ಬಳುಕುವ ಬಳ್ಳಿಯಂತಹ ದೇಹಕ್ಕಾಗಿ ಈ ಆಹಾರಗಳಿಂದ ದೂರವಿರಿ

ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್ ಅನ್ನು ಸೇವಿಸುವುದನ್ನು ಕಡಿಮೆ ಮಾಡುವುದರಿಂದ ಬೊಜ್ಜು ಕರಗಿಸಲು ಸಹಕಾರಿಯಾಗುತ್ತದೆ. 

Updated: Apr 30, 2018 , 08:44 PM IST
ಬಳುಕುವ ಬಳ್ಳಿಯಂತಹ ದೇಹಕ್ಕಾಗಿ ಈ ಆಹಾರಗಳಿಂದ ದೂರವಿರಿ

ಬಳುಕುವ ಬಳ್ಳಿಯಂತಹ ತೆಳುವಾದ ಸೊಂಟ ಹೊಂದಬೇಕೆಂದು ಯಾವ ಮಹಿಳೆಗೆ ತಾನೇ ಇಷ್ಟವಿಲ್ಲ ಹೇಳಿ? ಅದಕ್ಕಾಗಿ ಮಹಿಳೆಯರು ಸಾಕಷ್ಟು ವ್ಯಾಯಾಮ ಮಾಡುತ್ತಾರೆ. ಆದರೆ ಕೇವಲ ವ್ಯಾಯಾಮ ಮಾಡುವುದರಿಂದ ಸಪೂರವಾದ ದೇಹ ಪಡೆಯಲು ಸಾಧ್ಯವಿಲ್ಲ. ಅದಕ್ಕಾಗಿ ನಾವು ಸೇವಿಸುವ ಆಹಾರಗಳ ಮೇಲೂ ಗಮನಹರಿಸಬೇಕಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್ ಅನ್ನು ಸೇವಿಸುವುದನ್ನು ಕಡಿಮೆ ಮಾಡುವುದರಿಂದ ಬೊಜ್ಜು ಕರಗಿಸಲು ಸಹಕಾರಿಯಾಗುತ್ತದೆ. 

ತೆಳುವಾದ ಸೊಂಟ ನಿಮ್ಮದಾಗಿಸಿಕೊಳ್ಳಲು ಈ 10 ಆಹಾರಗಳಿಂದ ದೂರವಿರಿ.

1. ಕ್ಯಾಂಡಿ ಮತ್ತು ಇತರ ಸಿಹಿತಿಂಡಿಗಳು ಕ್ಯಾಲೋರಿಗಳ ಆಗರ. ಹಾಗಾಗಿ ಚಾಕೋಲೆಟ್ ಮತ್ತು ಕ್ಯಾಂಡಿಗಳನ್ನು ಹೆಚ್ಚು ತಿನ್ನುವುದರಿಂದ ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚಿನ ಕ್ಯಾಲೋರಿ ದೊರೆಯುತ್ತದೆ. ಇದರಿಂದ ಬೊಜ್ಜು ಹೆಚ್ಚಾಗುತ್ತದೆ. ಹಾಗಾಗಿ ಚಾಕೋಲೆಟ್ ಮತ್ತು ಕ್ಯಾಂಡಿಗಳಿಂದ ದೂರವಿರಿ.

10 foods bad for flat tummy

2. ಕೋಲ್ಡ್ ಡ್ರಿಂಕ್ಸ್ ಅಥವಾ ತಂಪು ಪಾನೀಯ ಮತ್ತು ಸೋಡಾ ಕುಡಿಯುವುದು ದೇಹದ ಆರೋಗ್ಯಕ್ಕೆ ಋಣಾತ್ಮಕ ಪರಿಣಾಮ ಬೀರುತ್ತದೆ. ಹಲವರು ಊಟದ ಬಳಿಕ ತಂಪು ಪಾನೀಯ ಕುಡಿಯಲು ಬಯಸುತ್ತಾರೆ. ಆದರೆ ಇದಕ್ಕೆ ಬದಲಾಗಿ ಕೋಲ್ಡ್ ಟೀ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು ಮತ್ತು ಒಂದು ವಾರದೊಳಗೆ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲೊರಿಗಳನ್ನು ಕಡಿಮೆ ಮಾಡಿಕೊಳ್ಳಬಹುದು.

