ಕೆಲವು ಸಾಮಾನ್ಯ ಕಾಯಿಲೆಗಳಿಗೆ ಇಲ್ಲಿದೆ ಸರಳ ಮನೆ-ಮದ್ದು

ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗೂ ಪ್ರತಿನಿತ್ಯ ವೈದ್ಯರ ಬಳಿ ಓಡಾಡುವುದು ಇಂದಿನ ದಿನಗಳಲ್ಲಿ ಸಾಮಾನ್ಯವಾಗಿ ಹೋಗಿದೆ.

Yashaswini V Yashaswini V | Updated: Sep 7, 2018 , 07:29 AM IST
ಕೆಲವು ಸಾಮಾನ್ಯ ಕಾಯಿಲೆಗಳಿಗೆ ಇಲ್ಲಿದೆ ಸರಳ ಮನೆ-ಮದ್ದು

ಅಂಗೈಯಲ್ಲಿ ಮನೆ ಮದ್ದು ಇದ್ದರೆ ಮುಂಗೈನಲ್ಲಿ ಆರೋಗ್ಯ ಇರುತ್ತೆ ಅಂತ ನಮ್ಮ ಹಿರಿಯರು ಹಿಂದಿನಿಂದಲೂ ಹೇಳಿಕೊಂಡು ಬಂದಿದ್ದಾರೆ. ಆದರೆ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗೂ ಪ್ರತಿನಿತ್ಯ ವೈದ್ಯರ ಬಳಿ ಓಡಾಡುವುದು ಇಂದಿನ ದಿನಗಳಲ್ಲಿ ಸಾಮಾನ್ಯವಾಗಿ ಹೋಗಿದೆ.

ಎಷ್ಟೋ ಮಂದಿಗೆ ಮನೆಯ ಆಹಾರ ಪದ್ಧತಿ ಹಾಗೂ ಅಡುಗೆಗೆ ಬಳಸುವ ವಸ್ತುಗಳಲ್ಲೇ ಔಷಧೀಯ ಗುಣಗಳು ಇವೆ ಎಂಬುದು ತಿಳಿದಿದ್ದರೂ, ಆ ವಸ್ತುಗಳಲ್ಲಿ ಯಾವ ರೀತಿಯ ಗುಣಗಳಿವೆ. ಆ ವಸ್ತು ಕೆಮ್ಮು, ನೆಗಡಿ, ಬಿಕ್ಕಳಿಕೆ, ತಲೆ ನೋವು ಈ ರೀತಿ ಸಾಮಾನ್ಯವಾಗಿ ಬರುವ ಖಾಯಿಲೆಗಳನ್ನು ಹೇಗೆ ಗುಣಪಡಿಸಬಲ್ಲದು ಎಂಬುದು ತಿಳಿದಿರುವುದಿಲ್ಲ. ಕೆಲವೊಮ್ಮೆ ಅಂತಹ ಸಮಯದಲ್ಲಿ ಯಾವ ರೀತಿಯ ಆಹಾರ ಸೇವಿಸಿದರೆ ಅದು ಗುಣವಾಗುತ್ತದೆ ಎಂಬುದು ತಿಳಿದಿರುವುದಿಲ್ಲ. 

ಅಂತಹ ಕೆಲವು ಸಾಮಾನ್ಯ ರೋಗಗಳಿಗೆ ಇಲ್ಲಿದೆ ಸರಳ ಮನೆ-ಮದ್ದು:

