ಡಿಯರ್ ಜಿಂದಗಿ: ಭಯ್ಯೂಜಿ ಮಹಾರಾಜರ ಆತ್ಮಹತ್ಯೆ ಟಿಪ್ಪಣಿ ಹಿನ್ನಲೆಯಲ್ಲಿ...

ಭಯ್ಯೂಜಿ ಮಹಾರಾಜ್ ಸೆಲೆಬ್ರಿಟಿ ಸಂತರಾಗಿದ್ದರು. ಪ್ರಮುಖವಾಗಿ ಅವರು ಜನರ ಬಳಿ ಹೋಗಿ ಕ್ಲಾಸ್ ಸಂತ ಆಗಿರುವುದಕ್ಕಿಂತ ಹೆಚ್ಚಾಗಿ ಮೊದಲು ಅವರು ಉನ್ನತ ವರ್ಗಗಳಲ್ಲಿ ಪ್ರಸಿದ್ಧಿ ಪಡೆದು ನಂತರ ಜನಸಾಮಾನ್ಯರಿಗೆ ಚಿರ ಪರಿಚಿತರಾಗಿದ್ದರು.

Last Updated : Jun 13, 2018, 07:28 PM IST
ಡಿಯರ್ ಜಿಂದಗಿ: ಭಯ್ಯೂಜಿ ಮಹಾರಾಜರ ಆತ್ಮಹತ್ಯೆ ಟಿಪ್ಪಣಿ ಹಿನ್ನಲೆಯಲ್ಲಿ... title=

ಹಿಂದಿ ಮೂಲ ಲೇಖಕರು : ದಯಾಶಂಕರ್ ಮಿಶ್ರಾ

ಭಯ್ಯೂಜಿ ಮಹಾರಾಜ್ ರನ್ನು ಒಬ್ಬ 'ಮಾಡೆಲ್ ಸಂತ ಎನ್ನಬಹುದು, ಒಂದು ಸಾರಿ ಭೂಪಾಲ್ ನಲ್ಲಿ ನಮ್ಮ ಪತ್ರಿಕೆಗೆ ಗೌರವಾನ್ವಿತ ಅತಿಥಿಯಾಗಿ ಸಮಾರಂಭಕ್ಕೆ ಬಂದಾಗ ಅವರನ್ನು ನಾನು ಭೇಟಿಯಾಗಿದ್ದೆ. ಆಗ ಎಲ್ಲರು ಅವರನ್ನು ಬರಮಾಡಿಕೊಳ್ಳಲು ಸಾಲಿನಲ್ಲಿ ಕಾಯುತ್ತಾ ನಿಂತಿದ್ದರು. ಭಯ್ಯುಜಿ ಪ್ರಾರಂಭದಲ್ಲಿ ಮಾಡೆಲ್ ಮತ್ತು ಫ್ಯಾಶನ್ ಡಿಸೈನರ್ ಆಗಿದ್ದವರು ಅನಂತರ ಆಧ್ಯಾತ್ಮಿಕದಲ್ಲಿನ ಹೀರೋ ಆಗಿ ಪರಿವರ್ತನೆಯಾದರು. ಇದರಿಂದ ರಾಜಕಾರಣಿಗಳು ಮತ್ತು ಜನಸಾಮಾನ್ಯರು ತಮ್ಮಲ್ಲಿನ ಆತ್ಮವಿಶ್ವಾಸದ ಹೆಚ್ಚಳಗೋಸ್ಕರ ಅವರನ್ನು ಭೇಟಿಯಾಗುತ್ತಿದ್ದರು.

