ಒತ್ತಡ ಉಂಟಾಗಲು ಕಾರಣಗಳೇನು ಗೊತ್ತಾ!

ನೀವು ಆರೋಗ್ಯವಂತರಾಗಿರ ಬೇಕೇ? ಹಾಗಾದರೆ ಮೊದಲು ಒತ್ತಡದಿಂದ ದೂರವಿರಲು ಪ್ರಯತ್ನಿಸಿ.

Updated: Jul 6, 2018 , 07:13 PM IST
ಒತ್ತಡ ಉಂಟಾಗಲು ಕಾರಣಗಳೇನು ಗೊತ್ತಾ!

ಹೆಚ್ಚು ಮಾತನಾಡುವುದು ಒಳ್ಳೆಯದಲ್ಲ, ಆದರೆ ಸ್ನೇಹಿತರೊಂದಿಗೆ ಮುಕ್ತವಾಗಿ ಮಾತನಾಡುವುದು ನಿಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ನಿಮಗೆ ತಿಳಿದಿದೆಯೇ. ವಾಸ್ತವವಾಗಿ, ನೀವು ನಿಮ್ಮ ಹೃದಯದಲ್ಲಿ ನಿಗ್ರಹಿಸಲು ಪ್ರಯತ್ನಿಸುವ ಯಾವುದೇ ವಿಷಯವಾದರೂ ಅದು ನಿಮ್ಮನ್ನು ಮಾನಸಿಕವಾಗಿ ಕುಗ್ಗಿಸುವುದು ಮಾತ್ರವಲ್ಲ, ನಿಮ್ಮಲ್ಲಿ ದೈಹಿಕ ಸಮಸ್ಯೆಗಳು ಹೆಚ್ಚಾಗುವಂತೆ ಮಾಡುತ್ತವೆ.

ನಿಮ್ಮ ಹೃದಯದಲ್ಲಿರುವ ಒತ್ತಡವು ನಿಮ್ಮ ದೇಹದಲ್ಲಿ ಕೆಟ್ಟ ಪ್ರಭಾವ ಬೀರುವ ಮೂಲಕ ನಿಮ್ಮ ಒತ್ತಡ ಮಟ್ಟವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಸಣ್ಣ ವಯಸ್ಸಿನಲ್ಲಿಯೇ ರಕ್ತದೊತ್ತಡ, ಸಕ್ಕರೆ ಕಾಯಿಲೆಯಂತಹ ಕಾಯಿಲೆಗಳು ಬರುತ್ತವೆ. ಒತ್ತಡವು ನಿಮ್ಮ ವೃತ್ತಿ ಜೀವನ ಮತ್ತು ವೈಯಕ್ತಿಕ ಜೀವನದ ಮೇಲೆ ಹಲವು ರೀತಿಯ ಕೆಟ್ಟ ಪರಿಣಾಮಗಳನ್ನು ಉಂಟುಮಾಡುತ್ತವೆ. 

ನೀವು ನಿಮ್ಮ ಸ್ನೇಹಿತರು, ಕುಟುಂಬ ಅಥವಾ ಕಚೇರಿಗೆ ವಿಷಯಕ್ಕೆ ಸಂಬಂಧಿಸಿದ ಮನಸ್ಸಿನ ಒತ್ತಡಗಳನ್ನು ಯಾರೊಂದಿಗೂ ಹಂಚಿಕೊಳ್ಳದೆ ರಹಸ್ಯವಾಗಿಡಲು ಪ್ರಯತ್ನಿಸಿದರೆ, ಆಗ ಋಣಾತ್ಮಕ ಆಲೋಚನೆಗಳು ನಿಮ್ಮಲ್ಲಿ ಬೆಳೆಯುತ್ತವೆ. ಕೋಪ ಮತ್ತು ಕಿರಿಕಿರಿಯು ಹೆಚ್ಚಾಗುತ್ತದೆ.

ಮನಸ್ಸಿನಲ್ಲಿ ಹೆಚ್ಚು ಒತ್ತಡ ಹೊಂದಿರುವ ಜನರು, ಅವರು ಕೆಲಸದಲ್ಲಿ ಗಮನ ಕೊಡಲು ಸಾಧ್ಯವಾಗುವುದಿಲ್ಲ. ಇದರಿಂದ ಅವರ ಬೆಳವಣಿಗೆ ಕೂಡ ಕುಂಠಿತವಾಗುತ್ತದೆ.