 • ಕಫ/ಕೆಮ್ಮು ಬಂದರೆ ಸೇವಿಸಿ ಶುಂಠಿ ಕಷಾಯ.
 • ಮೂಲವ್ಯಾಧಿಯೇ ನಿವಾರಣೆಗೆ ನಿತ್ಯ ಸೇವಿಸಿ ಎಳ್ಳು.
 • ನಿಶಕ್ತಿ ನಿವಾರಣೆಗೆ ಸೇವಿಸಿ ಆಕಳ ಹಾಲು.
 • ಅಲರ್ಜಿ ಹೋಗಲಾಡಿಸಲು ಅಮೃತ ಬಳ್ಳಿ ಕಷಾಯ ಸೇವಿಸಿ.
 • ರಕ್ತ ಹೀನತೆ ಇದ್ದಲ್ಲಿ ಪಾಲಕ್ ಸೊಪ್ಪನ್ನು ಸೇವಿಸಿ.
 • ಪ್ರತಿನಿತ್ಯ ಬೆಳ್ಳುಳ್ಳಿ ಬಳಸುವುದರಿಂದ ಬೊಜ್ಜನ್ನು ನಿಯಂತ್ರಿಸಬಹುದು.
 • ಮಕ್ಕಳು ನಿದ್ದೆಯಲ್ಲಿ ಹಾಸಿಗೆ ಮೇಲೆ ಮೂತ್ರ ಮಾಡುವುದನ್ನು ತಪ್ಪಿಸಲು ನಿತ್ಯ ಕುಡಿಸಿ ಜೇನು.
 • ಅಡುಗೆ ಮಾಡುವಾಗ ಲವಂಗವನ್ನು ಬಳಸುವುದರಿಂದ ಬಾಯಿ ಮತ್ತು ಗಂಟಲಿನ ಆರೋಗ್ಯ ಉತ್ತಮವಾಗಿರುತ್ತದೆ. 
 • 3 ತಿಂಗಳವರೆಗೆ 8-10 ಕರಿಬೇವಿನ ಎಲೆಗಳನ್ನು ಪ್ರತಿದಿನ ಬೆಳ್ಳೆಗ್ಗೆ ತಿಂದರೆ ಮಧುಮೇಹವನ್ನು ತಡೆಗಟ್ಟಬಹುದು. 
 • ಹೆಚ್ಚು ಬಿಕ್ಕಳಿಕೆ ಬರುವುದನ್ನು ತಡೆಗಟ್ಟಲು ಹುರುಳಿ ಕಷಾಯ ಸೇವಿಸಿ.
 • ಹೊಟ್ಟೆಯಲ್ಲಿ ಹರಳಾದರೆ ಬಾಳೆದಿಂಡಿನ ಪಲ್ಯ ಸೇವಿಸಿ.
 • ಪಿತ್ತದ ಸಮಸ್ಯೆ ಇದ್ದರೆ ಟೀ(ಚಹಾ) ಕುಡಿಯುವುದನ್ನು ಬಿಟ್ಟುಬಿಡಿ.
 • ಚಕ್ಕೆಯನ್ನು ಪ್ರತೀನಿತ್ಯ ಅಡುಗೆಯಲ್ಲಿ ಬಳಸಿದರೆ ಮಧುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.
 • ಅಜೀರ್ಣ, ಮೊಡವೆ, ಜಂತುಹುಳ ಎಂಬ ಸಮಸ್ಯೆಗಳಿಗೆ ಮೆಣಸು ರಾಮಬಾಣ.
 • ಹೊಟ್ಟೆಯಲ್ಲಿ ಜಂತುಹುಳಗಳ ನಿವಾರಣೆಗೆ ವಯಸ್ಸಿಗೆ ತಕ್ಕಂತೆ ಸ್ವಲ್ಪ ಪ್ರಮಾಣದಲ್ಲಿ ಮೆಣಸಿನ ಕಷಾಯ ಸೇವಿಸಿ.
 • ಕೊತ್ತಂಬರಿ ಸೊಪ್ಪನ್ನು ಬಳಸುವುದರಿಂದ ತಲೆನೋವು, ಬಾಯಿಯ ದುರ್ಗಂಧ ದೂರವಾಗುತ್ತದೆ.
 • ದೃಷ್ಟಿ ದೋಷ ನಿವಾರಣೆಗೆ ಸೇವಿಸಿ ಅಮೃತ ಬಳ್ಳಿ ಕಷಾಯ. 
 • ನಿಮಗೆ ಯಾವಾಗಲೂ ಹಸಿವೇ ಇಲ್ಲದಿದ್ದರೆ ಪ್ರತಿ ನಿತ್ಯ ಓಂ ಕಾಳು ಸೇವಿಸಿ.
 • ಸದಾ ತುಂಬಾ ಹಸಿವಾಗುತ್ತಿದ್ದರೆ ಹಸಿ ಕಡಲೇ ಬೀಜ ಸೇವಿಸಿ.
 • ತುಟಿ ಸೀಳಿರುವುದನ್ನು ಸರಿಪಡಿಸಲು ಹಾಲಿನ ಕೆನೆ ಹಚ್ಚಿರಿ.
 • ಎಳನೀರಿನ ನಿಯಮಿತ ಸೇವನೆಯಿಂದ ಉರಿಮೂತ್ರ ಸಮಸ್ಯೆ ನಿವಾರಣೆಯಾಗುತ್ತದೆ.