸಿನಿಮಾದಲ್ಲಿ ಕಿಚ್ಚ ಸುದೀಪ್ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. 

ಈಗಾಗಲೇ ಟೀಸರ್ಗಳ ಮೂಲಕ ಕುತೂಹಲ ಮೂಡಿಸಿರುವ ಈ ಚಿತ್ರದಲ್ಲಿ ಸುದೀಪ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆಗರ್ಭ ಶ್ರೀಮಂತ ವ್ಯಕ್ತಿಯ ಪಾತ್ರದಲ್ಲಿ ಕಿಚ್ಚನ ಗೆಟಪ್ ಮೋಡಿ ಮಾಡಿದೆ. ಹೀಗಾಗಿ, ಸುದೀಪ್ ಫ್ಯಾನ್ಸ್ ಈ ಸಿನಿಮಾದ ಮೇಲೆ ಬಹಳಷ್ಟು ನಿರೀಕ್ಷೆ ಇಟ್ಟಿಕೊಂಡಿದ್ದಾರೆ.

ರಾಜು ಕನ್ನಡ ಮೀಡಿಯಂ ನಲ್ಲಿ ಸ್ಚಾರ್ ಗಳ ನಟನೆ ಹೇಗೆ ವರ್ಕೌಟ್ ಆಗಲಿದೆ ಎಂಬುದನ್ನು ಶೀಘ್ರವೇ ತೆರೆಯ ಮೇಲೆ ಕಾಣಬಹುದಾಗಿದೆ. ಸಿನಿಮಾದಲ್ಲಿ `ರಂಗಿತರಂಗ' ಖ್ಯಾತಿಯ ಆವಂತಿಕಾ ಶೆಟ್ಟಿ ಚಿತ್ರದ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಆಶಿಕಾ ರಂಗನಾಥ್ ನಟನೆಯಿದೆ. ಕಿರಣ್ ರವೀಂದ್ರ ನಾಥ್ ಸಿನಿಮಾಗೆ ಸಂಗೀತ ನೀಡಿದ್ದಾರೆ. 

Section: 
English Title: 
`Raju Kannda Medium' film to be released on Jan.19
News Source: 
Home Title: 

ಬಹುನಿರೀಕ್ಷಿತ 'ರಾಜು ಕನ್ನಡ ಮೀಡಿಯಂ' ಚಿತ್ರ ಜ.19ಕ್ಕೆ ಬಿಡುಗಡೆ

ಬಹುನಿರೀಕ್ಷಿತ 'ರಾಜು ಕನ್ನಡ ಮೀಡಿಯಂ' ಚಿತ್ರ ಜ.19ಕ್ಕೆ ಬಿಡುಗಡೆ
Yes
Is Blog?: 
No
Facebook Instant Article: 
Yes