ಜೆಡಿಎಸ್ ಪರ ಪ್ರಚಾರಕ್ಕೆ ಬರಲಿದ್ದಾರೆಯೇ ತೆಲುಗು ಪವರ್ ಸ್ಟಾರ್ ಪವನ್ ಕಲ್ಯಾಣ್?

     

Updated: Jan 11, 2018 , 07:14 PM IST
ಜೆಡಿಎಸ್ ಪರ ಪ್ರಚಾರಕ್ಕೆ ಬರಲಿದ್ದಾರೆಯೇ ತೆಲುಗು ಪವರ್ ಸ್ಟಾರ್ ಪವನ್ ಕಲ್ಯಾಣ್?

ತಮ್ಮ ಮಗ ನಿಖಿಲ್ ಕುಮಾರ್ ಮೊದಲ ಚಿತ್ರ 'ಜಾಗ್ವಾರ್' ಬಿಡುಗಡೆ ವೇಳೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಸ್ವತಃ ತಾವೇ  ತೆಲುಗು ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರನ್ನು ಭೇಟಿಯಾಗಿದ್ದರು. 

ಇದೀಗ ನಿನ್ನೆಯಷ್ಟೇ ಬಿಡುಗಡೆಯಾದ ಪವನ್ ಕಲ್ಯಾಣ್ ಅವರ 'ಅಜ್ಞಾತ ವಾಸಿ' ಚಿತ್ರಕ್ಕೆ ಶುಭಕೋರಿ ಎಚ್ಡಿಕೆ ಟ್ವೀಟ್ ಮಾಡಿದ್ದಾರೆ. ಟ್ವೀಟ್ ನಲ್ಲಿ "ನನ್ನ ಪ್ರಿಯ ಸ್ನೇಹಿತ ಮತ್ತು ಸಹೋದರ @ ಪವನ್ ಕಲ್ಯಾಣ್ಗೆ # ಅಜ್ಞಾತ ವಾಸಿಗೆ ಎಲ್ಲಾ ಅದೃಷ್ಟ ಮತ್ತು ಶಕ್ತಿಯನ್ನು ಬಯಸುತ್ತೇನೆ. ಈ ಚಲನಚಿತ್ರವು ನಿಮಗೆ ಮನ್ನಣೆ ಮತ್ತು ಹೆಚ್ಚಿನ ಶಕ್ತಿಯನ್ನು ತರುತ್ತದೆ" ಎಂದು ತಿಳಿಸಿದ್ದಾರೆ. 

ಈಗಾಗಲೇ ಪವನ್ ಕಲ್ಯಾಣ್ ಜೊತೆ ಕುಮಾರಸ್ವಾಮಿ ಮಾತುಕತೆ ನಡೆಸಿದ್ದಾರೆ ಎಂಬ ಗುಮಾನಿ ಹರಿದಾಡುತ್ತಿತ್ತು. ಇದೀಗ ಟ್ವೀಟ್ ಮೂಲಕ  ಪವನ್ ಕಲ್ಯಾಣ್ ಚಿತ್ರಕ್ಕೆ ಹಾರೈಸಿರುವುದು  ಜೆಡಿಎಸ್ ಪರ ಪ್ರಚಾರಕ್ಕೆ  ತೆಲುಗು ಪವರ್ ಸ್ಟಾರ್ ಪವನ್ ಕಲ್ಯಾಣ್ ಬರಲಿದ್ದಾರೆಯೇ ಎಂಬ ಅನುಮಾನವನ್ನು ಮತ್ತಷ್ಟು ಬಳಗೊಲಿಸಿದೆ.