ಈ ಹಣ್ಣಿನ ರಸಗಳನ್ನು ಸೇವಿಸಿ, ಸದಾ ಯಂಗ್ ಆಗಿ ಕಾಣಿರಿ!

ಆರೋಗ್ಯಕರ, ಸಮತೋಲಿತ ಆಹಾರವನ್ನು ಸೇವಿಸುವುದರಿಂದ ವಯಸ್ಸಾದಂತೆ ಕಾಣುವುದನ್ನು ತಡೆಯಬಹುದು.

Updated: May 7, 2018 , 09:15 PM IST
ಈ ಹಣ್ಣಿನ ರಸಗಳನ್ನು ಸೇವಿಸಿ, ಸದಾ ಯಂಗ್ ಆಗಿ ಕಾಣಿರಿ!

ನವದೆಹಲಿ: ವಯಸ್ಸು ಅನ್ನೋದು ಕೇವಲ ಸಂಖ್ಯೆ ಅಷ್ಟೇ, ಆದರೆ ಭಾವನೆಗಳಿಗೆ ಯಾವುದೇ ವಯಸ್ಸಿನ ಮಿತಿಯಿಲ್ಲ ಎನ್ನೋದು ಎಲ್ಲರೂ ಹೇಳುವ ಮಾತು. ಆದರೆ ಕೇವಲ ಭಾವನೆಗಳು ಮಾತ್ರ ನವೀನವಾಗಿದ್ದರೆ ಸಾಕೆ? ನಮ್ಮ ದೇಹವೂ ಯೌವನದಿಂದ ಕೂಡಿರಬೇಕೆಂದು ಬಹಳಷ್ಟು ಮಂದಿ ಬಯಸುತ್ತಾರೆ. ಅದಕ್ಕಾಗಿ ಡಯಟ್, ಶಸ್ತ್ರ ಚಿಕಿತ್ಸೆ, ಮೊದಲಾದ ವಿಚಿತ್ರ ದಾರಿಯನ್ನು ಹುಡುಕುತ್ತಾರೆ. ಈ ಅಪಾಯಕಾರಿ ಕ್ರಮಗಳಿಗೆ ಬದಲಾಗಿ, ಆರೋಗ್ಯಕರ, ಸಮತೋಲಿತ ಆಹಾರವನ್ನು ಸೇವಿಸುವುದರಿಂದ ವಯಸ್ಸಾದಂತೆ ಕಾಣುವುದನ್ನು ತಡೆಯಬಹುದು.

ಹುಟ್ಟಿದ ಮಗು ಹುಟ್ಟಿದಾಗ ಹೇಗಿತ್ತೋ ಹಾಗೇ ಇರಲು ಸಾಧ್ಯವಿಲ್ಲ. ಅದು ಬೆಳೆಯಲೇಬೇಕು. ಹಾಗೇ ನಮ್ಮ ವಯಸ್ಸೂ ಕೂಡ. ಇದೊಂದು ನೈಸರ್ಗಿಕ ಪ್ರಕ್ರಿಯೆ. ಆದರೆ ವಯಸ್ಸು ಹೆಚ್ಚಾಗುತ್ತಾ ಹೋದಂತೆ ಇದು ನಿಮ್ಮ ದೇಹದ ಮೇಲೆ, ಮುಖದ ಮೇಲೆ ಕಾಣುತ್ತಾ ಹೋಗುತ್ತದೆ. ಅದನ್ನು ತಡೆಯಲು ಪ್ರತಿನಿತ್ಯ ಹಣ್ಣು, ತರಕಾರಿಗಳ ರಸ ಸೇವಿಸುವುಡು ಅಗತ್ಯ. ಇದರಿಂದ ನೀವು ಸದಾ ಯಂಗ್ ಆಗಿ ಕಾಣಬಹುದು.

ಆರೋಗ್ಯಕರ ಪಾನೀಯಗಳು

1. ಟೊಮ್ಯಾಟೋ ರಸ
ಟೊಮ್ಯಾಟೊ ರಸದಲ್ಲಿ ಉತ್ತಮ ಚರ್ಮಕ್ಕೆ ಅಗತ್ಯವಾದ ಲೈಕೋಪೀನ್ ಮತ್ತು ಆಂಟಿ ಆಕ್ಸಿಡೆಂಟ್ ಅಂಶಗಳಿವೆ. ಕ್ಯಾರೊಟಿನಾಯ್ಡ್ ಮತ್ತು ಫೈಟೊಕೆಮಿಕಲ್ ಪಿಗ್ಮೆಂಟ್ ಮುಖ ಸುಕ್ಕುಗಟ್ಟುವಿಕೆಯನ್ನು ತಡೆಯುತ್ತದೆ. 