ಭಯ್ಯೂಜಿ ಮಹಾರಾಜ್ ಸೆಲೆಬ್ರಿಟಿ ಸಂತರಾಗಿದ್ದರು. ಪ್ರಮುಖವಾಗಿ ಅವರು ಜನರ ಬಳಿ ಹೋಗಿ 'ಕ್ಲಾಸ್' ಸಂತನಾಗಿರುವುದಕ್ಕಿಂತ ಹೆಚ್ಚಾಗಿ ಮೊದಲು ಅವರು ಉನ್ನತ ವರ್ಗಗಳಲ್ಲಿ ಪ್ರಸಿದ್ಧಿ ಪಡೆದು ಆನಂತರ ಜನಸಾಮಾನ್ಯರಿಗೆ ಚಿರಪರಿಚಿತರಾದರು. ಈ ಗುರುಗಳ ಪಾಪ್ಯುಲಾರಿಟಿ ಯಾವ ಮಟ್ಟಕ್ಕೆ ತಲುಪಿತ್ತೆಂದರೆ ಪ್ರಸಿದ್ದ ವ್ಯಕ್ತಿಗಳಲ್ಲಿಯೂ ಸಹಿತ ಒಂದು ರೀತಿಯ ಅಸೂಯೆ ಮೂಡಿಸಿತ್ತು, ಅಂತಹ ಜಗತ್ತನ್ನು ಭಯ್ಯೂಜಿ ಮಹಾರಾಜ್ ಸೆಲೆಬ್ರಿಟಿ ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದರು. ಆ ವರ್ಗದಲ್ಲಿ ಪ್ರಮುಖವಾಗಿ, ಸಂಪತ್ತು, ಸಮೃದ್ದಿಯನ್ನು ಹೊಂದಿರುವ ವ್ಯಕ್ತಿಗಳು ಸೇರಿದ್ದರಿಂದಾಗಿ ಬದುಕು ಒಂದು ರೀತಿಯಲ್ಲಿ ಗ್ಲಾಮರ್ ನಂತಿತ್ತು ಎನ್ನಬಹುದು.   

 ಆದರೆ ಇಂಥಹ ವ್ಯಕ್ತಿ ತಮ್ಮ ಜೀವನಕ್ಕೆ ವಿದಾಯ ಹೇಳುತ್ತಾರೆ ಎಂದರೆ ಇದು ಅಚ್ಚರಿಗಿಂತ ಹೆಚ್ಚಾಗಿ ಎಚ್ಚರಿಕೆಯ ಸಂಕೇತವೆಂದು ಎಂದು ಹೇಳಬಹುದು. ನಾವು ಈ ವಿಚಾರವಾಗಿ ಕಳೆದ  ಡಿಯರ್ ಜಿಂದಗಿಯಲ್ಲಿ ಪ್ರಸ್ತಾಪಿಸಿದ ಹಾಗೆ ಭಾರತ ಮತ್ತು ಅಮೇರಿಕಾದಲ್ಲಿ ಆತ್ಮಹತ್ಯೆಯು ಪ್ರಮುಖವಾಗಿ ಎಲ್ಲ ಭೌತಿಕ ಸೌಕರ್ಯಗಳಿರುವ ವ್ಯಕ್ತಿಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.   

