ಹಲ್ಲು ಉಜ್ಜುವುದರಿಂದ ನಿಮ್ಮ ಹೃದಯದ ಆರೋಗ್ಯವೂ ವೃದ್ಧಿ!

ನೀವು ನಿಮ್ಮ ಹಲ್ಲುಗಳನ್ನು ಉಜ್ಜುವುದರಿಂದ ಹಲ್ಲು ಹುಳುಕಾಗುವುದನ್ನು ತಡೆದು ಬಾಯಿಯ ಶುಚಿತ್ವವನ್ನಷ್ಟೇ ಕಾಪಾಡುವುದಲ್ಲದೆ, ಹೃದಯಕ್ಕೆ ಉತ್ತಮ ಆರೋಗ್ಯವನ್ನೂ ನೀಡುತ್ತದೆ.

Updated: Jan 2, 2018 , 06:07 PM IST
ಹಲ್ಲು ಉಜ್ಜುವುದರಿಂದ ನಿಮ್ಮ ಹೃದಯದ ಆರೋಗ್ಯವೂ ವೃದ್ಧಿ!
ಸಾಂದರ್ಭಿಕ ಚಿತ್ರ

ನವ ದೆಹಲಿ : ನೀವು ನಿಮ್ಮ ಹಲ್ಲುಗಳನ್ನು ಉಜ್ಜುವುದರಿಂದ ಹಲ್ಲು ಹುಳುಕಾಗುವುದನ್ನು ತಡೆದು ಬಾಯಿಯ ಶುಚಿತ್ವವನ್ನಷ್ಟೇ ಕಾಪಾಡುವುದಲ್ಲದೆ, ಹೃದಯಕ್ಕೆ ಉತ್ತಮ ಆರೋಗ್ಯವನ್ನೂ ನೀಡುತ್ತದೆ. 

ಇದಕ್ಕೆ ಸಂಬಂಧಿಸಿದಂತೆ ವಿಜ್ಞಾನಿಗಳು ಒಂದು ಸ್ಮಾರ್ಟ್ ಟೂತ್ ಬ್ರಷ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಅದು ದೇಹದ ಪ್ರಮುಖ ಬದಲಾವಣೆಗಳ ಮೇಲೆ ಕಣ್ಣಿಡಲಿದ್ದು, ನಿಮ್ಮ ಲಾಲಾರಸದಿಂದ ಹೃದಯದ ತೊಂದರೆಗಳನ್ನು ಪತ್ತೆಹಚ್ಚಲಿದೆ. 

ಈ ಸಾಧನವು ಪ್ರತಿನಿತ್ಯ ಅತಿ ಸುಲಭವಾಗಿ ಹೃದಯ ಪರಿಶೀಲನೆ ನಡೆಸಲಿದ್ದು, ಹೃದ್ರೋಗಿಗಳು  ಸಮಸ್ಯೆಗೆ ಅಗತ್ಯವಿರುವಂತೆ ಅವರು ಔಷಧಿಗಳನ್ನು ಸೇವಿಸಲು ಸಹಕರಿಸಲಿದೆ. 

ಸ್ಪೇನ್ ನ ಹಾಸ್ಪಿಟಲ್ ರಾಮನ್ ವೈ ಕ್ಯಾಜಲ್ನ ವಿಜ್ಞಾನಿಗಳ ಪ್ರಕಾರ, ಲಾಲಾರಸದಲ್ಲಿನ ಸೋಡಿಯಂ ಮಟ್ಟಗಳು ಸಮಸ್ಯೆಗಳ ಮುಂಚಿನ ಎಚ್ಚರಿಕೆಯನ್ನು ನೀಡುತ್ತದೆ ಎಂದಿದ್ದಾರೆ. 

"ಅವರ ಹೃದಯದ ಬಡಿತ, ಒತ್ತಡ ಮತ್ತು ಲಾಲಾರಸದಿಂದ ಕೆಲವು ಜೈವಿಕ ಮಾದರಿಗಳ ಬಗ್ಗೆ ಮಾಹಿತಿ ಪಡೆಯುವುದರೊಂದಿಗೆ, ರೋಗಿಯು ತನ್ನ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾದಷ್ಟು ಸಣ್ಣಪುಟ್ಟ ಬದಲಾವಣೆಗಳನ್ನು ಕೈಗೊಂಡು ಕಾರ್ಯಗತಗೊಳಿಸಬಹುದಾಗಿದೆ'' ಎಂದು ಆಸ್ಪತ್ರೆ ರಾಮನ್ ವೈ ಕ್ಯಾಜಲ್ನ ಕಾರ್ಡಿಯಾಲಜಿಸ್ಟ್ ಅಲ್ವಾರೊ ಮಾರ್ಕೊ ಹೇಳಿದ್ದಾರೆ.

ಈ ಬ್ರಷ್ ನಿಂದಾಗಿ ರೋಗಿಗಳು ತಮ್ಮ ಆರೋಗ್ಯ ಸ್ಥಿತಿಯನ್ನು ತಿಳಿದುಕೊಳ್ಳಲು ಆಸ್ಪತ್ರೆಗೆ ಹೋಗಿ ಪರೀಕ್ಷೆಗಳಿಗೆ ಒಳಗಾಗಿ ವರದಿಗಾಗಿ ಕಾಯಬೇಕಾದ ಅನಿವಾರ್ಯತೆಯನ್ನು ನಿವಾರಿಸಲಿದೆ. 

"ನಮ್ಮ ರೋಗಿಗಳು ಹೆಚ್ಚಿನ ಹೃದಯದ ಬಡಿತ ಅಥವಾ ಒತ್ತಡದಲ್ಲಿರುವುದು ಕಂಡುಬಂದರೆ, ಅದರ ಪ್ರಕಾರ ನಾವು ಚಿಕಿತ್ಸೆಯನ್ನು ಸರಿಹೊಂದಿಸುತ್ತೇವೆ" ಎಂದು ಮಾರ್ಕೊ ಹೇಳಿದ್ದಾರೆ.