‘ರಾಜರಥ’ ಚಿತ್ರಕ್ಕಾಗಿ ಆರ್ಮುಗಂ ರವಿಶಂಕರ್ ಹಾಡಿರೋ ಸೂಪರ್ ಹಿಟ್ ಸಾಂಗ್ ನಿಮಗಾಗಿ...

ಸ್ಯಾಂಡಲ್ ವುಡ್'ನಲ್ಲಿ ರಂಗಿತರಂಗ ಚಿತ್ರದ ನಂತರ ಭಂಡಾರಿ ಸಹೋದರರ 'ರಾಜರಥ' ಸಿನಿಮಾ ಮಾರ್ಚ್.23ರಂದು ಬಿಡುಗಡೆಯಾಗಲಿದೆ. 

Updated: Mar 13, 2018 , 03:19 PM IST
‘ರಾಜರಥ’ ಚಿತ್ರಕ್ಕಾಗಿ ಆರ್ಮುಗಂ ರವಿಶಂಕರ್ ಹಾಡಿರೋ ಸೂಪರ್ ಹಿಟ್ ಸಾಂಗ್ ನಿಮಗಾಗಿ...

ಬೆಂಗಳೂರು : ಸ್ಯಾಂಡಲ್ ವುಡ್'ನಲ್ಲಿ ರಂಗಿತರಂಗ ಚಿತ್ರದ ನಂತರ ಭಂಡಾರಿ ಸಹೋದರರ 'ರಾಜರಥ ಸಿನಿಮಾ ಮಾರ್ಚ್.23ರಂದು ಬಿಡುಗಡೆಯಾಗಲಿದೆ. 

ಒಂದಾನೊಂದು ಕಾಲದಲ್ಲಿ, ಒಂದಾನೊಂದು ಊರಲ್ಲಿ, ಒಬ್ಳು ಸುಂದರವಾದ ಹುಡ್ಗಿ. ಅವಳಿಗೆ ಒಬ್ಬ ಹುಡ್ಗ ಇದ್ದ. ಆದ್ರೆ ಅವ್ನು ಹೀರೊ ಅಲ್ಲ...’ – ಹೀಗೆ ಸಣ್ಣದೊಂದು ಕನ್‌ಪ್ಯೂಷನ್‌ ಇಟ್ಟುಕೊಂಡೇ ಶುರುವಾಗುವ ‘ರಾಜರಥ’ ಸಿನಿಮಾದ ಟ್ರೇಲರ್‌ ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಸಾಕಷ್ಟು ಸುದ್ದಿಮಾಡಿದೆ. ಇದರೊಂದಿಗೆ ಇದೀಗ ಈ ಚಿತ್ರಕ್ಕಾಗಿ ಆರುಮುಗ ರವಿಶಂಕರ್ ಹಾಡಿರುವ 'ಗಂಡಕ...' ಹಾಡಿನ ವಿಡಿಯೋ ಸಖತ್ ಹಿಟ್ ಆಗಿದೆ.

ಕನ್ನಡ ಮತ್ತು ತೆಲುಗೂ ಭಾಷೆಯಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರದಲ್ಲಿ ರಂಗಿ ತರಂಗ ಚಿತ್ರ ಖ್ಯಾತಿಯ ನಿರೂಪ್ ಭಂಡಾರಿ ಮತ್ತು ಆವಂತಿಕಾ ಶೆಟ್ಟಿ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ರವಿಶಂಕರ್ ಅವರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಆ ಪಾತ್ರ ಬಹಳ ಮುಖ್ಯ ಪಾತ್ರ ಎಂಡು ಚಿತ್ರದ ನಿರ್ದೇಶಕರು ಹೇಳಿದ್ದಾರೆ. 

ಈ ಚಿತ್ರಕ್ಕೆ ಅನೂಪ್ ಭಂಡಾರಿ ಸಂಗೀತ ಒದಗಿಸಿದ್ದು ಹಿನ್ನೆಲೆ ಸಂಗೀತ ಅಜನೀಶ್ ಲೋಕನಾಥ್ ನೀಡಿದ್ದಾರೆ. ಸಿನಿಮಾಕ್ಕೆ ವಿಲಿಯಮ್ ಡೇವಿಡ್ ಅವರ ಛಾಯಾಗ್ರಹಣವಿದೆ. ಒಟ್ಟಾರೆ ಕನ್ನಡ ಮತ್ತು telugu ಭಾಷೆಗಳಲ್ಲಿ ಏಕಕಾಲದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರ ಸಿನಿಪ್ರಿಯರಲ್ಲಿ ಸಖತ್ ಕ್ರೇಜ್ ಹುಟ್ಟುಹಾಕಿದೆ.