ಭಯ್ಯೂಜಿ ಅವರು ತಮ್ಮ ಆತ್ಮಹತ್ಯೆಯ ಡೆತ್ ನೋಟ್ ನಲ್ಲಿ ಬರೆದುಕೊಂಡಂತೆ "ನಾನು ನಿರ್ಗಮಿಸುತ್ತಿದೇನೆ, ನಾನು ನಿಜಕ್ಕೂ ಆಯಾಸಗೊಂಡಿದ್ದೇನೆ, ಬೇಸರಗೊಂಡಿದ್ದೇನೆ" ಎನ್ನುವ ನುಡಿಗಳು ಆತ್ಮಹತ್ಯೆ ಬಗೆಗಿನ ಕಾರಣಗಳನ್ನು ತಿಳಿಸುತ್ತದೆ. ಬದುಕಬೇಕೆನ್ನುವ ವ್ಯಕ್ತಿಗಳಲ್ಲಿ ನೂರು ಕಾರಣಗಳಿರುತ್ತವೆ. ಆದರೆ ಆತ್ಮಹತ್ಯೆಗೆ ಕೇವಲ ಒಂದು ಕಾರಣ ಸಾಕಷ್ಟೇ. ಆದ್ದರಿಂದ ಇದರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಲು ಹೋದಾಗ ಸಮಾಜವು ಅಂತಹ ಸಂಗತಿಗಳನ್ನು ತೊಡೆದುಹಾಕಲು ಅವರಿಗೆ ಬೆಂಬಲವಾಗಿ ನಿಲ್ಲುವ ಅವಶ್ಯಕತೆ ಇದೆ. ಅಂದರೆ ಇದರ ಅರ್ಥವಿಷ್ಟೇ, ನಾವು ಬದುಕಲು ಆರಿಸಿಕೊಂಡ ಕಾರಣಗಳಲ್ಲಿ ಯಾವುದಾರಲ್ಲಾದರು ದೋಷ ಕಂಡು ಬಂದಾಗ ಆ ಎಲ್ಲ ಕಾರಣಗಳನ್ನು ತೊರೆದು ಸೆಲೆಬ್ರಿಟಿಯೊಬ್ಬ ಜೀವನದ ಸಂಘರ್ಷಗಳೆಲ್ಲವನ್ನು ಬಿಟ್ಟು ಶರಣಾಗತನಾಗುತ್ತಾನೆ.  

 ಒಂದೆಡೆ ಇತರರಿಗೆ ಸಾಂತ್ವನ ಹೇಳುವ ಸೆಲೆಬ್ರಿಟಿಗಳು ತಮ್ಮ ಜೀವನದಲ್ಲಿ ಇಂತಹದ್ದೊಂದು ಕಷ್ಟಕಾಲ ಬಂದಾಗ ಅವರ ಕಣ್ಣಿರಕಟ್ಟೆಯೋಡೆದು ಹೋಗಿರುತ್ತದೆ. ‌ಇಂತಹ ಸಂಗತಿಗಳು ಬಹುತೇಕ ಜಗತ್ತಿನ ಎಲ್ಲ ಸೆಲೆಬ್ರಿಟಿಗಳಲ್ಲೂ  ಕಂಡುಬರುತ್ತವೆ. ಅದರಲ್ಲೂ ಪ್ರಮುಖವಾಗಿ ಅಮೆರಿಕಾದ ಪ್ರಸಿದ್ದ ಫ್ಯಾಶನ್ ಡಿಸೈನರ್ ಕೆಟ್ ಸ್ಪೀಡ್ ಹಾಗೂ ಪ್ರಸಿದ್ದ ಆಹಾರದ ವಿಶ್ಲೇಷಕ ಅಂತೋಣಿ ಬೋರ್ಡನ್ ಅವರ ಆತ್ಮಹತ್ಯೆಗಳು ಇದರ ಮುಂದುವರೆದ ಭಾಗವಷ್ಟೇ ಎಂದು ಹೇಳಬಹುದು. ಜಗತ್ತು ಜೀವನದ ಸಂತೋಷಕ್ಕಾಗಿ ಅರಸುತ್ತಿದೆ. ಅಂತಹ ಹುಡುಕಾಟದಲ್ಲಿರುವ ಸಾಮಾನ್ಯ ಅಂಶವೆಂದರೆ ನಮ್ಮೊಳಗಿರುವ ಸುಖದ ಒತ್ತಾಸೆ ಎನ್ನಬಹುದು. 