3. ಒಂದು ವೇಳೆ ನಿವೀನಾದರೂ ಫಾಸ್ಟ್ ಪುಡ್ ಪ್ರಿಯರಾಗಿದ್ದರೆ, ಅದರಿಂದ ದೂರ ಉಳಿಯುವುದು ಒಳ್ಳೆಯದು. ಏಕೆಂದರೆ ಇವು ಒಮ್ಮೆಗೇ 2000 ಕ್ಯಾಲೊರಿಗಳನ್ನು ದೇಹಕ್ಕೆ ಒದಗಿಸುತ್ತವೆ. ಆದರೆ ಇಷ್ಟು ಕ್ಯಾಲೋರಿಯನ್ನು ನೀವು ಇಡೀ ದಿನ ಸೇವಿಸುವ ಆಹಾರದಿಂದ ಗಳಿಸಿದರೆ ಒಳ್ಳೆಯದು. ಅಲ್ಲದೆ, ಫಾಸ್ಟ್ ಫುಡ್'ನಲ್ಲಿ ಪೌಷ್ಟಿಕಾಂಷಗಳು ಸಹಾ ಕಡಿಮೆ. 

4. ಮದ್ಯಪಾನ ಸೇವನೆಯಿಂದ ಆರೋಗ್ಯ ಹದಗೆಡುತ್ತದೆ. ಅಲ್ಲದೆ, ಇದರಲ್ಲಿ ಹೆಚ್ಚು ಕ್ಯಾಲೋರಿಗಳಿರುವುದರಿಂದ ದೇಹದಲ್ಲಿ ಹೆಚ್ಚು ಬೊಜ್ಜು ಸಂಗ್ರಹಕ್ಕೆ ಕಾರಣವಾಗುತ್ತದೆ. ಹಾಗಾಗಿ ಆಲ್ಕೋಹಾಲ್ ಸೇವನೆಯಿಂದ ದೂರವಿರಿ.

5. ಹಾಲಿನ ಉತ್ಪನ್ನಗಲಲ್ಲಿ ಉತ್ತಮ ಕ್ಯಾಲ್ಷಿಯಂ ಅಂಶಗಳಿವೆ. ಆದರೆ ಇದರಲ್ಲಿ  ಕಾರ್ಬೋಹೈಡ್ರೇಟ್ ಮತ್ತು ಕೊಬ್ಬಿನ ಪ್ರಮಾಣ ಕೂಡ ಅಧಿಕವಾಗಿದೆ. ಹಾಗಾಗಿ ಹಾಲಿನ ಉತ್ಪನ್ನಗಳ ಅಧಿಕ ಸೇವನೆ ನಿಮ್ಮ ದೇಹದ ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಹಾಗಾಗಿ ಕ್ಯಾಲ್ಷಿಯಂ ಅಧಿಕವಿರುವ ಹಸಿರು ತರಕಾರಿಗಳನ್ನು ಹೆಚ್ಚು ಸೇವಿಸಿ, ಹಾಲಿನ ಉತ್ಪನ್ನಗಳಿಂದ ದೂರವಿರಿ.

6. ಧಾನ್ಯಗಳಿಂದ ತಯಾರಿಸಿದ ಸಂಸ್ಕರಿಸಿದ ಆಹಾರ ಪದಾರ್ಥಗಳಲ್ಲಿ ಕಾರ್ಬೋಹೈಡ್ರೇಟ್ ಅಂಶ ಅಧಿಕವಾಗಿರುತ್ತದೆ. ಇದು ದೇಹದಲ್ಲಿನ ಸಕ್ಕರೆ ಅಂಶವನ್ನು ಹೆಚ್ಚಿಸುತ್ತದೆ. ಹಾಗಾಗಿ ಸಂಸ್ಕರಿಸಿದ ಧಾನ್ಯಗಳಿಂದ ತಯಾರಿಸಿದ ಆಹಾರ ಪದಾರ್ಥಗಳಿಗೆ ಬದಲಾಗಿ ಮೂಲ ಧಾನ್ಯಗಳಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಸೇವಿಸುವುದು ಉತ್ತಮ.

