ಪ.ಬಂಗಾಳಕ್ಕೆ ಬಾಂಗ್ಲಾ ಎಂದು ಮರುನಾಮಕರಣ ಮಾಡಲು ಕೇಂದ್ರದ ವಿಳಂಬ; ಮಮತಾ ಕಿಡಿ

ಪಶ್ಚಿಮ ಬಂಗಾಳವನ್ನು "ಬಾಂಗ್ಲಾ" ಎಂದು ಮರುನಾಮಕರಣ ಮಾಡಲು ರಾಜ್ಯ ಸರ್ಕಾರದ ಪ್ರಸ್ತಾಪಕ್ಕೆ ವಿಳಂಬಮಾಡುತ್ತಿರುವ ಕ್ರಮಕ್ಕೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದಾರೆ.

Last Updated : Nov 14, 2018, 05:47 PM IST
ಪ.ಬಂಗಾಳಕ್ಕೆ ಬಾಂಗ್ಲಾ ಎಂದು ಮರುನಾಮಕರಣ ಮಾಡಲು ಕೇಂದ್ರದ ವಿಳಂಬ; ಮಮತಾ ಕಿಡಿ  title=

ನವದಹೆಲಿ:ಪಶ್ಚಿಮ ಬಂಗಾಳವನ್ನು "ಬಾಂಗ್ಲಾ" ಎಂದು ಮರುನಾಮಕರಣ ಮಾಡಲು ರಾಜ್ಯ ಸರ್ಕಾರದ ಪ್ರಸ್ತಾಪಕ್ಕೆ ವಿಳಂಬಮಾಡುತ್ತಿರುವ ಕ್ರಮಕ್ಕೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದಾರೆ.

ಈ ವರ್ಷದ ಜುಲೈನಲ್ಲಿ ಪ.ಬಂಗಾಳ ರಾಜ್ಯ ಸರ್ಕಾರವು ವಿಧಾನಸಭೆಯಲ್ಲಿ ಅನುಮೋದನೆ ನೀಡಿತ್ತು.ಈಗ ಈ ವಿಳಂಭದ ಬಗ್ಗೆ ಮಾತನಾಡುತ್ತಾ ಇದು ಬಂಗಾಳದ ಮೇಲೆ ಕೇಂದ್ರ ಸರ್ಕಾರದ ನಿಲುವನ್ನು ಸ್ಪಷ್ಟವಾಗಿ ತೋರಿಸುತ್ತಿದೆ" ಎಂದು ಅವರು ಹೇಳಿದರು.

ಇದೇ ಬಿಜೆಪಿ ಮರುನಾಮಕರಣದ ರಾಜಕೀಯದ ಬಗ್ಗೆ ಕಿಡಿಕಾರಿರುವ ಮಮತಾ ಬ್ಯಾನರ್ಜಿ  ತಮ್ಮ ರಾಜಕೀಯ ಹಿತಾಸಕ್ತಿಗಳಿಗಾಗಿ ಏಕಪಕ್ಷೀಯವಾಗಿ ಐತಿಹಾಸಿಕ ಸ್ಥಳಗಳು ಮತ್ತು ಸಂಸ್ಥೆಗಳ ಹೆಸರುಗಳನ್ನು ಬಿಜೆಪಿ ಬದಲು ಮಾಡುತ್ತಿದೆ ಎಂದು ಟಿಕಿಸಿದರು.

ರಾಜ್ಯದಲ್ಲಿ ಶೂನ್ಯ ಶಕ್ತಿಯನ್ನು  ಹೊಂದಿರುವ ಬಿಜೆಪಿಯೋ ಅಥವಾ ಸಂವಿಧಾನಿಕ ಮತ್ತು ಒಕ್ಕೂಟ ರಚನೆಯ ಅನುಸಾರವಾಗಿ ರಾಜ್ಯ ಸರ್ಕಾರವು ವಿಧಾನಸಭೆಯಲ್ಲಿ ಅನುಮೋದನೆ ಮೂಲಕ ನಿರ್ಧರಿಸುವುದನ್ನು ಪರಿಗಣಿಸಬೇಕೋ ಎಂದು ಅವರು ಪ್ರಶ್ನಿಸಿದರು.

Trending News