ಸಮಯ ಕಳೆದಂತೆ ಎಲ್ಲವು ಸರಿ ಹೋಗಿ ಬಿಡುತ್ತೆ ಎನ್ನುವ ವಿಚಾರ ಭಾರತೀಯ ಜೀವನ ಶೈಲಿಯ ಅವಿಭಾಜ್ಯ ಅಂಗವಾಗಿದೆ. ಆದ್ದರಿಂದ ಇಂತಹ ಆಲೋಚನೆಯಲ್ಲಿ ಈ ಹಿಂದೆ ಯಾವುದೇ ರೀತಿಯ ಆತ್ಮಹತ್ಯೆಯ ಭಯವಿದ್ದಿರಲಿಲ್ಲ. ಆದ್ದರಿಂದ ಜೀವನವು ಅಪಾಯದಲ್ಲಿ ಇದ್ದಾಗಲೂ ಸಹಿತ ಇದು ಸಹಾಯವಾಗುತ್ತಿತ್ತು. ಆದರೆ ಈಗ ನಾವು ಈ ಮೂಲ ಮಂತ್ರದಿಂದ  ಬಹುದೂರ ಸಾಗಿದ್ದೇವೆ, ಆದ್ದರಿಂದ  ನಮ್ಮ ಜೀವನ ಈಗ ಕಷ್ಟಕಾಲದಲ್ಲಿದೆ.

ಜೀವನದಲ್ಲಿನ ಕನಸುಗಳ ಹಿಂದೆ ಬಿದ್ದು ಹುಚ್ಚರಾಗುವುದು ತಪ್ಪೇನೂ ಅಲ್ಲ, ಮತ್ತು ಮಹತ್ವಾಕಾಂಕ್ಷೆ ಎನ್ನುವುದು ಅಂತಹ ಕೆಟ್ಟದ್ದೂ ಅಲ್ಲ. ಆದರೆ ಎಲ್ಲಿಯವರೆಗೆ ನೀವು ಕನಸಿನ ಬಾಗಿಲನ್ನು ಬಡಿಯಲು ಸಾಧ್ಯವಾಗುವುದಿಲ್ಲವೂ ಅಥವಾ ಒಂದು ಕ್ಷಣ ಅದು ನಿಮ್ಮ ಕೈ ತಪ್ಪಿಹೋಗುತ್ತದೆಯೋ ಆ ಸಂದರ್ಭದಲ್ಲಿ ಒಂದು ಕ್ಷಣ ಜೀವನದ ಅರ್ಥ ಕಳೆದುಕೊಂಡು ನಿಮ್ಮಿಂದ ದೂರ ಸಾಗಲು ಹವಣಿಸುತ್ತದೆ.

ಭಯ್ಯೂಜಿಯ ಪ್ರವಚನವನ್ನು ಇಡೀ ಜಗತ್ತು ಆಲಿಸುತ್ತಿತ್ತು. ಆದರೆ ಇಂದು ವಾಸ್ತವಾಗಿ ಅವರ ಪ್ರವಚನವು ಅವರ ಆತ್ಮಹತ್ಯೆಯ ಹಿಂದೆಯೇ ಕಳೆದುಹೋಗಿದೆ. ಕಾರಣವಿಷ್ಟೇ ಅವರ ಜೀವನವೇ ಒಂದು ರೀತಿಯಲ್ಲಿ ಕಷ್ಟಕಾಲದಲ್ಲಿ ಮುಳುಗಿತ್ತು. ಸಾಮಾನ್ಯವಾಗಿ ಮನುಷ್ಯ ಕನಸುಗಳ ಹಿಂದೆ ಬಿದ್ದು ಜೀವನವನ್ನು ನಿರ್ಲಕ್ಷಿಸಿಸುತ್ತಿದ್ದಾನೆ. ಈ ಜೀವನವೆಂಬ ಸಮುದ್ರದಲ್ಲಿ ಬೀಳುವುದು ತಪ್ಪಲ್ಲ, ಆದರೆ ಅದರಲ್ಲಿ ಈಜುವುದನ್ನು ಕಲಿಯಬೇಕು, ಇಲ್ಲದಿದ್ದರೆ ಅದು ಜೀವನವನ್ನು ಅಪಾಯದ ಸ್ಥಿತಿಗೆ ತಂದು ಬಿಡುತ್ತದೆ. 

