ಹಾಲಿವುಡ್ ಗೆ ಎಂಟ್ರಿ ಕೊಟ್ಟ 'ಕಿಚ್ಚ ಸುದೀಪ್'

    

Manjunath Naragund Manjunath Naragund | Updated: Jan 30, 2018 , 01:49 PM IST
ಹಾಲಿವುಡ್ ಗೆ ಎಂಟ್ರಿ ಕೊಟ್ಟ 'ಕಿಚ್ಚ ಸುದೀಪ್'

ಬೆಂಗಳೂರು: ತಮ್ಮ ಮನೋಜ್ಞ ಅಭಿನಯದಿಂದ ಕೇವಲ ದಕ್ಷಿಣ ಭಾರತದ ಚಿತ್ರರಂಗ ಮಾತ್ರವಲ್ಲದೆ ಬಾಲಿವುಡ್ ನಲ್ಲ್ಲಿ ತಮ್ಮದೇ ಛಾಪು ಮೂಡಿಸಿರುವ ಕಿಚ್ಚ ಸುದೀಪ್ ಈಗ ಹಾಲಿವುಡ್ ರೈಸನ್ ಚಿತ್ರದಲ್ಲಿ ನಟಿಸುತ್ತಿರುವ ಸಂಗತಿ ಗಾಂಧಿ ನಗರದಲ್ಲಿ ಬಹಳ ಸುದ್ದಿ ಮಾಡುತ್ತಿದೆ. ಈಗಾಗಲೇ  ರೈಸನ್ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು ಇದರಿಂದಾಗಿ ಈ ಸುದ್ದಿ ಕಿಚ್ಚನ್ ಅಭಿಮಾನಿಗಳಿಗೆ ಇನ್ನಷ್ಟು ಕುತೂಹಲ ಹೆಚ್ಚಿಸಿದೆ.

ಎಡ್ಡಿ ಆರ್ಯ ನಿರ್ದೇಶನ ಮಾಡುತ್ತಿರುವ ಹಾಲಿವುಡ್ ನ ರೈಸನ್, ಸೈಂಟಿಫಿಕ್ ಫಿಕ್ಷನ್ ಥ್ರಿಲ್ಲರ್ ಎಂದು  ಹೇಳಾಗುತ್ತಿರುವ ಈ ಚಿತ್ರದಲ್ಲಿ ಸುದೀಪ ಸೇನಾ ಅಧಿಕಾರಿಯ ಪಾತ್ರವನ್ನು ಅವರು ನಿರ್ವಹಿಸಲಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಪ್ರೇಮ್ ನಿರ್ದೇಶನದ ದಿ ವಿಲನ್ ಚಿತ್ರದಲ್ಲಿ ಬ್ಯುಸಿಯಾಗಿರುವ ಈ ಸ್ಯಾಂಡಲ್ ವುಡ್ ಸ್ಟಾರ್ ಈ ಚಿತ್ರ ಮುಗಿದ ನಂತರ ಈ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ತಿಳಿದುಬಂದಿದೆ. ಬಾಲಿವುಡ್ ನಲ್ಲಿ ಪೂಂಕ್, ರಕ್ತ ಚರಿತ್ರೆ, ರನ್, ಬಾಹುಬಲಿ ಮತ್ತು ತೆಲುಗಿನ ಈಗಾ ಚಿತ್ರದ ಮೂಲಕ ಗಮನ ಸೆಳಿದಿದ್ದ ಈ ನಟ ಈಗ ಹಾಲಿವುಡ್ ಚಿತ್ರ ರೈಸನ್ ಚಿತ್ರದ ಮೂಲಕ ಅಲ್ಲಿ ಕೂಡ ತಮ್ಮ ಛಾಪನ್ನು ಮೂಡಿಸುವ ಸಾದ್ಯತೆ ಇದೆ.