ಝಿಕಾ ವೈರಸ್ ಲಕ್ಷಣಗಳು

ಭಾರತದಲ್ಲಿ ಝಿಕಾ ವೈರಸ್ ರೋಗ (ZVD) ಪ್ರಾರಂಭವಾದಾಗ ಈ ರೋಗವನ್ನು ನಿಯಂತ್ರಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಕೇವಲ ರಾಜಸ್ಥಾನ ಒಂದರಿಂದಲೇ ಝಿಕಾ ವೈರಸ್ ನ 29 ಪ್ರಕರಣಗಳ ಬಗ್ಗೆ ವರದಿಯಾಗಿದೆ. 

Updated: Oct 10, 2018 , 03:49 PM IST
ಝಿಕಾ ವೈರಸ್ ಲಕ್ಷಣಗಳು
Representational Image

ಭಾರತದಲ್ಲಿ ಝಿಕಾ ವೈರಸ್ ರೋಗ (ZVD) ಪ್ರಾರಂಭವಾದಾಗ ಈ ರೋಗವನ್ನು ನಿಯಂತ್ರಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಕೇವಲ ರಾಜಸ್ಥಾನ ಒಂದರಿಂದಲೇ ಝಿಕಾ ವೈರಸ್ ನ 29 ಪ್ರಕರಣಗಳ ಬಗ್ಗೆ ವರದಿಯಾಗಿದೆ. ಝಿಕಾ ವೈರಸ್ ಸೋಂಕಿನ ಹರಡುವಿಕೆಯನ್ನು ತಡೆಗಟ್ಟಲು ಈಗಾಗಾಗಲೇ 150ರಿಂದ 200 ತಂಡಗಳು ಜೈಪುರದಲ್ಲಿ ಸಮೀಕ್ಷೆ ಮಾಡುತ್ತಿದ್ದಾರೆ ಎಂದು ರಾಜಸ್ಥಾನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ
ವೀಣಾ ಗುಪ್ತ ತಿಳಿಸಿದ್ದಾರೆ.

ಪ್ರಧಾನಮಂತ್ರಿ ಕಚೇರಿಯಿಂದ ಈ ವಿಷಯದ ಬಗ್ಗೆ ಸಮಗ್ರ ವರದಿಗೆ ಆದೇಶಿಸಿದ್ದಾರೆ. ಆರೋಗ್ಯ ಸಚಿವ ಜೆ.ಪಿ. ನಡ್ಡ ಅವರು ಜನರಲ್ಲಿ ಈ ಬಗ್ಗೆ ಯಾವುದೇ ರೀತಿಯ ಗಾಬರಿ ಉಂಟಾಗದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇವು ಝಿಕಾ ವೈರಸ್ ಸೋಂಕಿನ ಲಕ್ಷಣಗಳು:

  • ಝಿಕಾ ವೈರಸ್ ರೋಗದ ಲಕ್ಷಣಗಳು ಡೆಂಗ್ಯೂ ರೋಗದ ಲಕ್ಷಣಗಳನ್ನು ಹೋಲುತ್ತವೆ.  ಜ್ವರ, ಕಾಂಜಂಕ್ಟಿವಿಟಿಸ್, ಸ್ನಾಯು ಮತ್ತು ಕೀಲು ನೋವು, ಅಸ್ವಸ್ಥತೆ ಮತ್ತು ತಲೆನೋವು.
  • ಈ ರೋಗಲಕ್ಷಣಗಳು ಸಾಮಾನ್ಯವಾಗಿ ಎರಡು ರಿಂದ ಏಳು ದಿನಗಳವರೆಗೆ ಇರುತ್ತದೆ.
  • ಎಡಿಸ್ ಸೊಳ್ಳೆಗಳು ಹಗಲಿನಲ್ಲಿ ಕಚ್ಚುವುದರಿಂದ ಈ ಕಾಯಿಲೆಗೆ ತುತ್ತಾಗುತ್ತಾರೆ. ಈ ಸೊಳ್ಳೆ ನಾಲ್ಕು ಜನರಿಗೆ ಕಚ್ಚಿದರೆ ಅದರಲ್ಲಿ ಒಬ್ಬರಿಗೆ ಮಾತ್ರ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ.
  • ಸಾಮಾನ್ಯವಾಗಿ ಗರ್ಭಿಣಿ ಮಹಿಳೆಯರು ಝಿಕಾ ವೈರಸ್ ಸೋಂಕಿನ ರೋಗಲಕ್ಷಣಗಳ ಬಗ್ಗೆ ಎಚ್ಚರ ವಹಿಸಬೇಕು. ಅವರು ತಮ್ಮ ಗರ್ಭಧಾರಣೆಯ ನಿಕಟ ಮೇಲ್ವಿಚಾರಣೆ ಮಾಡಿ, ಈ ಸೋಂಕಿಗೆ ತುತ್ತಾಗದಂತೆ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅಗತ್ಯವಾಗಿದೆ.

By continuing to use the site, you agree to the use of cookies. You can find out more by clicking this link

Close