2. ಕೆಂಪು ದ್ರಾಕ್ಷಿ ರಸ
ಕೆಂಪು ದ್ರಾಕ್ಷಿಯಲ್ಲಿ ರೆಸ್ವೆರಾಟ್ರೋಲ್ ಅಂಶ ಇರುವುದರಿಂದ ಇದು ಬೇಗ ವಯಸ್ಸಾದಂತೆ ಕಾಣುವುದನ್ನು ತಡೆಯುತ್ತದೆ. ಕೆಂಪು ದ್ರಾಕ್ಷಿ ರಸ ಕುಡಿಯುವುದರಿಂದ ದೇಹದಲ್ಲಿ ರಕ್ತ ಚಲನೆಯೂ ಹೆಚ್ಚಾಗಿ ಆರೋಗ್ಯಯುತವಾಗಿರುವಂತೆ ಮಾಡುತ್ತದೆ. 

3. ದಾಳಿಂಬೆ ರಸ
ದಾಳಿಂಬೆ ಹಣ್ಣಿನ ರಸ ಸೇವಿಸುವುದರಿಂದ ದೇಹದಲ್ಲಿನ ಕೆಟ್ಟ ಕೊಲೆಸ್ಟರಾಲ್ ಕಡಿಮೆ ಆಗಿ, ಮೂತ್ರಪಿಂಡದಲ್ಲಿ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವಲ್ಲಿ ಸಹಕರಿಸುತ್ತದೆ. ಅಲ್ಲದೆ, ದಾಳಿಂಬೆ ಹಣ್ಣು ಸೇವನೆಯಿಂದ ಮುಖದ ಮೇಲಿನ ಸುಕ್ಕು ಕಡಿಮೆಯಾಗುತ್ತದೆ. 

4. ಕಲ್ಲಂಗಡಿ ರಸ
ಕಲ್ಲಂಗಡಿ ಹಣ್ಣಿನಲ್ಲಿ ವಿಟಮಿನ್, ಖನಿಜಗಳು ಮತ್ತು ಆಂಟಿ ಆಕ್ಸಿಡೆಂಟ್ ಅಂಶಗಳು ಹೆಚ್ಚಾಗಿರುವುದರಿಂದ ದೇಹವನ್ನು ಹೈಡ್ರೇಟ್ ಮಾಡುವ ಮೂಲಕ ಚರ್ಮಕ್ಕೆ ಹೊಳಪು ನೀಡುತ್ತದೆ.

5. ಕಿವಿ ಹಣ್ಣಿನ ರಸ
ಈ ಹಣ್ಣಿನಲ್ಲಿರುವ ಆಂಟಿಆಕ್ಸಿಡೆಂಟ್ ಗುಣ ನಿಮ್ಮ ಚರ್ಮವನ್ನು ಸ್ಫುಟಗೊಳಿಸಿ, ಸುಕ್ಕಾಗುವುದನ್ನು ನಿಧಾನಗೊಳಿಸುತ್ತದೆ. 

6. ಅಲೋವೆರಾ ರಸ
ಅಲೋವೆರಾ ರಸದಲ್ಲಿ ಅಮೈನೊ ಆಮ್ಲಗಳು ಮತ್ತು ಪೋಷಕಾಂಶಗಳು ಹೆಚ್ಚಾಗಿದ್ದು, ಇವು ಚರ್ಮದ ಜೀವಕೋಶಗಳ ಮರುಉತ್ಪತ್ತಿಗೆ ಸಹಾಯಕವಾಗಿದೆ. 

7. ಬೀಟ್ರೂಟ್ ರಸ
ಬೀಟ್ರೂಟ್ನಲ್ಲಿನ ನೈಸರ್ಗಿಕ ನೈಟ್ರೇಟ್ ಸರಾಗವಾದ ರಕ್ತ ಪರಿಚಲನೆಗೆ ನೆರವಾಗುತ್ತದೆ. ಇದರಿಂದ ಚರ್ಮಕ್ಕೆ ಹೊಳಪು ಬರುತ್ತದೆ. 

8. ಕ್ಯಾರೆಟ್ ಜ್ಯೂಸ್
ಕ್ಯಾರೆಟ್ ರಸವು ಚರ್ಮದ ಆರೋಗ್ಯಕ್ಕೆ ಬಹಳ ಒಳ್ಳೆಯದು. ಏಕೆಂದರೆ ಇದರಲ್ಲಿ ಮಾನಸಿಕ ದೃಢತೆಗೆ ಸಹಾಯವಾದ, ಚರ್ಮಕ್ಕೆ ಹೊಳಪು ತರುವ 'ಲುಟೆಯೊಲಿನ್' ಎಂಬ ನೈಸರ್ಗಿಕ ಸಂಯುಕ್ತ ಅಂಶವಿದೆ. ಹಾಗಾಗಿ ಇದು ಚರ್ಮದ ಆರೋಗ್ಯವನ್ನು ಹೆಚ್ಚಿಸಿ, ವಯಸ್ಸಾದಂತೆ ಕಾಣುವುದನ್ನು ನಿಧಾನಗೊಳಿಸುತ್ತದೆ. 

By continuing to use the site, you agree to the use of cookies. You can find out more by clicking this link

Close