ಶಾರುಖ್ ಖಾನ್ ಜೊತೆ ಅಭಿನಯಿಸುವುದೆಂದರೆ ಅತಿ ಸುಲಭ -ಕಾಜೋಲ್

    

Manjunath Naragund Manjunath Naragund | Updated: Jan 11, 2018 , 08:46 PM IST
ಶಾರುಖ್ ಖಾನ್ ಜೊತೆ ಅಭಿನಯಿಸುವುದೆಂದರೆ ಅತಿ ಸುಲಭ -ಕಾಜೋಲ್

ಮುಂಬೈ: ಶಾರುಖ್ ಖಾನ್ -ಕಾಜೋಲ್ ಜೋಡಿ ಬಾಲಿವುಡ್ ಸಿನಿಪ್ರೇಕ್ಷಕರಿಗೆ ಅತಿ ಹೆಚ್ಚು ಮೋಡಿ ಮಾಡಿದ ಜೋಡಿ. ಇವರ ಸಿನಿಮಾಗಳು ಬಂದ್ರೆ ಇಂದಿಗೂ ಕ್ಯೂನಲ್ಲಿ ನಿಲ್ಲುವ ಅಭಿಮಾನಿಗಳು ಸಾಕಷ್ಟಿದ್ದಾರೆ. ಅದರಲ್ಲೂ ಈ ಜೋಡಿಯ ರೋಮಾಂಟಿಕ್ ಚಿತ್ರಗಳಂತೂ ಇಂದಿಗೂ ಕೂಡಾ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೆ ಉಳಿದಿವೆ. 

ಈ ಹಿಂದೆ ದಿವಾಲೆ ಮೂಲಕ ಮತ್ತೆ ಒಂದಾಗಿದ್ದ ಈ ಜೋಡಿ ಮತ್ತೆ ಝೀರೋ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ,ಈ ಚಿತ್ರದಲ್ಲಿ ಕಾಜೋಲ್, ಶಾರುಖ್ ಖಾನ್ ಜೊತೆ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಕುರಿತಾಗಿ ಪ್ರತಿಕ್ರಯಿಸಿರುವ ಕಾಜೋಲ್ ಶಾರುಖ್ ಖಾನ್ ಜೊತೆ ನಟಿಸುವುದು ಅತಿ ಸುಲಭ, ಯಾವುದೇ ಕಾರ್ಯವಿರಲಿ ಅದರಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಾರೆ ಎಂದು ಬಾಲಿವುಡ್ ಬಾದಷಾನನ್ನು ಕುರಿತು ಹೊಗಳಿದ್ದಾರೆ. ಅಲ್ಲದೆ ಈ ಸಿನಿಮಾ ಕುಚ್ ಕುಚ್ ಹೋತಾ ಹೈ ಚಿತ್ರದ ಭಾಗ ಎರಡರಂತಿದೆ ಎಂದು ತಿಳಿಸಿದ್ದಾರೆ.

ಇದೆ ಚಿತ್ರದಲ್ಲಿ ಶಾರುಖ್ ಜೊತೆಗೆ ಅನುಷ್ಕಾ ಶರ್ಮಾ, ಕತ್ರಿನಾ ಕೈಫ್, ರಾಣಿ ಮುಖರ್ಜೀ ಕೂಡಾ ಅಭಿನಯಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.