ಡಿಯರ್ ಜಿಂದಗಿ: ಆತ್ಮಹತ್ಯೆ 'ಪರಿಹಾರ'ವಲ್ಲ; ಅದೊಂದು ಶಿಕ್ಷೆ!

ಮಾನಸಿಕ ಉದ್ವೇಗ, ಅಸಂತೋಷ, ತಪ್ಪಿತಸ್ಥ ಮನೋಭಾವ ಆತ್ಮಹತ್ಯೆಗೆ ಪ್ರೇರೇಪಿಸುತ್ತದೆ. ಮೇಲ್ನೋಟಕ್ಕೆ ಸಂತೋಷದಿಂದಿರುವ ಯಶಸ್ವಿ ವ್ಯಕ್ತಿಗಳಾಗಿ ಕಂಡರೂ ಅವರಿಗೇ ತಿಳಿಯದಂತೆ ಮಾನಸಿಕ ಖಿನ್ನತೆ ಮತ್ತು ಒಂಟಿತನದಿಂದ ಬಳಲುತ್ತಿರುತ್ತಾರೆ.

Last Updated : Jul 16, 2018, 04:53 PM IST
ಡಿಯರ್ ಜಿಂದಗಿ: ಆತ್ಮಹತ್ಯೆ 'ಪರಿಹಾರ'ವಲ್ಲ; ಅದೊಂದು ಶಿಕ್ಷೆ! title=

ಮೂಲ ಲೇಖಕರು: ದಯಾಶಂಕರ್ ಮಿಶ್ರಾ

ಆತ್ಮಹತ್ಯೆ, ಭಾರತದಿಂದ ಹಿಡಿದು ಅಮೆರಿಕಾದವರೆಗೆ ಜನರ ಜೀವನದಲ್ಲಿ ಅತಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಒಂದು ಕಾಲದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗದವರು ಹೆಚ್ಚಾಗಿ ಆತ್ಮಹತ್ಯೆಗೆ ಒಳಗಾಗುತ್ತಿದ್ದರು. ಅವರಿಗೆ ಆತ್ಮಹತ್ಯೆ ಬಿಟ್ಟರೆ ಬೇರೆ ದಾರಿ ತೋಚುತ್ತಿರಲಿಲ್ಲ. ಇವರಲ್ಲಿ ರೈತರ ಸಂಖ್ಯೆಯೇ ಹೆಚ್ಚಾಗಿತ್ತು. ಆದರೆ, ಕಳೆದ ಐದು ವರ್ಷಗಳಲ್ಲಿ ಆದ ತಂತ್ರಜ್ಞಾನದ ಅಭಿವೃದ್ಧಿ ಮತ್ತು ಗೆಜೆಟ್'ಗಳ ಆಗಮನದಿಂದಾಗಿ ವಿಶ್ವಾದ್ಯಂತ ಸಂವಹನ ನಡೆಸುವ ಹಾದಿ ಸುಗಮವಾಯಿತು. ಅದರ ಜೊತೆಗೇ ಜೀವನದಲ್ಲಿನ ಸಂಕಷ್ಟಗಳು ಮತ್ತಷ್ಟು ಹೆಚ್ಚಾಗತೊಡಗಿತು. 

ಭಾರತದ ಪರಿಸ್ಥಿತಿಯನ್ನು ಅರಿಯುವ ಮುನ್ನ ಅಮೆರಿಕದ ಕಡೆ ನಡೆಯೋಣ. ಏಕೆಂದರೆ ನಮ್ಮ ದೇಶ ಹೆಚ್ಚಾಗಿ ಅಮೆರಿಕ ಸಮುದಾಯವನ್ನು ಅನುಸರಿಸುತ್ತದೆ. 2016ರ ನ್ಯೂಯಾರ್ಕ್ ಟೈಮ್ಸ್ ವರದಿ ಪ್ರಕಾರ, 10 ವರ್ಷಗಳಲ್ಲಿ 45 ಸಾವಿರಕ್ಕೂ ಹೆಚ್ಚು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಬಹಳ ವೇಗವಾಗಿ ಏರುತ್ತಿದೆ. 1999ರಲ್ಲಿ ಆತ್ಮಹತ್ಯೆಗೆ ಒಳಗಾದವರ ಸಂಖ್ಯೆಗೆ ಹೋಲಿಸಿದರೆ ಶೇ.24ರಷ್ಟು ವೃದ್ಧಿಯಾಗಿದೆ. ಇದು ವಿಶ್ವದಲ್ಲೇ ಅಭಿವೃದ್ಧಿ ಹೊಂದಿದ ದೇಶದ ಜನರ ಮಾನಸಿಕ ಸ್ಥಿತಿಯನ್ನು ಒತ್ತಿ ಹೇಳುತ್ತಿದೆ. 

