ಅಕ್ಟೋಬರ್ 18 ರಿಂದ ವಿಶ್ವದಾದ್ಯಂತ 'ದಿ ವಿಲನ್' ಅಬ್ಬರ!

ಇಡೀ ದಕ್ಷಿಣ ಭಾರತವೇ ನೋಡಲು ತುದಿಗಾಲಲ್ಲಿ ಕಾದು ಕುಳಿತಿರುವ ಸಿನಿಮಾವೆಂದರೆ ಅದು ದಿ ವಿಲನ್.ಅಷ್ಟರ ಮಟ್ಟಿಗೆ ಈಗ ಅದು ಚಿತ್ರ ಪ್ರೇಮಿಗಳಿಗೆ ಹುಚ್ಚನನ್ನು ಹಿಡಿಸಿದೆ.

Updated: Sep 13, 2018 , 02:14 PM IST
ಅಕ್ಟೋಬರ್ 18 ರಿಂದ ವಿಶ್ವದಾದ್ಯಂತ 'ದಿ ವಿಲನ್' ಅಬ್ಬರ!
Photo:facebook

ಬೆಂಗಳೂರು: ಇಡೀ ದಕ್ಷಿಣ ಭಾರತವೇ ನೋಡಲು ತುದಿಗಾಲಲ್ಲಿ ಕಾದು ಕುಳಿತಿರುವ ಸಿನಿಮಾವೆಂದರೆ ಅದು ದಿ ವಿಲನ್.ಅಷ್ಟರ ಮಟ್ಟಿಗೆ ಈಗ ಅದು ಚಿತ್ರ ಪ್ರೇಮಿಗಳಿಗೆ ಹುಚ್ಚನನ್ನು ಹಿಡಿಸಿದೆ.

ಈಗಾಗಲೇ ಟಿಸರ್ ಮತ್ತು ಹಾಡುಗಳಿಂದ ಗಮನಸೆಳೆದಿರುವ ಈ ಚಿತ್ರ ಬಾಕ್ಸ್ ಆಫಿಸ್ ನಲ್ಲಿ ಈಗಾಗಲೇ  ಬಿಡುಗಡೆಗೂ ಮುನ್ನವೇ ಆಡಿಯೋ ಮೂಲಕ ಸದ್ದು ಮಾಡಿದೆ.ಈ ಸಿನಿಮಾದ ಇನ್ನೊಂದು ವಿಶೇಷವೆಂದರೆ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಇದೇ ಮೊದಲ ಬಾರಿಗೆ ಜೊತೆಯಾಗಿ ನಟಿಸುತ್ತಿದ್ದಾರೆ.ಆದ್ದರಿಂದ ಈಗ ಈ ಇಬ್ಬರು ಹಿರೋಗಳ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಕನ್ನಡ ತೆಲುಗು ತಮಿಳು ಭಾಷೆಗಳಲ್ಲಿ ಈಗ ಈ ಚಿತ್ರ ಬಿಡುಗಡೆಯಾಗುತ್ತಿದೆ. ಮುಂದಿನ ಅಕ್ಟೋಬರ್ 18 ರಂದು ಆಯುಧ  ಪೂಜೆ ದಿನ 'ದಿ ವಿಲನ್' ನಿಮ್ಮೆಲ್ಲರನ್ನು ರಂಜಿಸಲು ತೆರೆಗೆ ಬರುತ್ತಿದ್ದಾನೆ, ಆದ್ದರಿಂದ ನೋಡಿರಿ ಮತ್ತು ಚಿತ್ರಕ್ಕೆ ಹರಿಸಿರಿ.