ರಾಜಸ್ತಾನ್ ನಾಗರಿಕ ಸೇವಾ ಪರೀಕ್ಷೆಯಲ್ಲಿನ್ನು ಭಗವದ್ಗೀತೆ!

    

Updated: Apr 16, 2018 , 05:38 PM IST
ರಾಜಸ್ತಾನ್ ನಾಗರಿಕ ಸೇವಾ ಪರೀಕ್ಷೆಯಲ್ಲಿನ್ನು ಭಗವದ್ಗೀತೆ!
ಸಾಂದರ್ಭಿಕ ಚಿತ್ರ

ಜೈಪುರ್: ರಾಜಸ್ತಾನ ನಾಗರಿಕ ಸೇವಾ ಪರೀಕ್ಷೆ 2018 ಪಠ್ಯಕ್ರಮದಲ್ಲಿ ಸಾಮಾನ್ಯ ಜ್ಞಾನದ ಪತ್ರಿಕೆಯಲ್ಲಿ  ಭಗವದ್ಗೀತೆಯಿಂದ ಕೆಲವು ಆಯ್ದ ಭಾಗಗಳನ್ನು ಆಯ್ದ ಭಾಗಗಳು 'ನೀತಿಶಾಸ್ತ್ರ' ಎಂಬ ಹೊಸ ಘಟಕದ ಮೂಲಕ ಸೇರಿಸಲಾಗಿದೆ. 

ಪಠ್ಯಕ್ರಮದಲ್ಲಿ ಭಗವದ್ಗೀತೆಯೊಂದಿಗೆ, ಮಹಾತ್ಮ ಗಾಂಧಿಯವರ ಜೀವನ, ರಾಷ್ಟ್ರೀಯ ನಾಯಕರು , ಸಾಮಾಜಿಕ ಸುಧಾರಕರು ಮತ್ತು ಆಡಳಿತಾಧಿಕಾರಿಗಳ ಜೀವನ ಚಿತ್ರಣವನ್ನು ಒಳಗೊಂಡಿದೆ.

ಆರ್.ಎ.ಎಸ್ 2018 ರ ಪರೀಕ್ಷೆಗಾಗಿ ತಯಾರಿ ನಡೆಸುವವರಿಗೆ ನಿರ್ವಹಣೆ ಮತ್ತು ಆಡಳಿತಾತ್ಮಕ ಪ್ರಶ್ನೆಗಳನ್ನು ಕೇಳಬಹುದು. ಈ ಸೇವಾ ಪರೀಕ್ಷೆಯ ಪಠ್ಯಕ್ರಮದಲ್ಲಿ ಕುರುಕ್ಷೇತ್ರಯುದ್ದಲ್ಲಿ  ಕೃಷ್ಣ ಮತ್ತು ಅರ್ಜುನ್ ನಡುವಿನ ಸಂವಾದಕ್ಕೆ ಸಂಬಂಧಿಸಿದ 18 ಅಧ್ಯಾಯಗಳನ್ನು ನಿಗದಿಪಡಿಸಲಾಗಿದೆ.ಆದ್ದರಿಂದ, ಇನ್ನು ಮುಂದೆ ಪರೀಕ್ಷೆಗಾಗಿ ತಯಾರಿ ನಡೆಸುವ ಅಭ್ಯರ್ಥಿಗಳುಇನ್ನು ಮುಂದೆ ಪುಸ್ತಕವನ್ನು ಸಂಪೂರ್ಣವಾಗಿ ಭಗವದ್ಗೀತೆ ಓದಬೇಕಾಗಿದೆ.

ರಾಜಸ್ಥಾನ ನಾಗರಿಕ ಸೇವಾ ಆಯೋಗವು 2018 ರ ಬಡ್ತಿಗಾಗಿ ನೇಮಕಾತಿಯ ಅಧಿಸೂಚನೆಯನ್ನು ಹೊರಡಿಸಿದೆ.ಅರ್ಜಿ ಸಲ್ಲಿಸುವುವ ಪ್ರಕ್ರಿಯೆಯನ್ನು ಇದೆ ಏಪ್ರಿಲ್ 12ರಿಂದ ಪ್ರಾರಂಭಿಸಿದೆ.

By continuing to use the site, you agree to the use of cookies. You can find out more by clicking this link

Close