ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆಗಲಿದ್ದಾರೆ ಬಾಹುಬಲಿಯ 'ಬಲ್ಲಾಳದೇವ್'!

ಬಾಹುಬಲಿ ಚಿತ್ರದಲ್ಲಿ ಬಲ್ಲಾಳ ದೇವ್ ನಾಗಿ ಖ್ಯಾತಿಗಳಿಸಿದ್ದ ರಾಣಾ ದಗ್ಗುಬಟಿ ಈಗ ಎನ್ ಟಿ ರಾಮರಾವ್ ಅವರ ಜೀವನ ಕುರಿತಾದ ಚಿತ್ರದಲ್ಲಿ ಆಂದ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದನ್ನು ಅವರು ಈಗ ಟ್ವಿಟ್ಟರ್ ನಲ್ಲಿ ಈಗ ಅವರು ಹಂಚಿಕೊಂಡಿದ್ದಾರೆ.

Updated: Sep 12, 2018 , 06:39 PM IST
ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆಗಲಿದ್ದಾರೆ ಬಾಹುಬಲಿಯ 'ಬಲ್ಲಾಳದೇವ್'!

ಹೈದರಾಬಾದ್: ಬಾಹುಬಲಿ ಚಿತ್ರದಲ್ಲಿ ಬಲ್ಲಾಳ ದೇವ್ ನಾಗಿ ಖ್ಯಾತಿಗಳಿಸಿದ್ದ ರಾಣಾ ದಗ್ಗುಬಟಿ ಈಗ ಎನ್ ಟಿ ರಾಮರಾವ್ ಅವರ ಜೀವನ ಕುರಿತಾದ ಚಿತ್ರದಲ್ಲಿ ಆಂದ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದನ್ನು ಅವರು ಈಗ ಟ್ವಿಟ್ಟರ್ ನಲ್ಲಿ ಈಗ ಅವರು ಹಂಚಿಕೊಂಡಿದ್ದಾರೆ.

ಎನ್ಟಿ ಆರ್ ಪಾತ್ರದಲ್ಲಿ ನಂದಮೂರಿ ಬಾಲಕೃಷ್ಣ ಅವರು ನಿರ್ವಹಿಸುತ್ತಿದ್ದಾರೆ.ಈ ಚಿತ್ರದಲ್ಲಿ ಬಾಲಿವುಡ್ ನಟಿ ವಿದ್ಯಾಬಾಲನ್ ಅವರು ಎನ್.ಟಿ.ಆರ್ ಹೆಂಡತಿ ಬಸವತಾರಕಂ ಮತ್ತು ಬೆಂಗಾಳಿ ನಟಿ ಜಿಸ್ಸು ಸೆನ್ ಗುಪ್ತಾ ಅವರು ಎಲ್.ವಿ ಪ್ರಸಾದ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ಮೂಲಕ ಈ ನಟ ನಟಿಯರಿಬ್ಬರು ಇದೆ ಮೊದಲ ಬಾರಿಗೆ ತೆಲುಗು ಚಿತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಎನ್ ಟಿ ಆರ್ ಭಾರತೀಯ ಚಿತ್ರರಂಗ ಕಂಡಂತಹ ಮಹೋನ್ನತ ನಟರಲ್ಲಿ ಒಬ್ಬರು. ಅಲ್ಲದೆ ಎಂಜಿಆರ್,ರಾಜಕುಮಾರ್ ಒಳಗೊಂಡ ತ್ರಿಮೂರ್ತಿಗಳಲ್ಲಿ ಎನ್ಟಿ ಆರ್ ಕೂಡ ಒಬ್ಬರು.