ಮುಂದಿನ ಎರಡು ತಿಂಗಳಲ್ಲಿ 'ಅಲ್ಟ್ರಾ ಮಾಡ್ರನ್' ಆಗಲಿವೆ ಈ 15 ರೈಲು ನಿಲ್ದಾಣಗಳು!

ಒಂದು ನಿಲ್ದಾಣವನ್ನು ಅಭಿವೃದ್ಧಿಪಡಿಸಲು 20 ಕೋಟಿ ರೂಪಾಯಿಗಳನ್ನು ನೀಡಲಾಗಿದೆ.

Last Updated : Jan 16, 2019, 04:04 PM IST
ಮುಂದಿನ ಎರಡು ತಿಂಗಳಲ್ಲಿ 'ಅಲ್ಟ್ರಾ ಮಾಡ್ರನ್' ಆಗಲಿವೆ ಈ 15 ರೈಲು ನಿಲ್ದಾಣಗಳು! title=

ನವದೆಹಲಿ: ಭಾರತೀಯ ರೈಲ್ವೆಯ ಪ್ರತಿ ವಿಭಾಗದಲ್ಲೂ ಒಂದು 'ಅಲ್ಟ್ರಾ ಮಾಡ್ರನ್'(ಅತ್ಯಾಧುನೀಕರಣ) ನಿಲ್ದಾಣವನ್ನು ಅಭಿವೃದ್ಧಿ ಪಡಿಸಲು  20 ಕೋಟಿ ರೂಪಾಯಿಗಳನ್ನು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. 

68 ರೈಲ್ವೆ ವಲಯದ ಮುಖ್ಯಸ್ಥರಿಗೆ ರೈಲ್ವೇ ನಿಲ್ದಾಣಗಳನ್ನು ಗುರುತಿಸಲು ಮತ್ತು ಪ್ರಯಾಣಿಕರಿಗೆ ಅಗತ್ಯ ಸೌಲಭ್ಯಗಳಾದ ಲಿಫ್ಟ್ ಗಳು, ಪ್ಲಾಟ್ಫಾರ್ಮ್ ದಾಟುವಿಕೆ, ಪ್ಲಾಟ್ಫಾರ್ಮ್ ಗಳಲ್ಲಿ ಆಸನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಸಂಬಂಧಿಸಿದಂತೆ ಎಲ್ಲಾ ಸೌಕರ್ಯಗಳನ್ನು ಒದಗಿಸಲು ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

68 ವಲಯಗಳ ಎಲ್ಲಾ ವಿಭಾಗಾಧಿಕಾರಿಗಳಿಗೂ ಮುಂದಿನ ಎರಡು ತಿಂಗಳ ಅವಧಿಯಲ್ಲಿ ತನ್ನ ಆಯ್ಕೆಯ ರೈಲು ನಿಲ್ದಾಣದ ಅಭಿವೃದ್ಧಿ ಪಡಿಸಲು ಹೇಳಲಾಗಿದೆ. ಬಳಿಕ ಮಾದರಿ ರೈಲು ನಿಲ್ದಾಣಗಳನ್ನೂ ಮತ್ತೊಂದು ರೈಲ್ವೇ ನಿಲ್ದಾಣದ ಅಭಿವೃದ್ಧಿಗೆ ಉದಾಹರಣೆಗಳಾಗಿ ಬಳಸಲಾಗುತ್ತದೆ. ಪ್ರತಿ ನಿಲ್ದಾಣವನ್ನು ಅಭಿವೃದ್ಧಿಪಡಿಸಲು 20 ಕೋಟಿ ರೂಪಾಯಿಗಳನ್ನು ನೀಡಲಾಗಿದೆ.

ಮುಂಬರುವ ತಿಂಗಳುಗಳಲ್ಲಿ ಅಭಿವೃದ್ಧಿಗೊಳ್ಳಬೇಕಾದ ಕೇಂದ್ರಗಳಲ್ಲಿ ಲೋಣಾವಲಾ, ವಾರಣಾಸಿ ಸಿಟಿ, ಪುಣೆ, ಮಥುರಾ, ಪಾಟ್ನಾ, ಹೌರಾ, ಅಲಹಾಬಾದ್, ಉದಯಪುರ್, ಬಿಕನೇರ್, ವಾರಂಗಲ್, ದೆಹಲಿ ಮುಖ್ಯ, ಅಂಬಾಲಾ, ರಾಯಪುರ್, ಅಹಮದಾಬಾದ್ ಮತ್ತು ಮೈಸೂರು ನಿಲ್ದಾಣಗಳು ಸೇರಿವೆ.

ಏತನ್ಮಧ್ಯೆ, ರೈಲ್ವೇ ಬೋರ್ಡ್ ನಲ್ಲಿ ಹೊಸದಾಗಿ ನೇಮಕಗೊಂಡ ಅಧ್ಯಕ್ಷ ವಿನೋದ್ ಕುಮಾರ್ ಯಾದವ್ ಭಾನುವಾರ 68 ವಲಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ರಕ್ಷಣಾ, ಭದ್ರತೆ, ಆದಾಯ ಮತ್ತು ಮೂಲಭೂತ ಸೌಕರ್ಯಗಳಂತಹ ವಿಷಯಗಳನ್ನು ಚರ್ಚಿಸಿದರು.

Trending News