ಪ್ರಧಾನಿ ಮೋದಿ ಪಾತ್ರದಲ್ಲಿ ನಟ ವಿವೇಕ್ ಒಬೆರಾಯ್, ಫಸ್ಟ್ ಲುಕ್ ಔಟ್..!

 ಪ್ರಧಾನಿ ನರೇಂದ್ರ ಮೋದಿಯವರ ಜೀವನಚರಿತ್ರೆ ಆಧಾರಿತ ಚಲನಚಿತ್ರದ  ಫಸ್ಟ್ ಲುಕ್  ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ನರೇಂದ್ರ ಮೋದಿ ಪಾತ್ರದಲ್ಲಿ ಬಾಲಿವುಡ್ ನಟ ವಿವೇಕ್ ಒಬೆರಾಯ್ ನಟಿಸಲಿದ್ದಾರೆ.

Last Updated : Jan 7, 2019, 06:16 PM IST
 ಪ್ರಧಾನಿ ಮೋದಿ ಪಾತ್ರದಲ್ಲಿ ನಟ ವಿವೇಕ್ ಒಬೆರಾಯ್, ಫಸ್ಟ್ ಲುಕ್ ಔಟ್..!  title=
Photo courtesy: Twitter

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಜೀವನಚರಿತ್ರೆ ಆಧಾರಿತ ಚಲನಚಿತ್ರದ  ಫಸ್ಟ್ ಲುಕ್  ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ನರೇಂದ್ರ ಮೋದಿ ಪಾತ್ರದಲ್ಲಿ ಬಾಲಿವುಡ್ ನಟ ವಿವೇಕ್ ಒಬೆರಾಯ್ ನಟಿಸಲಿದ್ದಾರೆ.

ಚಲನಚಿತ್ರ ವಿಮರ್ಶಕ ಮತ್ತು ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಈಗ ಚಿತ್ರದ ಮೊದಲ ಲುಕ್ ನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ."ವಿವೇಕ್ ಒಬೆರಾಯ್ ಅವರು ' ಪಿಎಂ ನರೇಂದ್ರ ಮೋದಿ' ಎನ್ನುವ ಚಿತ್ರದ ಶೀರ್ಷಿಕೆಯಡಿಯಲ್ಲಿ ಚಿತ್ರದ ಮೊದಲ ಲುಕ್ ನ್ನು  23  ಭಾಷೆಗಳಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಾಡ್ನವಿಸ್ ಅವರ ಮೂಲಕ ಬಿಡುಗಡೆಯಾಯಿತು.. ಸುರೇಶ ಒಬೆರಾಯ್ ಮತ್ತು ಸಂದೀಪ್ ಸಿಂಗ್ ಅವರು  ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ "ಎಂದು ಬರೆದುಕೊಂಡಿದ್ದಾರೆ. 

ಈ ಚಿತ್ರವು ಎಂ.ಸಿ ಮೇರಿ ಕೋಮ್ ಚಿತ್ರವನ್ನು ನಿರ್ದೇಶಿಸಿದ್ದ  ಒಮಂಗ್ ಕುಮಾರ್ ಅವರು ಮತ್ತೆ ಜೀವನ ಚರಿತ್ರೆಯ ಆಧಾರದ ಮೇಲೆ ಚಿತ್ರವೊಂದನ್ನು ನಿರ್ದೇಶಿಸುತ್ತಿದ್ದಾರೆ. ಪ್ರಧಾನಿ ಮೋದಿಯ ಜೀವನವನ್ನು ಆಧರಿಸಿದ ಈ ಚಿತ್ರ 'ಪ್ರಧಾನಿ ನರೇಂದ್ರ ಮೋದಿ' ಎಂದು ಹೆಸರಿಸಲಾಗಿದೆ. ಈ ತಿಂಗಳು ಚಿತ್ರೀಕರಣ ನಡೆಯಲಿದೆ. 

ಈ ವರ್ಷ ಹಲವು ರಾಜಕೀಯ ಬಯೋಪಿಕ್ ಆಧಾರಿತ ಚಿತ್ರಗಳು ತೆರೆಗೆ ಬರುತ್ತಿವೆ ಅದರಲ್ಲಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಎನ್ನುವ ಮನಮೋಹನ್ ಸಿಂಗ್ ಅವರ ಚಿತ್ರ ಜೊತೆಗೆ ಬಾಳ್ ಠಾಕ್ರೆ ಕುರಿತ ಚಿತ್ರವು ಕೂಡ ತೆರೆಗೆ ಬರುತ್ತಿದೆ.

Trending News