ಹಸಿರು ಚಹಾ ಸೇವನೆ ಆರೋಗ್ಯಕರ

ಇದು ನಮ್ಮ ದೇಹದಲ್ಲಿರುವ ಬೇಡದ ಬೊಜ್ಜು ಅಥವಾ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕರಗಿಸುವಲ್ಲಿ ಸಹಾಯಕ.

Updated: Dec 29, 2017 , 03:39 PM IST
ಹಸಿರು ಚಹಾ ಸೇವನೆ ಆರೋಗ್ಯಕರ

ಹಸಿರು ಚಹಾ ಒಂದು ಆರೋಗ್ಯಕರ ಪಾನೀಯವಾಗಿದೆ. ಹಸಿರು ಚಹಾ ಸೊಪ್ಪನ್ನು ಬಿಸಿ ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ಇರುವ ಪ್ರಯೋಜನಗಳನ್ನು ತಿಳಿದರೆ ನೀವು ಕಂಡಿತಾ ಇದನ್ನು ಅಭ್ಯಾಸ ಮಾಡಿಕೊಳ್ಳುತ್ತೀರ. ಹಸಿರು ಚಹಾದ ಕೆಲವು ಔಷಧೀಯ ಗುಣಗಳನ್ನು ತಿಳಿಯಿರಿ.

* ಕ್ಯಾನ್ಸರ್ ನಿರೋಧಕ - ಹಸಿರು ಚಹಾದಲ್ಲಿ ವಿಟಮಿನ್ ''ಇ' ಮತ್ತು 24 ಪಟ್ಟು ಹೆಚ್ಚು ಪ್ರಮಾಣದಲ್ಲಿ 'ಸಿ' ಜೀವಸತ್ವವನ್ನು ಹೊಂದಿರುವುದರಿಂದ ಇದು ಕ್ಯಾನ್ಸರ್ ಜೀವಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ. 

* ಬೊಜ್ಜು ಕರಗಿಸುತ್ತದೆ - ಇದು ನಮ್ಮ ದೇಹದಲ್ಲಿರುವ ಬೇಡದ ಬೊಜ್ಜು ಅಥವಾ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕರಗಿಸುವಲ್ಲಿ ಸಹಾಯಕ. ಹೃದಯಾಘಾತ ಮತ್ತು ಸ್ಟ್ರೋಕ್ ಮತ್ತಿತರ ಅಪಾಯವನ್ನು ತಡೆಗಟ್ಟುವಲ್ಲಿ ಸಹಾಯಕವಾಗಿದೆ.

* ನಿಮ್ಮನ್ನು ಚುರುಕಾಗಿರುಸುತ್ತದೆ - ಗ್ರೀನ್ ಟೀನಲ್ಲಿನ ಸಂಯುಕ್ತಗಳು ಬ್ರೇನ್ ಫಂಕ್ಷನ್ ಸುಧಾರಿಸಲು ಮತ್ತು ನೀವು ಚುರುಕಾದಂತೆ ಮಾಡಬಹುದು.  ಹಸಿರು ಚಹಾವು ಕಾಫಿಗಿಂತ ಕಡಿಮೆ ಕೆಫಿನ್ ಅನ್ನು ಹೊಂದಿರುತ್ತದೆ. ಇದು ಅಮೈನೊ ಆಸಿಡ್ ಎಲ್-ಥೈನೈನ್ ಅನ್ನು ಹೊಂದಿದೆ, ಇದು ಮೆದುಳಿನ ಕಾರ್ಯವನ್ನು ಸುಧಾರಿಸಲು ಕೆಫೀನ್ನೊಂದಿಗೆ ಸಂಯೋಗ ಹೊಂದಿ ಕಾರ್ಯನಿರ್ವಹಿಸುತ್ತದೆ.

* ಯೌವ್ವನ ಉಳಿಸಿಕೊಳ್ಳಲು - ಸದಾ ಯುವಕ-ಯುವತಿಯರಂತೆ ಕಾಣುವುದು ಯಾರಿಗೆ ತಾನೇ ಬೇಡ... ಹಸಿರು ಚಹಾದಲ್ಲಿರುವ ಮತ್ತೊಂದು ವಿಶೇಷ ಗುಣವೆಂದರೆ ನಿಯಮಿತವಾಗಿ ಹಸಿರು ಚಹಾ ಕುಡಿಯುವುದರಿಂದ ಅದು ನಮ್ಮಲ್ಲಿರುವ ಯೌವ್ವನವನ್ನು ಕಾಪಾಡುತ್ತದೆ.

* ರೋಗ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸುತ್ತದೆ - ವಿಟಮಿನ್ 'ಸಿ' ಹಿಸ್ಟಮಿನ್ ಬಳಕೆಯ ವಿನಾಯಿತಿ ಹೆಚ್ಚಿಸಲು ಹಸಿರು ಚಹಾ ಸಹಾಯ ಮಾಡುತ್ತದೆ. ಇದರಿಂದ ಶೀತ & ಫ್ಲೂಗಳ ವಿರುದ್ದ ಹೋರಾಡಲು ದೇಹಕ್ಕೆ ಬೇಕಾದ ಶಕ್ತಿಯನ್ನು ಒದಗಿಸುತ್ತದೆ. 

* ದಂತದ ಆರೋಗ್ಯವನ್ನು ಸುಧಾರಿಸುತ್ತದೆ - ಗ್ರೀನ್ ಟೀ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ, ಇದು ದಂತ ಆರೋಗ್ಯವನ್ನು ಸುಧಾರಿಸುತ್ತದೆ. ಹಸಿರು ಚಹಾದಲ್ಲಿನ ಕ್ಯಾಟ್ಚಿನ್ಸ್ ಬ್ಯಾಕ್ಟೀರಿಯಾ ಮತ್ತು ಕೆಲವು ವೈರಸ್ಗಳ ಬೆಳವಣಿಗೆಯನ್ನು ಪ್ರತಿಬಂಧಿಸುತ್ತದೆ. ಇದು ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ದಂತ ಆರೋಗ್ಯದಲ್ಲಿನ ಸುಧಾರಣೆಗೆ ಕಾರಣವಾಗುತ್ತದೆ.

* ಗ್ರೀನ್ ಟೀ ಮಧುಮೆಹವನ್ನು ನಿಯಂತ್ರಿಸುತ್ತದೆ - ಕೆಲವು ಪ್ರಯೋಗಗಳ ಪ್ರಕಾರ ಹಸಿರು ಚಹಾವು ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ ಎಂದು ತಿಳಿದುಬಂದಿದೆ. ಹೀಗಾಗಿ ಇದು ಡಯಾಬಿಟಿಸ್ ರೋಗಿಗಳಿಗೆ ಒಂದು ಉತ್ತಮ ಪಾನೀಯ ಎಂದು ಹೇಳಬಹುದು.  

* ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ - ಹಸಿರು ಚಹಾ ಹೆಚ್ಚಿದ ತೂಕ ನಷ್ಟಕ್ಕೆ ಕಾರಣವಾಗುತ್ತದೆ ಎಂದು ಕೆಲವು ಅಧ್ಯಯನಗಳು ತೋರಿಸುತ್ತವೆ. ಅಪಾಯಕಾರಿ ಕಿಬ್ಬೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಇದು ವಿಶೇಷವಾಗಿ ಪರಿಣಾಮಕಾರಿಯಾಗಿದೆ. 

 

By continuing to use the site, you agree to the use of cookies. You can find out more by clicking this link

Close