ಕೇಂದ್ರಕ್ಕೆ ಸಿಬಿಐ ಶಾಕ್; ರಾಜ್ಯದಲ್ಲಿ ಸಿಬಿಐ ತನಿಖೆಗೆ ಅನುಮತಿ ಹಿಂಪಡೆದ ಆಂಧ್ರಪ್ರದೇಶ ಸರ್ಕಾರ

ಆಂಧ್ರಪ್ರದೇಶ ರಾಜ್ಯದ ವ್ಯಾಪ್ತಿಯಲ್ಲಿ ಬರುವ ಯಾವುದೇ ಪ್ರಕರಣದ ಬಗ್ಗೆ ತನ್ನ ಅಧಿಕಾರ ಚಲಾಯಿಸದಂತೆ ಸಾಮಾನ್ಯ ಒಪ್ಪಿಗೆ ('General Consent' )ಯನ್ನು ಸರ್ಕಾರದಿಂದ ಹಿಂಪಡೆಯಲಾಗಿದೆ.

Last Updated : Nov 16, 2018, 02:41 PM IST
ಕೇಂದ್ರಕ್ಕೆ ಸಿಬಿಐ ಶಾಕ್; ರಾಜ್ಯದಲ್ಲಿ ಸಿಬಿಐ ತನಿಖೆಗೆ ಅನುಮತಿ ಹಿಂಪಡೆದ ಆಂಧ್ರಪ್ರದೇಶ ಸರ್ಕಾರ title=

ಅಮರಾವತಿ: ಆಂಧ್ರಪ್ರದೇಶದಲ್ಲಿ ಕೇಂದ್ರ ತನಿಖಾ ಸಂಸ್ಥೆ(ಸಿಬಿಐ)ಗೆ ರಾಜ್ಯದಲ್ಲಿ ಪ್ರಕರಣಗಳ ತನಿಖೆಗೆ ನೀಡಿದ್ದ ಅನುಮತಿಯನ್ನು ರಾಜ್ಯ ಸರ್ಕಾರ ಶುಕ್ರವಾರ ಹಿಂಪಡೆಯುವ ಮೂಲಕ ಕೇಂದ್ರ ಸರ್ಕಾರಕ್ಕೆ ಬಿಗ್ ಶಾಕ್ ನೀಡಿದೆ. 

ದೆಹಲಿ ಸ್ಪೆಷಲ್​ ಪೊಲೀಸ್​ ಎಸ್ಟಾಬ್ಲಿಶ್​ಮೆಂಟ್ ಕಾಯ್ದೆ 1946ರಡಿ ​ಸ್ಥಾಪಿತವಾಗಿರುವ ಸಿಬಿಐ, ಆಂಧ್ರಪ್ರದೇಶ ರಾಜ್ಯದ ವ್ಯಾಪ್ತಿಯಲ್ಲಿ ಬರುವ ಯಾವುದೇ ಪ್ರಕರಣದ ಬಗ್ಗೆ ತನ್ನ ಅಧಿಕಾರ ಚಲಾಯಿಸದಂತೆ ಸಾಮಾನ್ಯ ಒಪ್ಪಿಗೆ ('General Consent' )ಯನ್ನು ಸರ್ಕಾರದಿಂದ ಹಿಂಪಡೆಯಲಾಗಿದೆ ಎಂದು ಸರ್ಕಾರ ತನ್ನ ಆದೇಶದಲ್ಲಿ ಹೇಳಿದೆ. 

ಆಂಧ್ರಪ್ರದೇಶ ಸರ್ಕಾರ ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ಈ ಕ್ಷಣದಿಂದ ರಾಜ್ಯದಲ್ಲಿ ಸಿಬಿಐ ಪೋಲೀಸರು ಯಾವುದೇ ದಾಳಿ ನಡೆಸುವಂತಿಲ್ಲ ಅಥವಾ ಯಾವುದೇ ವಿಚಾರವಾಗಿ ರಾಜ್ಯಕ್ಕೆ ಪ್ರವೇಶಿಸುವ ಮುನ್ನ ಸರ್ಕಾರದಿಂದ ಪೂರ್ವಾನುಮತಿ ಪಡೆಯಬೇಕು ಎಂದು ತಿಳಿಸಿದೆ. 

ಅಷ್ಟೇ ಅಲ್ಲದೆ, ಇನ್ನು ಮುಂದೆ ಸಿಬಿಐ ಕಾರ್ಯಗಳನ್ನು ಎಸಿಬಿ(ಭ್ರಷ್ಟಾಚಾರ ನಿಯಂತ್ರಣ ದಳ) ನಿರ್ವಹಿಸಲಿದೆ. ಜೊತೆಗೆ ಆಂಧ್ರಪ್ರದೇಶದಲ್ಲಿ ಸ್ಥಾಪಿತವಾಗಿರುವ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಮೇಲೆ ದಾಳಿ ನಡೆಸಲು ಎಸಿಬಿಗೆ ಸರ್ಕಾರ ಅನುಮತಿ ನೀಡಿದೆ. 

Trending News