ಡಿಯರ್ ಜಿಂದಗಿ: ಬಿಡುವಿದ್ದರೆ ಮನೆಗೆ ಬಂದು ಹೋಗಿ...

ಭಾರತವೂ ಕೂಡ ಈ ಭೀಕರ ಅಪಾಯದೆಡೆಗೆ ಮುನ್ನುಗ್ಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಶ್ರೀಮಂತ ಸಮಾಜದಲ್ಲಿರುವ ಅಂತರ. ಬಹಳ ಸಂತೋಷದಿಂದ ಇರುವ ವರ್ಗ ಎಂದೇ ಹೇಳುವ ಶ್ರೀಮಂತ ಸಮುದಾಯದಲ್ಲಿ ಪರಸ್ಪರ ಮಾತುಕತೆಗೆ, ಹಬ್ಬಗಳ ಆಚರಣೆಗೆ, ಭಾವನೆಗಳ ವಿನಿಮಯಕ್ಕೆ ಅವಕಾಶವಿಲ್ಲ. ಯಾವುದೇ ವಿವಾದ ಕಾನೂನಿನ ಮೆಟ್ಟಿಲೇರುವ ಮುನ್ನ ಕುಟುಂಬದ, ಸ್ನೇಹಿತರ ನಡುವೆ ವೈಯಕ್ತಿಕ ಮಾತುಕತೆಗೆ, ಸಂವಾದಕ್ಕೆ ಒಳಗಾಗಿ ಪರಿಸ್ಥಿತಿ ಗಂಭೀರ ಹಂತ ತಲುಪುತ್ತದೆ. ಆ ಸಂದರ್ಭದಿಂದಾಗಿ ನಮ್ಮ ನಡುವೆ ಇದ್ದ ವ್ಯಕ್ತಿ ಆತ್ಮಹತ್ಯೆಗೆ ಆಲೋಚಿಸಿ ಜೀವನಕ್ಕೆ ವಿದಾಯ ಹೇಳಲು ಮುಂದಾಗುತ್ತಿದ್ದಾನೆ. 

ಡಿಯರ್ ಜಿಂದಗಿ: ಅತಿ ಬುದ್ದಿವಂತಿಕೆಯನ್ನು ಬಿಟ್ಟು ಹೊರಬರುವುದು ಅವಶ್ಯಕ

ಅಷ್ಟಕ್ಕೂ ಈ ಸಮಾಜದಲ್ಲಿ ನೀವೊಬ್ಬರೇ ಇಲ್ಲ. ನಿಮ್ಮ ಕುಟುಂಬ, ಸ್ನೇಹಿತರು ಮತ್ತು ನೆರೆಹೊರೆಯವರನ್ನೂ ಪರಿಗಣಿಸಿ. ಎಲ್ಲ ಪರಿಸ್ಥಿತಿಯನ್ನೂ ಸಾವಧಾನದಿಂದ, ಸಮಾಧಾನದಿಂದ ನಿಭಾಯಿಸಿ. ಯಾವುದೇ ಸಮಸ್ಯೆಯಿದ್ದರೂ ದಯವಿಟ್ಟು ನಿಮ್ಮ ಕುಟುಂಬ, ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಚರ್ಚಿಸಿ. ಆತ್ಮಹತ್ಯೆಯೊಂದೇ ಎಲ್ಲದಕ್ಕೂ ಪರಿಹಾರವಲ್ಲ. 

ಬಹಳ ವೇಗವಾಗಿ ಬೆಳೆಯುತ್ತಿರುವ ಸಮಾಜದಲ್ಲಿ ಆತ್ಮಹತ್ಯೆಗೆ ಕಾರಣವಾದ ಕೆಲವು ಅಂಶಗಳ ಬಗ್ಗೆ ಮಾತನಾಡೋಣ. ಇವುಗಳಿಂದ ಖಂಡಿತವಾಗಿಯೂ ಆತ್ಮಹತ್ಯೆ ಜಯಿಸಲು ಸಾಧ್ಯವಿದೆ ...