ಬಹಿರಂಗವಾಗಿ ಮಾತನಾಡುವವರು, ಕಡಿಮೆ ಒತ್ತಡದ ಮಟ್ಟವನ್ನು ಹೊಂದಿರುತ್ತಾರೆ. ಈ ಕಾರಣದಿಂದ, ಅವರು ಎಂತಹದ್ದೇ ಸವಾಲುಗಳಿದ್ದರೂ ಚೆನ್ನಾಗಿ ನಿರ್ವಹಿಸುತ್ತಾರೆ.  

ಒತ್ತಡ ಕಡಿಮೆ ಮಾಡಲು ಹೀಗೆ ಮಾಡಿ
* ಮೊದಲು ನಿಮ್ಮ ಒತ್ತಡಕ್ಕೆ ಕಾರಣವೇನು ಎಂಬುದನ್ನು ಅರ್ಥ ಮಾಡಿಕೊಳ್ಳಿ. 
* ಒತ್ತಡದ ರೋಗಲಕ್ಷಣಗಳನ್ನು ಗುರುತಿಸಿ- ಒತ್ತಡವು ದೈಹಿಕ ಮತ್ತು ಭಾವನಾತ್ಮಕ ಎರಡೂ ರೀತಿಯಲ್ಲೂ ಕಂಡು ಬರುತ್ತವೆ. 

 

ಒತ್ತಡವು ಜನರ ಮೇಲೆ ಪ್ರಭಾವ ಬೀರುವ ಕೆಲವು ಸಾಮಾನ್ಯ ವಿಧಾನಗಳು ಇಲ್ಲಿವೆ:
ಭೌತಿಕ ಲಕ್ಷಣಗಳು:

 • ಉದ್ವೇಗ
 • ಹಸಿವಾಗದೇ ಇರುವುದು
 • ತೂಕ ಹೆಚ್ಚಾಗುವುದು ಅಥವಾ ನಷ್ಟ
 • ನಿದ್ರೆ ಸಮಸ್ಯೆಗಳು
 • ತಲೆನೋವು, ಬೆನ್ನು ನೋವು, ಹೊಟ್ಟೆ ಸಮಸ್ಯೆಗಳು

ದೈಹಿಕ ಚಿಹ್ನೆಗಳು:

 • ಒಬ್ಬರ ಭಾವನೆಗಳನ್ನು ಕಡೆಗಣಿಸುವುದು
 • ಶಕ್ತಿಯಿಲ್ಲದ ಭಾವನೆ
 • ಕೋಪ
 • ದುಃಖ ಅಥವಾ ಅಳುವುದು
 • ಚಿಂತೆ

* ಅಲ್ಪಾವಧಿಯ ಒತ್ತಡದ ಕೆಲವು ಕಾರಣಗಳನ್ನು ಅರ್ಥಮಾಡಿಕೊಳ್ಳಿ: ಅಲ್ಪಾವಧಿಯ ಒತ್ತಡ ಕ್ಷಣಿಕ ಆದರೆ ಶಕ್ತಿಯುತವಾಗಿದೆ. ಇವು ಅಲ್ಪಾವಧಿಯ ಒತ್ತಡಗಳು

 • ವಾದಗಳು
 • ತುಂಬಾ ಕಡಿಮೆ ಸಮಯದಲ್ಲಿ ಹೆಚ್ಚು ಕೆಲಸ

* ದೀರ್ಘಕಾಲದ ಒತ್ತಡದ ಮೂಲಗಳು

 • ಪ್ರೀತಿಪಾತ್ರರನ್ನು ಅಥವಾ ನಿಮ್ಮ ಹತ್ತಿರದವರ ಮರಣ
 • ದೀರ್ಘಾವಧಿಯ ಅನಾರೋಗ್ಯ
 • ಹಣಕಾಸಿನ ತೊಂದರೆಗಳು
 • ಕೆಲಸ ಅಥವಾ ಮನೆಯಲ್ಲಿ ದೀರ್ಘಕಾಲದ ಸಮಸ್ಯೆಗಳು
 • ಋಣಾತ್ಮಕ ಚಿಂತನೆ ಅಥವಾ ನಿರಾಶಾವಾದ ದೃಷ್ಟಿಕೋನ