7. ಬಹುತೇಕ ಎಲ್ಲಾ ಹಣ್ಣಿನ ರಸಗಳು ಹೆಚ್ಚು ಪೋಷಕಾಂಶಗಳನ್ನು ಹೊಂದಿರುತ್ತವೆ. ಆದರೆ ಅವುಗಳಲ್ಲಿ ಸಕ್ಕರೆ ಪ್ರಮಾಣ ಅಧಿಕವಾಗಿರುತ್ತದೆ. ಪ್ರತಿದಿನ ಬೆಳಿಗ್ಗೆ ಒಂದು ಲೋಟ ತಾಜಾ ಹಣ್ಣಿನ ರಸ ಕುಡಿಯುವುದರಿಂದ ದೇಹಕ್ಕೆ ಯಾವುದೇ ಹಾನಿಯಿಲ್ಲ. ಆದರೆ ಇದನ್ನು ಸಾಮಾನ್ಯ ಪಾನೀಯವಾಗಿ ಬಳಸಬಾರದು.

8. ಆಲೂಗಡ್ಡೆಯನ್ನು ತರಕಾರಿಗಳ ರಾಜ ಎಂದೇ ಹೇಳಲಾಗುತ್ತದೆ. ಹಾಗಂತ ಪ್ರತಿನಿತ್ಯ ಒಂದು ಆಲೂಗೆಡ್ಡೆ ಸೇವಿಸಿದರೆ ಅದು ಒಂದು ಚಮಚ ಸಕ್ಕರೆಗೆ ಸಮ. ಇದು ದೇಹದಲ್ಲಿ ಹೆಚ್ಚು ಸಕ್ಕರೆ ಅಂಶ ಒದಗುಉದರಿಂದ ಬಹಳ ಬೇಗ ಹಸಿವಾಗಲು ಆರಂಭವಾಗುತ್ತದೆ. ಇದರಿಂದ ನೀವು ಆಹಾರ ಸೇವಿಸುವ ಪ್ರಮಾಣವೂ ಹೆಚ್ಚಾಗುತ್ತದೆ. ಹಾಗಾಗಿ ಆಲೂಗಡ್ಡೆ ಸೇವನೆಯನ್ನು ಕಡಿಮೆ ಮಾಡಿದರೆ ಒಳ್ಳೆಯದು.

9. ಚಿಪ್ಸ್ ಅಥವಾ ಈ ರೀತಿಯ ಇತರ ತಿನಿಸುಗಳು ಸಹ ಸಿಹಿತಿನಿಸುಗಳಂತೆ ದೇಹದಲ್ಲಿ ಕ್ಯಾಲೊರಿಗಳ ಪ್ರಮಾಣವನ್ನು ಹೆಚ್ಚಿಸುತ್ತವೆ. ಒಂದು ವೇಳೆ ಕುರುಕಲು ತಿಂಡಿಗಳನ್ನು ನೀವು ತಿನ್ನಲೇಬೇಕು ಎಂದೆನಿಸಿದರೆ ಮನೆಯಲ್ಲೇ ತಯಾರಿಸಿದ ಆರೋಗ್ಯಕರ ತಿಂಡಿಗಳನ್ನು ತಿನ್ನಬಹುದು. 

10. ಹೆಚ್ಚು ಫ್ರಕ್ಟೋಸ್ ಕಾರ್ನ್ ಸಿರಪ್ ಸೇವನೆ ಮತ್ತು ಸಂಸ್ಕರಿಸಿದ ಧಾನ್ಯಗಳ ಸೇವನೆಯಿಂದ ದೇಹಕ್ಕೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಹಾಗಾಗಿ ಇವುಗಳ ಸೇವನೆಯನ್ನು ಕಡಿಮೆ ಮಾಡಿ.

By continuing to use the site, you agree to the use of cookies. You can find out more by clicking this link

Close