1. ಸ್ನೇಹಿತ ಸಂಖ್ಯೆ ಶೂನ್ಯ: ನಮ್ಮ ಮೊಬೈಲ್ನಲ್ಲಿ ನೂರಾರು ಜನರ ದೂರವಾಣಿ ಸಂಖ್ಯೆ ಇರಬಹುದು. ಆದರೆ, ಮನಸ್ಸಿನ ದುಃಖ ಹೇಳಿಕೊಳ್ಳಲು, ಸಂತೋಷ ಹಂಚಿಕೊಳ್ಳಲು, ಯಾವುದೇ ಭಯವಿಲ್ಲದೆ ಮನಬಿಚ್ಚಿ ಮಾತನಾಡಲು ಇರುವ ಸ್ನೇಹಿತರ ಸಂಖ್ಯೆ ಅಲ್ಲಿ ಶೂನ್ಯ. ಇನ್ನು, ಸ್ನೇಹಿತರನ್ನು ಭೇಟಿ ಮಾಡದಿರುವುದು, ಕುಟುಂಬ, ಪರಿವಾರದವರೊಂದಿಗೆ ಮನಬಿಚ್ಚಿ ಮಾತನಾಡದಿರುವುದು ಅಪಾಯದ ಸಂಕೇತ. ಮನಬಿಚ್ಚಿ ಮಾತನಾಡುವುದನ್ನು ನಿಲ್ಲಿಸಿದಾಕ್ಷಣ ಅದು ಮಾನಸಿಕ ಸಮಸ್ಯೆಗೆ ದಾರಿಯಾಗುತ್ತದೆ. ನಿಮ್ಮಿಂದ ಏನೇ ತಪ್ಪಾಗಿರಬಹುದು, ಆದರೆ ಆ ತಪ್ಪು ಏಕಾಯಿತು? ಅದಕ್ಕೆ ಪರಿಹಾರ ಏನು ಎಂಬುದನ್ನು ಕಂಡುಕೊಳ್ಳಲು ಖಂಡಿತಾ ಸಾಧ್ಯವಿದೆ. ಏಕೆಂದರೆ ಸಮಯ ಅನ್ನೋದು ನಿಮ್ಮ ಸ್ನೇಹಿತ ಇದ್ದ ಹಾಗೆ. ಸಮಯವೆಂಬ ನದಿ ತನ್ನ ಗರ್ಭಾಶಯದಲ್ಲಿ ಎಲ್ಲಾ ಕೊಳಕನ್ನು ಹಿಡಿದಿಟ್ಟುಕೊಳ್ಳುತ್ತದೆ. ಹಾಗಾಗಿ ಸಮಯದ ಮೇಲೆ ಭರವಸೆ ಇಡಿ. ಜನ ಏನು ಹೇಳುತ್ತಾರೆ? ಏನು ಮಾತನಾಡುತ್ತಾರೆ ಎಂಬುದರ ಬಗ್ಗೆ ಚಿಂತೆ ಬಿಡಿ.

2. ಜನರು ಯಾವಾಗಲೂ ಏನಾದರೂ ಹೇಳುತ್ತಲೇ ಇರುತ್ತಾರೆ. ಅದ್ಯಾವುದನ್ನೂ ಮನಸ್ಸಿಗೆ ಹಚ್ಚಿಕೊಳ್ಳದೆ, ಎಲ್ಲವನ್ನೂ ಧೈರ್ಯದಿಂದ ಎದುರಿಸಿ. ಒಣ ಪ್ರತಿಷ್ಠೆ ಮತ್ತು ಗೌರವವೆಂಬ ಅಂಧಕಾರದಿಂದ ಹೊರಬನ್ನಿ. ಇಲ್ಲವಾದರೆ ಜೀವನ ಉಸಿರುಗಟ್ಟುವಂತೆ ಆಗುತ್ತದೆ. 

ಡಿಯರ್ ಜಿಂದಗಿ : 'ಅವನು' ಹೇಳಿದ್ದು ಇನ್ನೂ ನೆನಪಿದೆ...!

