ವಿಶ್ವದ ಅತಿ ಶಕ್ತಿಶಾಲಿ ರಾಕೆಟ್ ಉಡಾವಣೆ ಮಾಡಿದ ಅಮೇರಿಕ

ವಿಶ್ವದ ಅತ್ಯಂತ ಶಕ್ತಿಶಾಲಿ ರಾಕೆಟ್ ಅನ್ನು ಅಮೆರಿಕ ಇಂದು ಉಡಾಯಿಸಿದ್ದು, ಖಾಸಗಿ ಬಾಹ್ಯಾಕಾಶ ಕಂಪೆನಿ ಸ್ಪೆಸೆಕ್ಸ್(SPACEX) ಈ ರಾಕೆಟ್ ಅನ್ನು ತಯಾರಿಸಿದೆ. 

Last Updated : Feb 7, 2018, 01:13 PM IST
  • ಫ್ಲೋರಿಡಾದಲ್ಲಿರುವ ಕೆನಡಿ ಬಾಹ್ಯಾಕಾಶ ನಿಲ್ದಾಣದಿಂದ ತಡರಾತ್ರಿ 2.25 ಗಂಟೆಗೆ ಯಶಸ್ವಿಯಾಗಿ ಉಡಾವಣೆ.
  • ಇದರ ಉದ್ದ ಸುಮಾರು 70 ಮೀಟರ್ (230 ಅಡಿ). ಈ ದೈತ್ಯ ರಾಕೆಟ್ 63.8 ಟನ್ ತೂಕ ಹೊಂದಿದೆ.
  • ಈ ರಾಕೆಟ್ ಪ್ರತಿ ಸೆಕೆಂಡಿಗೆ 11 ಕಿಲೋಮೀಟರ್ ವೇಗದಲ್ಲಿ ಹಾರಲಿದೆ.
ವಿಶ್ವದ ಅತಿ ಶಕ್ತಿಶಾಲಿ ರಾಕೆಟ್ ಉಡಾವಣೆ ಮಾಡಿದ ಅಮೇರಿಕ title=

ನವದೆಹಲಿ: ವಿಶ್ವದ ಅತ್ಯಂತ ಶಕ್ತಿಶಾಲಿ ರಾಕೆಟ್ ಅನ್ನು ಅಮೆರಿಕ ಇಂದು ಉಡಾಯಿಸಿದ್ದು, ಖಾಸಗಿ ಬಾಹ್ಯಾಕಾಶ ಕಂಪೆನಿ ಸ್ಪೆಸೆಕ್ಸ್(SPACEX) ಈ ರಾಕೆಟ್ ಅನ್ನು ತಯಾರಿಸಿದೆ. 

ಅಮೆರಿಕದ ಖ್ಯಾತ ಉದ್ಯಮಿ ಇಯಾನ್ ಮಸ್ಕ್ ಅವರ 'ಸ್ಪೇಸ್ ಎಕ್ಸ್' ಯೋಜನೆಯ ಫಾಲ್ಕನ್ ರಾಕೆಟ್ ಅನ್ನು ಇಂದು ಫ್ಲೋರಿಡಾದಲ್ಲಿರುವ ಕೆನಡಿ ಬಾಹ್ಯಾಕಾಶ ನಿಲ್ದಾಣದಿಂದ ತಡರಾತ್ರಿ 2.25 ಗಂಟೆಗೆ  ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಈ ಕಾರ್ಯಾಚರಣೆಯನ್ನು ಸ್ಪೇಸ್ ಎಕ್ಸ್ ಸಂಸ್ಥೆ ನೇರ ಪ್ರಸಾರ ಮಾಡಿದ್ದು, ನಿರೀಕ್ಷಿತ ಸಮಯಕ್ಕೆ ನಿಖರವಾಗಿ ರಾಕೆಟ್ ತಲುಪಿದೆ. ಈ ರಾಕೆಟ್ ಸಹಾಯದಿಂದ, ಮನುಷ್ಯರನ್ನು ಚಂದ್ರ ಮತ್ತು ಮಂಗಳ ಗ್ರಹಕ್ಕೆ ಕಳುಹಿಸಬಹುದಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಎರಡು ಬಾಹ್ಯಾಕಾಶ ನೌಕೆಗಳ ತೂಕಕ್ಕೆ ಸಮ 
ಅಮೆರಿಕನ್ ಸ್ಪೇಸ್ ಏಜೆನ್ಸಿ (ನಾಸಾ) ನಾಸಾ ಈ ರಾಕೆಟ್ನ ಸೃಷ್ಟಿ ಪ್ರಕ್ರಿಯೆಯ ವೀಡಿಯೊವನ್ನು ಅದರ ವೆಬ್ಸೈಟ್ನಲ್ಲಿ ಪ್ರಕಟಿಸಿದೆ. ನಾಸಾ ಪ್ರಕಾರ, ಈ ರಾಕೆಟ್ ವಿಶ್ವದ ಅತ್ಯಂತ ಶಕ್ತಿಶಾಲಿ ರಾಕೆಟ್ ಎಂದು ವಿವರಿಸಲಾಗಿದೆ. ಈ ರಾಕೆಟ್ನಲ್ಲಿ, ಮೊದಲ ಹಂತದಲ್ಲಿ 3 ಫಾಲ್ಕನ್ 9 ಮತ್ತು ಮಧ್ಯಮ 27 ಮೆರ್ಲಿನ್ 1 ಡಿ ಇಂಜಿನ್ಗಳನ್ನು ಸ್ಥಾಪಿಸಲಾಗಿದೆ. ಇದರ ಉದ್ದ ಸುಮಾರು 70 ಮೀಟರ್ (230 ಅಡಿ). ಈ ದೈತ್ಯ ರಾಕೆಟ್ 63.8 ಟನ್ ತೂಕ ಹೊಂದಿದೆ. ಹಾಗಾಗಿಯೇ ಇದು ಎರಡು ಬಾಹ್ಯಾಕಾಶ ನೌಕೆಗಳ ತೂಕಕ್ಕೆ ಸಮವಾಗಿದೆ. 