ಆದ್ದರಿಂದ ನೀವು ಯಾವುದರ ಹಿಂದೆ ಬಿದ್ದು ಹುಚ್ಚರಾಗಬೇಡಿ, ನೀವು ಯಾರೊಬ್ಬರ ಅಭಿಮಾನಿ ಆಗಬೇಕಾದ ಅವಶ್ಯಕತೆಯೂ ಇಲ್ಲ. ಒಂದುವೇಳೆ ನಿಮ್ಮ ಮನಸ್ಸು ಇದಕ್ಕೆ ಆಸ್ಪದ ಕೊಡದೇ ಇದ್ದರೆ ನಿಮ್ಮ ಕುಟುಂಬದ ಅಭಿಮಾನಿಯಾಗಿರಿ ಅಥವಾ ಸದಾ ನಿಮ್ಮ ಜೊತೆ ಇರಲು ಬಯಸುವ ಮಿತ್ರರ ಬಳಿ ಜೀವನದ ಅರ್ಥವನ್ನು ಕಂಡುಕೊಳ್ಳಿ ಅಷ್ಟೇ.

ಕನ್ನಡದಲ್ಲಿ 'ಡಿಯರ್ ಜಿಂದಗಿ' ಎಲ್ಲಾ ಲೇಖನಗಳನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ: ಡಿಯರ್ ಜಿಂದಗಿ

ಬೆಂಗಾಲಿ ಭಾಷೆಯಲ್ಲಿ ಓದಲು ಈ ಲಿಂಕ್ ಕ್ಲಿಕ್ ಮಾಡಿ :  ডিয়ার জিন্দেগি : ভাইয়ুজি মহারাজের সুইসাইড নোটের মানে...

ಮರಾಠಿ ಭಾಷೆಯಲ್ಲಿ ಓದಲು ಈ ಲಿಂಕ್ ಕ್ಲಿಕ್ ಮಾಡಿ :  डिअर जिंदगी : भय्यूजी महाराज यांच्या सुसाईड नोटचा अर्थ

ಗುಜರಾತಿ  ಭಾಷೆಯಲ್ಲಿ ಓದಲು ಈ ಲಿಂಕ್ ಕ್ಲಿಕ್ ಮಾಡಿ : ડિયર જિંદગી: ભય્યુજી મહારાજની સ્યૂસાઈડ નોટનો અર્થ...

ತಮಿಳು ಭಾಷೆಯಲ್ಲಿ ಓದಲು ಈ ಲಿಂಕ್ ಕ್ಲಿಕ್ ಮಾಡಿ :  அன்புள்ள வாழ்க்கையே: மன அழுத்தத்துக்கு தற்கொலை தீர்வு ஆகாது!

ತೆಲುಗು ಭಾಷೆಯಲ್ಲಿ ಓದಲು ಈ ಲಿಂಕ್ ಕ್ಲಿಕ್ ಮಾಡಿ :  డియర్ జిందగీ: బతికి ఉంటే ఎందరినో బతికించవచ్చు భయ్యూ మహారాజ్

ಮಲಯಾಳಂ ಭಾಷೆಯಲ್ಲಿ ಓದಲು ಈ ಲಿಂಕ್ ಕ್ಲಿಕ್ ಮಾಡಿ : ഡിയര്‍ സിന്ദഗി: ആള്‍ദൈവം ഭയ്യൂജി മഹാരാജിന്‍റെ ആത്മഹത്യാക്കുറിപ്പ് അടിസ്ഥാനമാക്കി...

ಹಿಂದಿ ಭಾಷೆಯಲ್ಲಿ ಎಲ್ಲಾ ಲೇಖನಗಳನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ  : डियर जिंदगी
(https://twitter.com/dayashankarmi)

(ಈ ಲೇಖನದ ಕುರಿತಾಗಿ ನಿಮ್ಮ ಪ್ರಶ್ನೆ ಮತ್ತು ಅಭಿಪ್ರಾಯಗಳನ್ನು ತಿಳಿಸಲು ಮೆಸೇಜ್ ಮಾಡಿ:  https://www.facebook.com/dayashankar.mishra.54)

Trending News