ಇಂದಿನಿಂದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕನ್ನಡ ಚಲನಚಿತ್ರ ಕಪ್ ಕಲರವ!

ಇಂದಿನಿಂದ ಬಹುನಿರೀಕ್ಷಿತ ಕನ್ನಡ ಚಲನಚಿತ್ರ ಕಪ್ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.

Updated: Sep 8, 2018 , 12:22 PM IST
ಇಂದಿನಿಂದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕನ್ನಡ ಚಲನಚಿತ್ರ ಕಪ್ ಕಲರವ!
Photo:twitter

ಬೆಂಗಳೂರು: ಇಂದಿನಿಂದ ಬಹುನಿರೀಕ್ಷಿತ ಕನ್ನಡ ಚಲನಚಿತ್ರ ಕಪ್ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಈ ಕಪ್ ನ ವಿಶೇಷವೆಂದರೆ  ಇಲ್ಲಿ ಸೆಹವಾಗ್,ಲ್ಯಾನ್ಸ್ ಕ್ಲೂಸನರ್, ಗಿಬ್ಸ್,ದಿಲ್ಶಾನ್ ನಂತಹ ಅತಿರಥ ಮಹಾರಥ ಕ್ರಿಕೆಟ್ ತಾರೆಯರು ಚಂದನವನದ ತಾರೆಯರ ಜೊತೆ  ಕ್ರಿಕೆಟ್ ಆಡಲಿದ್ದಾರೆ.
ಸೆಪ್ಟೆಂಬರ್ 8  ಮತ್ತು  9 ರಂದು ನಡೆಯಲಿರುವ ಈ ಈ ಕಪ್ ಹತ್ತು ಓವರ್ ಗಳ ಪಂದ್ಯಾವಳಿಯನ್ನು ಒಳಗೊಂಡಿರುತ್ತದೆ.

ಈಗಾಗಲೇ ಚಿನ್ನಸ್ವಾಮಿ ಮೈದಾನ ಈಗ ಇಂತಹ ಅಭೂತಪೂರ್ವ ಕಪ್ ಗೆ ಸಜ್ಜಾಗಿದೆ.ಈ ಕುರಿತು ಟ್ವೀಟ್ ಮಾಡಿರುವ ಸುದೀಪ" ಅಂತಿಮವಾಗಿ ಇದು ನಾಳೆಯಿಂದ ನಡೆಯುತ್ತಿದೆ.ಇದಕ್ಕೆಲ್ಲ ಶ್ರಮವಹಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.

ಈ ಪಂದ್ಯಾವಳಿಯಲ್ಲಿ ಚಂದನವನದ ತಾರೆಯರುಗಳಾದ ಗಣೇಶ್,ಪುನೀತ್ ರಾಜ್ ಕುಮಾರ್.ಸುದೀಪ್,ಶಿವರಾಜ ಕುಮಾರ್ ,ಉಪೇಂದ್ರ,ಯಶ್, ತಂಡಗಳ ನಾಯಕರಾಗಿರುತ್ತಾರೆ.

By continuing to use the site, you agree to the use of cookies. You can find out more by clicking this link

Close