ಭೂಮಿಯಿಂದ ಮಂಗಳಕ್ಕೆ ಕಕ್ಷೆ ತಿರುಗಿಸಲಿದೆ
ಈ ರಾಕೆಟ್ ಬಾಹ್ಯಾಕಾಶದಲ್ಲಿ 64 ಟನ್ ತೂಕವನ್ನು ಹೊರುವ ಸಾಮರ್ಥ್ಯವನ್ನು ಹೊಂದಿದೆ. ಇದು ಸುಮಾರು 18 'ವಿಮಾನ -747' (5 ಮಿಲಿಯನ್ ಟನ್)ರಷ್ಟು ವಿದ್ಯುತ್ ಹೊಂದಿದೆ. ಉಡಾವಣೆಯ ನಂತರ ಈ ರಾಕೆಟ್ ಭೂಮಿಯ ಕಕ್ಷೆಯಿಂದ ಮಂಗಳದ ಕಕ್ಷೆಯವರೆಗೆ ತಲುಪಲಿದೆ. ನಂತರ, ಈ ರಾಕೆಟ್ ಪ್ರತಿ ಸೆಕೆಂಡಿಗೆ 11 ಕಿಲೋಮೀಟರ್ ವೇಗದಲ್ಲಿ ಹಾರಲಿದೆ. 

ಭಾರತದಿಂದ ಜಿಎಸ್ಎಲ್ವಿ(GSLV) ಸರಣಿ ರಾಕೆಟ್ ಉಡಾವಣೆ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇದುವರೆಗೂ ಜಿಎಸ್ಎಲ್ವಿ ಸರಣಿಯ ಎಲ್ಲಾ ರಾಕೆಟ್ಗಳನ್ನೂ ಉಡಾವಣೆ ಮಾಡಿದೆ. ಇಸ್ರೋ ಅಧ್ಯಕ್ಷ ಕೆ. ಸಿವನ್ ಜಿಎಸ್ಎಲ್ವಿ ತನ್ನ ಎಲ್ಲಾ ಉದ್ದೇಶದಲ್ಲೂ ಯಶಸ್ವಿಯಾಗಿದೆ ಎಂದಿದ್ದಾರೆ. ಅಮೆರಿಕದಲ್ಲಿ ಫಾಲ್ಕನ್ ಹೆವಿ ರಾಕೆಟ್ ಉಡಾವಣೆ ಯಶಸ್ವಿಯಾದ ನಂತರ ನಾವು ಮುಂದಿನ ನಿರ್ಧಾರ ಕೈಗೊಳ್ಳಲಿದ್ದೇವೆ. ರಷ್ಯಾ ಮತ್ತು ಜಪಾನ್ ಸಹ ಪ್ರಬಲವಾದ ರಾಕೆಟ್ ತಯಾರಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದ್ದಾರೆ.

Trending News