'102 ನಾಟ್ ಔಟ್' ಸಿನಿಮಾ ಹಾಡು ನೋಡಿ; ಅಮಿತಾಬ್ ಭೇಟಿ ಮಾಡಿ!

ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಮತ್ತು ಹಿರಿಯ ನಟ ರಿಷಿ ಕಪೂರ್ 27 ವರ್ಷಗಳ ನಂತರ ಮತ್ತೆ ಬೆಳ್ಳಿಪರದೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. 

Updated: Apr 16, 2018 , 03:40 PM IST
'102 ನಾಟ್ ಔಟ್' ಸಿನಿಮಾ ಹಾಡು ನೋಡಿ; ಅಮಿತಾಬ್ ಭೇಟಿ ಮಾಡಿ!
ಸಂಗ್ರಹ ಚಿತ್ರ

ನವದೆಹಲಿ: ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಮತ್ತು ಹಿರಿಯ ನಟ ರಿಷಿ ಕಪೂರ್ 27 ವರ್ಷಗಳ ನಂತರ ಮತ್ತೆ ಬೆಳ್ಳಿಪರದೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಕಳೆದ ಕೆಲವು ದಿನಗಳ ನಂತರ, ಇವರಿಬ್ಬರು ಅಭಿನಯಿಸಿರುವ '102 ನಾಟ್ ಔಟ್' ಚಿತ್ರದ ಟ್ರೇಲರ್ ಮತ್ತು ಹಾಡನ್ನು ಬಿಡುಗಡೆ ಮಾಡಲಾಗಿದೆ. ಇದನ್ನು ಅಭಿಮಾನಿಗಳೂ ಸಹ ತುಂಬಾ ಇಷ್ಟಪಟ್ಟಿದ್ದಾರೆ. ಇದರೊಂದಿಗೆ, ಈ ಇಬ್ಬರೂ ನಟರು ತಂದೆಯ ಮಗನ ಪಾತ್ರದಲ್ಲಿ ಮತ್ತೆ ತೆರೆಯ ಮೇಲೆ ಕಾಣಿಸಿಕೊಳ್ಳಲು ಸಿದ್ಧರಾಗಿದ್ದಾರೆ. 

ಈ ಚಿತ್ರದ ಪ್ರಮುಖ ಅಂಶ ಏನೆಂದರೆ, ಅಮಿತಾಬ್ ಬಚ್ಚನ್ 102 ವರ್ಷದ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ರಿಷಿ ಕಪೂರ್ 75 ವರ್ಷದ ಮಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಮತ್ತೊಂದು ಹಾಡು 'ಬಾಡುಂಬ' ಟೀಸರ್ ಇದೀಗ  ಬಿಡುಗಡೆಯಾಗಿದೆ.

ಅಮಿತಾಬ್ ಬಚ್ಚನ್ ಅವರು ತಮ್ಮ ಅಫಿಶಿಯಲ್ ಟ್ವಿಟ್ಟರ್ ಅಕೌಂಟ್ನಲ್ಲಿ ಈ ಚಿತ್ರದ ಹಾಡಿನ ಟೀಸರ್ ಪೋಸ್ಟ್ ಮಾಡಿದ್ದು, ಅದರಲ್ಲಿ "ಬಾಡುಂಬಾ ಹಾಡಿನ ಝಲಕ್ ನೋಡಿ ಮತ್ತು ನನ್ನೊಂದಿಗೆ #MyBadumbaaaStep ಸ್ಪರ್ಧೆಯಲ್ಲಿ ಭಾಗವಹಿಸಿ, ನನ್ನನ್ನು ಭೇಟಿ ಮಾಡುವ ಅವಕಾಶ ಪಡೆಯಿರಿ" ಎಂದು ಬರೆದಿದ್ದಾರೆ.

ಚಿತ್ರದ ಈ ಹಾಡು ಸಖತ್ ಎನೆರ್ಜೆಟಿಕ್ ಆಗಿದ್ದು, ನಿಮ್ಮ ಮನಸ್ಸೂ ಕೂಡ ಡ್ಯಾನ್ಸ್ ಮಾಡಲು ಉತ್ಸುಕವಾಗುತ್ತದೆ. ಈ ಹಾಡಿನಲ್ಲಿ, 102 ವರ್ಷದ ತಂದೆ, 75 ವರ್ಷದ ಮಗನಿಗೆ ಜೀವನದಲ್ಲಿ ಗೆಲುವು ಸಾಧಿಸಲು ಹೇಗಿರಬೇಕೆಂಬುದನ್ನು ತಿಳಿಸುತ್ತಾರೆ.

'ಓ ಮೈ ಗಾಡ್' ಚಿತ್ರದ ನಂತರ ನಿರ್ದೇಶಕ ಉಮೇಶ್ ಶುಕ್ಲಾ 27 ವರ್ಷಗಳ ನಂತರ ಈ ಸೂಪರ್ಸ್ಟಾರ್ ಜೋಡಿಯನ್ನು ಈ ಚಿತ್ರದಲ್ಲಿ ಒಟ್ಟುಗೂಡಿಸಿದ್ದಾರೆ. ಚಿತ್ರ ಮೇ 4 ರಂದು ಬಿಡುಗಡೆಗೊಳ್ಳಲಿದೆ. ಅಮರ್ ಅಕ್ಬರ್ ಆಂಥೋನಿ, ಕಭೀ ಕಭೀ ಮುಂತಾದ ಸ್ಮರಣೀಯ ಚಲನಚಿತ್ರಗಳ ನಂತರ ಈ ಜೋಡಿ ಮತ್ತೊಮ್ಮೆ ಬೆಳ್ಳಿ ಪರದೆಯಲ್ಲಿ ಕಾಣಿಸಿಕೊಳ್ಳಲು ಸಿದ್ಧವಾಗಿದೆ.

By continuing to use the site, you agree to the use of cookies. You can find out more by clicking this link

Close