ಮಗುವಿನ ಅಳು ನಿಲ್ಲಿಸಲು ಬಾಯಿಗೆ ಖಾರದ ಪುಡಿ ಹಾಕಿದ ಅಂಗನವಾಡಿ ಮಹಿಳೆ!

    

Updated: Jul 11, 2018 , 07:05 PM IST
ಮಗುವಿನ ಅಳು ನಿಲ್ಲಿಸಲು ಬಾಯಿಗೆ ಖಾರದ ಪುಡಿ ಹಾಕಿದ ಅಂಗನವಾಡಿ ಮಹಿಳೆ!
Photo courtesy: ANI

ಕೃಷ್ಣ (ಆಂಧ್ರಪ್ರದೇಶ): ಅಂಗನವಾಡಿ ಕೇಂದ್ರದಲ್ಲಿ ಅಟೆಂಡೆಂಟರೊಬ್ಬರು ಮಗುವನ್ನು ಅಳುವಿನಿಂದ ನಿಲ್ಲಿಸಲು ಮಗುವಿನ ಬಾಯಲ್ಲಿ ಮೆಣಸಿನ ಪುಡಿಯನ್ನು ಹಾಕಿದ ವಿಚಿತ್ರ ಘಟನೆ ಸೋಮವಾರದಂದು  ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಭೂಶಾನಗುಲ್ಲಾ ಹಳ್ಳಿಯಲ್ಲಿ ನಡೆದಿದೆ.

ಈ ಮಗುವಿನ ತಾಯಿ ತನ್ನ ಎಂದಿನ ದಿನಚರಿಯ ನಿಮಿತ್ತ  ಅಂಗನವಾಡಿ ಕೇಂದ್ರದಲ್ಲಿ ಮಗುವನ್ನು ಬಿಟ್ಟು ಹೋಗಿದ್ದಾರೆ. ಆ ಮಗು ಇನ್ನು ಅಳುತ್ತಿದ್ದಾಗಲೇ ಆ ತಾಯಿಯು ಅಂಗನವಾಡಿ ಕೇಂದ್ರದಲ್ಲಿ ಬಿಟ್ಟಿದ್ದಾರೆ.

ಆದರೆ ನಿರಂತರವಾಗಿ ಅಳುತ್ತಲೇ ಇದ್ದ ಮಗುವನ್ನು ಶಾಂತಗೊಳಿಸಲು ಮಗುವಿನ ಬಾಯಲ್ಲಿ ಕುಮಾರಿ ಎನ್ನುವ ಅಂಗನವಾಡಿ ಕೇಂದ್ರದ ಮಹಿಳೆಯು ಮೆಣಸಿನ ಪುಡಿ ಹಾಕಿದ್ದಾರೆ. ಈ ಘಟನೆಯಿಂದ ಆಕ್ರೋಶಗೊಂಡ ಮಗುವಿನ ಪೋಷಕರು  ಮತ್ತು ಸ್ಥಳೀಯರು ಆ ಅಂಗನವಾಡಿ ಕೇಂದ್ರದ ಮಹಿಳೆ ಮೇಲೆ ದೂರು ದಾಖಲಿಸಿದ್ದಾರೆ.