ಬೇಸಿಗೆಯಲ್ಲಿ ಕೂದಲ ರಕ್ಷಣೆ ಹೀಗಿರಲಿ!

ಬೇಸಿಗೆಯಲ್ಲಿ ಚರ್ಮದ ರಕ್ಷಣೆ ಬಗ್ಗೆ ಹೆಚ್ಚು ಗಮನಹರಿಸುವ ನಾವು ಕೂದಲ ಆರೈಕೆಯನ್ನು ನಿರ್ಲಕ್ಷಿಸಿಸುತ್ತೇವೆ. ಆದರೆ ಬೇಸಿಗೆಯಲ್ಲಿ ಸೂರ್ಯನ ಕಿರಣಗಳು ಕೂದಲಿನಲ್ಲಿರುವ ನೈಸರ್ಗಿಕ ಸುರಕ್ಷತಾ ಪದರವನ್ನು ಹಾಳು ಮಾಡುತ್ತವೆ. 

Updated: Jun 1, 2018 , 02:51 PM IST
ಬೇಸಿಗೆಯಲ್ಲಿ ಕೂದಲ ರಕ್ಷಣೆ ಹೀಗಿರಲಿ!

ಬೇಸಿಗೆಯಲ್ಲಿ ಚರ್ಮದ ರಕ್ಷಣೆ ಬಗ್ಗೆ ಹೆಚ್ಚು ಗಮನಹರಿಸುವ ನಾವು ಕೂದಲ ಆರೈಕೆಯನ್ನು ನಿರ್ಲಕ್ಷಿಸಿಸುತ್ತೇವೆ. ಆದರೆ ಬೇಸಿಗೆಯಲ್ಲಿ ಸೂರ್ಯನ ಕಿರಣಗಳು ಕೂದಲಿನಲ್ಲಿರುವ ನೈಸರ್ಗಿಕ ಸುರಕ್ಷತಾ ಪದರವನ್ನು ಹಾಳು ಮಾಡುತ್ತವೆ. 3-4 ದಿನಗಳವರೆಗೆ ಸತತವಾಗಿ ಬಿಸಿಲನ್ನು ಎದುರಿಸುತ್ತಿದ್ದರೆ, ತಲೆಯಲ್ಲಿರುವ ರಕ್ಷಣಾ ಜೀವಕೋಶಗಳು ನಾಶವಾಗುತ್ತವೆ. ಇದರಿಂದ ಕೂದಲು ಶುಷ್ಕವಾಗಿ, ಕಳೆಗುಂದಿ, ಕವಲೊಡೆದು ಉದುರಲು ಆರಂಭವಾಗುತ್ತದೆ. ಹಾಗಿದ್ದರೆ, ಬೇಸಿಗೆಯಲ್ಲಿ ಕೂದಲಿನ ಆರೈಕೆ ಹೇಗಿರಬೇಕು ಎಂದು ಯೋಚಿಸುತ್ತಿರುವಿರಾ. ಅದರ ಬಗ್ಗೆ ನಾವು ತಿಳಿಸುತ್ತೇವೆ.

* ರೋಸ್ ವಾಟರ್: ತಲೆಯ ಚರ್ಮ ಆರೋಗ್ಯವಾಗಿ ಮತ್ತು ಜಿಡ್ಡಿನಿಂದ ಮುಕ್ತವಾಗಿಡಲು, ವಾರದಲ್ಲಿ 2 ರಿಂದ 3 ಬಾರಿ ರೋಸ್ ವಾಟರ್'ನಿಂದ ಕೂದಲನ್ನು ತೊಳೆಯಿರಿ. ಇದು ನಿಮ್ಮ ಕೂದಲನ್ನು ಮೃದುವಾಗಿಯೂ, ಸ್ವಚ್ಛವಾಗಿಯೂ ಇಡುತ್ತದೆ. ಅಲ್ಲದೆ, ತಲೆನೋವು, ಮೊದಲಾದ ಸಮಸ್ಯೆಗಳಿಗೂ ಪರಿಹಾರ ನೀಡುತ್ತದೆ. 

* ಹೇರ್ ಸ್ಟೈಲರ್ ಮತ್ತು ಹೇರ್ ಸ್ಟ್ರೇಟ್ನರ್ ಬಳಸದಿರಿ : ಬೇಸಿಗೆಯಲ್ಲಿ ಈ ಮಿಶಿನ್'ಗಳನ್ನೂ ಬಳಸುವುದು ಕೂದಲಿಗೆ ಒಳ್ಳೆಯದಲ್ಲ. ಇದರಿಂದ ನೆತ್ತಿ ಮತ್ತು ಕೂದಲಿಗೆ ಮತ್ತಷ್ಟು ಶಾಖ ತಗುಲಿ ಕೂದಲು ಉದುರಲು ಆರಂಭಿಸುತ್ತದೆ.   

* ಸಾಸಿವೆ ಎಣ್ಣೆ ಬಳಸಿ: ಬೇಸಿಗೆಯಲ್ಲಿ ಕೂದಲಿನ ಮಸಾಜ್ ಮಾಡಲು ಸಾಸಿವೆ ಎಣ್ಣೆಯನ್ನು ಬಳಸಿ. ಇದು ತಲೆಯಾ ಚರ್ಮದಲ್ಲಿನ ಸಮಸ್ಯೆಗಳನ್ನೂ ನಿವಾರಿಸುವುದಲ್ಲದೆ, ಕೂದಲನ್ನು ಆರೋಗ್ಯಕರವಾಗಿಯೂ, ಸುಂದರವಾಗಿಯೂ ಕಾಣುವಂತೆ ಮಾಡುತ್ತದೆ.

* ಧೂಳಿನಿಂದ ದೂರವಿರಿ : ಮನೆಯಿಂದ ಹೊರಗೆ ಹೋಗುವಾಗ ಕೂದಲನ್ನು ಆದಷ್ಟು ಬಟ್ಟೆಯಿಂದ ಮುಚ್ಚಿಕೊಳ್ಳಿ. ಇಲ್ಲವಾದರೆ ರಸ್ತೆಯಲ್ಲಿನ ಧೂಳು ಕೂದಲಿನಲ್ಲಿ ಕುಳಿತು ಕೊಳಕಾಗುವಂತೆ ಮಾಡುತ್ತದೆ. ಕೂದಲನ್ನು ಕಟ್ಟಲು ಕಾಟನ್ ಬಟ್ಟೆಯನ್ನೇ ಬಳಸಿ. ವಾರಕ್ಕೆ ಕನಿಷ್ಠ 3 ಬಾರಿಯಾದರೂ ತಲೆಗೆ ಸ್ನಾನ ಮಾಡಿ.

ಈ ರೀತಿಯಾಗಿ ನೀವು ಕೂದಲಿನ ಬಗ್ಗೆ ಕಾಳಜಿ ವಹಿಸುವುದರಿಂದ ನಿಮ್ಮ ಕೂದಲು ಸುಂದರವಾಗಿ, ದಟ್ಟವಾಗಿ ಬೆಳೆಯುತ್ತದೆ.

By continuing to use the site, you agree to the use of cookies. You can find out more by clicking this link

Close