Antony Blinken : ದೆಹಲಿಗೆ ಬಂದಿಳಿದ ಅಮೆರಿಕ ರಾಜ್ಯ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್

ಇದು ರಾಜ್ಯ ಕಾರ್ಯದರ್ಶಿಯಾಗಿ ಬ್ಲಿಂಕೆನ್ ಅವರ ಇದು ಮೊದಲ ಭಾರತ ಭೇಟಿಯಾಗಿದೆ. ಇವರ ಇಬ್ಬರು ಕ್ಯಾಬಿನೆಟ್ ಸಹೋದ್ಯೋಗಿಗಳು - ಮಾರ್ಚ್ ನಲ್ಲಿ ನವದೆಹಲಿಯಲ್ಲಿದ್ದ ಯುಎಸ್ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಮತ್ತು ಏಪ್ರಿಲ್ ನಲ್ಲಿ ಹವಾಮಾನ ಬದಲಾವಣೆಯ ವಿಶೇಷ ರಾಯಭಾರಿ ಜಾನ್ ಕೆರ್ರಿ ಭೇಟಿ ನೀಡಿದ್ದರು. ಇದು ಎರಡು ದಿನಗಳ ಕಾಲದ ಪ್ರವಾಸವಾಗಿದೆ.

Written by - Channabasava A Kashinakunti | Last Updated : Jul 27, 2021, 09:58 PM IST
  • ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಮಂಗಳವಾರ ನವದೆಹಲಿಗೆ ಆಗಮಿಸಿದ್ದಾರೆ
  • ಬುಧವಾರ ಮಧ್ಯಾಹ್ನ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲಿದ್ದಾರೆ
  • ಜನವರಿ 20 ರಂದು ಯುಎಸ್ ಅಧ್ಯಕ್ಷ ಜೋ ಬಿಡನ್ ಅಧಿಕಾರ ವಹಿಸಿಕೊಂಡಿದ್ದಾರೆ
Antony Blinken : ದೆಹಲಿಗೆ ಬಂದಿಳಿದ ಅಮೆರಿಕ ರಾಜ್ಯ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ title=

ನವದೆಹಲಿ : ದ್ವಿಪಕ್ಷೀಯ ಸಂಬಂಧ, ಅಪ್ಘಾನಿಸ್ತಾನದಲ್ಲಿ ಪರಿಸ್ಥಿತಿ, ಪಾಕಿಸ್ತಾನ ಪ್ರೇರಿತ ಭಯೋತ್ಪಾದಕತೆ, ಇಂಡೋ- ಫೆಸಿಪಿಕ್ ಸೇರಿದಂತೆ ಮತ್ತಿತರ ವಿಚಾರ ಕುರಿತಂತೆ ಭಾರತದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲು ಅಮೇರಿಕಾದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಮಂಗಳವಾರ ನವದೆಹಲಿಗೆ ಆಗಮಿಸಿದ್ದಾರೆ. 

ಇದು ರಾಜ್ಯ ಕಾರ್ಯದರ್ಶಿಯಾಗಿ ಬ್ಲಿಂಕೆನ್(Antony Blinken) ಅವರ ಇದು ಮೊದಲ ಭಾರತ ಭೇಟಿಯಾಗಿದೆ. ಇವರ ಇಬ್ಬರು ಕ್ಯಾಬಿನೆಟ್ ಸಹೋದ್ಯೋಗಿಗಳು - ಮಾರ್ಚ್ ನಲ್ಲಿ ನವದೆಹಲಿಯಲ್ಲಿದ್ದ ಯುಎಸ್ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಮತ್ತು ಏಪ್ರಿಲ್ ನಲ್ಲಿ ಹವಾಮಾನ ಬದಲಾವಣೆಯ ವಿಶೇಷ ರಾಯಭಾರಿ ಜಾನ್ ಕೆರ್ರಿ ಭೇಟಿ ನೀಡಿದ್ದರು. ಇದು ಎರಡು ದಿನಗಳ ಕಾಲದ ಪ್ರವಾಸವಾಗಿದೆ.

ಇದನ್ನೂ ಓದಿ : Mamata Banerjee : ಪ್ರಧಾನಿ ಮೋದಿ ಭೇಟಿಯಾದ ಸಿಎಂ ಮಮತಾ ಬ್ಯಾನರ್ಜಿ : ಯಾಕೆ ಗೊತ್ತಾ?

ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಹೊರಡಿಸಿದ ಹೇಳಿಕೆಯ ಪ್ರಕಾರ ಭಾರತದ ಪ್ರಮುಖ ಜಾಗತಿಕ ಶಕ್ತಿ ಮತ್ತು ಇಂಡೋ-ಪೆಸಿಫಿಕ್(Indo-Pacific) ಮತ್ತು ಅದರಾಚೆ ಪ್ರಮುಖ ಯುಎಸ್. ಪಾಲುದಾರ ಎಂದು ಬಣ್ಣಿಸಿದೆ.

ಜನವರಿ 20 ರಂದು ಯುಎಸ್ ಅಧ್ಯಕ್ಷ ಜೋ ಬಿಡನ್(Joe Biden) ಅಧಿಕಾರ ವಹಿಸಿಕೊಂಡಾಗಿನಿಂದ ಬ್ಲಿಂಕೆನ್ ಮತ್ತು ಅವರ ಭಾರತೀಯ ವಿದೇಶಾಂಗ ಸಚಿವ ಎಸ್ ಜೈಶಂಕರ್ ನಡುವೆ ಹಲವು ಭಾರಿ ಕರೆ ನೀಡಿದ್ದರು. ಕರೆ ನಂತರ ಇಬ್ಬರೂ ಮೂರು ಬಾರಿ ಭೇಟಿಯಾದರು. ಜೈಶಂಕರ್ ಅವರು ಮೇ ತಿಂಗಳಲ್ಲಿ ಯುಎಸ್ ಗೆ ಭೇಟಿ ನೀಡಿದರು ಮತ್ತು ಎರಡು ಪ್ರತ್ಯೇಕ ಬಹುಪಕ್ಷೀಯ ಸಭೆಗಳ ಹೊರತಾಗಿ ಬ್ಲಿಂಕೆನ್ ಅವರೊಂದಿಗೆ ಎರಡು ಸಭೆಗಳು ನಡೆಸಿದ್ದರು.

ನವದೆಹಲಿ(Navadehali) ಮತ್ತು ಕುವೈತ್ ನ ನನ್ನ ಪ್ರವಾಸವಾಗಿದೆ. ಇಂಡೋ-ಪೆಸಿಫಿಕ್ ಮತ್ತು ಮಧ್ಯಪ್ರಾಚ್ಯದಲ್ಲಿ ನಮ್ಮ ಹಂಚಿಕೆಯ ಹಿತಾಸಕ್ತಿಗಳನ್ನು ಬೆಂಬಲಿಸಲು ಹೆಚ್ಚಿನ ಸಹಕಾರಕ್ಕಾಗಿ ನಮ್ಮ ಪಾಲುದಾರರೊಂದಿಗೆ ಸಮಾಲೋಚನೆ ನಡೆಸಲು ನಾನು ಎದುರು ನೋಡುತ್ತಿದ್ದೇನೆ ಎಂದು ವಾಷಿಂಗ್ಟನ್‌ನಿಂದ ನಿರ್ಗಮಿಸುವ ಮುನ್ನವೇ ಟ್ವಿಟ್ಟರ್ ಪೋಸ್ಟ್‌ನಲ್ಲಿ ಬ್ಲಿಂಕೆನ್ ಹೇಳಿದ್ದಾರೆ.

ಇದನ್ನೂ ಓದಿ : Baal Aadhaar card : ಬಾಲ್ ಆಧಾರ್ ಕಾರ್ಡ್ : ದಾಖಲಾತಿಗೆ ಮಗುವಿನ ಆಸ್ಪತ್ರೆ ಡಿಸ್ಚಾರ್ಜ್ ಸ್ಲಿಪ್ ಸಾಕು

ಭಾರತ ವಿದೇಶಾಂಗ ಸಚಿವಾಲಯ ಹೊರಡಿಸಿರುವ ವೇಳಾಪಟ್ಟಿಯ ಪ್ರಕಾರ, ಜೈಶಂಕರ್(Jaishankar) ಅವರೊಂದಿಗೆ ಮಾತುಕತೆ ನಡೆಸಿದ ನಂತರ ಬ್ಲಿಂಕೆನ್ ಬುಧವಾರ ಮಧ್ಯಾಹ್ನ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News