3. ಉರಿಯುತ್ತಿರುವ ಸೂರ್ಯನನ್ನು ಹೇಗೆ ಸಹಿಸಿಕೊಳ್ಳುತ್ತೇವೋ ಹಾಗೇ ಜೀವನದ ಕಷ್ಟಗಳನ್ನು ಎದುರಿಸಬೇಕು. ಅದನ್ನು ಬಿಟ್ಟು ಜೀವವನ್ನೇ ಕಳೆದುಕೊಳ್ಳುವುದಲ್ಲ. ಶಿಕ್ಷಣ, ಕಲೆ, ಸಾಹಿತ್ಯ ಜ್ಞಾನದ ಅಭಾವದಿಂದಾಗಿ ನಾವು ಮತ್ತಷ್ಟು ಖಿನ್ನತೆಗೆ ಒಳಗಾಗುತ್ತಿದ್ದೇವೆ. ಇದರಿಂದ ದುಃಖ, ನೋವು ಮತ್ತು ಒಬ್ಬರು ಮತ್ತೊಬ್ಬರನ್ನು ಸಹಿಸಿಕೊಳ್ಳುವ ಸಾಮರ್ಥ್ಯವನ್ನೇ ಕಳೆದುಕೊಳ್ಳುತ್ತಿದ್ದೇವೆ.

4. ಮಾನಸಿಕ ಉದ್ವೇಗ, ಅಸಂತೋಷ, ತಪ್ಪಿತಸ್ಥ ಮನೋಭಾವ ಆತ್ಮಹತ್ಯೆಗೆ ಪ್ರೇರೇಪಿಸುತ್ತದೆ. ಮೇಲ್ನೋಟಕ್ಕೆ ಸಂತೋಷದಿಂದಿರುವ ಯಶಸ್ವಿ ವ್ಯಕ್ತಿಗಳಾಗಿ ಕಂಡರೂ ಅವರ ಮನಸ್ಸಿನಲ್ಲಿ ಅಡಗಿರುವ ಖಿನ್ನತೆ ಮತ್ತು ಒಂಟಿತನವನ್ನು ತಿಳಿಯುವುದು ಅಷ್ಟು ಸುಲಭವಲ್ಲ. ಅದನ್ನು ಅರಿಯಲು ಸಾಕಷ್ಟು ಸೂಕ್ಷ್ಮವಾಗಿ, ಗಹನವಾಗಿ ಪ್ರಯತ್ನಿಸಬೇಕಾಗುತ್ತದೆ. ಇದರಿಂದ ಅಕಾಲಿಕ ಸಾವಿಗೆ ತುತ್ತಾಗುವುದನ್ನು ತಡೆಯಬಹುದು.

5. ಆತ್ಮಹತ್ಯೆ ಮಾಡಿಕೊಳ್ಳುವುದರಿಂದ ಏನೂ ಸಿಗುವುದಿಲ್ಲ. ಬದಲಾಗಿ ಇದೊಂದು ಅಹಿತಕರ, ಕಹಿ ಘಟನೆಯಾಗಿ, ಬಗೆಹರಿಸಲಾಗದ ಪ್ರಶ್ನೆಗಳು ನಿಮ್ಮ ಪ್ರೀತಿಪಾತ್ರರನ್ನು ಕಾಡುತ್ತವೆ. ಹಾಗಾಗಿ, ಆತ್ಮಹತ್ಯೆ ಎಂಬುದು ನಿಮ್ಮನ್ನು ಪ್ರೀತಿಸುವವರಿಗೆ ನೀವು ಮಾಡುವ ಘೋರ ಅಪರಾಧ.

ಕನ್ನಡದಲ್ಲಿ 'ಡಿಯರ್ ಜಿಂದಗಿ' ಎಲ್ಲಾ ಲೇಖನಗಳನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ: ಡಿಯರ್ ಜಿಂದಗಿ

ಹಿಂದಿ ಭಾಷೆಯಲ್ಲಿ ಎಲ್ಲಾ ಲೇಖನಗಳನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ  : डियर जिंदगी
(https://twitter.com/dayashankarmi)

(ಈ ಲೇಖನದ ಕುರಿತಾಗಿ ನಿಮ್ಮ ಪ್ರಶ್ನೆ ಮತ್ತು ಅಭಿಪ್ರಾಯಗಳನ್ನು ತಿಳಿಸಲು ಮೆಸೇಜ್ ಮಾಡಿ:  https://www.facebook.com/dayashankar.mishra.54)

Trending News