ದೆಹಲಿಯಲ್ಲಿ ಡ್ಯಾನ್ಸ್ ಮಾಡುತ್ತಲೇ ಅಂಗಡಿಗೆ ನುಗ್ಗಿದ್ದ ಕಳ್ಳ! ವೀಡಿಯೋ

    

Updated: Jul 12, 2018 , 11:34 AM IST
 ದೆಹಲಿಯಲ್ಲಿ ಡ್ಯಾನ್ಸ್ ಮಾಡುತ್ತಲೇ ಅಂಗಡಿಗೆ ನುಗ್ಗಿದ್ದ ಕಳ್ಳ! ವೀಡಿಯೋ
Photo courtesy: ANI

ನವದೆಹಲಿ: ನಗರದ ಸಿಸಿಟಿವಿ ಕ್ಯಾಮರಾವೊಂದರಲ್ಲಿ ಕಳ್ಳನೊಬ್ಬ ಅಂಗಡಿ ಕಳ್ಳತನ ಮಾಡುವ ಮೊದಲು ಭರ್ಜರಿ ಡ್ಯಾನ್ಸ್ ಮಾಡುವ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

ಡ್ಯಾನ್ಸ್ ಮಾಡುತ್ತಲೇ ಅಂಗಡಿಯತ್ತ ಆಗಮಿಸುವ ಈ ವ್ಯಕ್ತಿಯ ಜೊತೆಗೆ ಇನ್ನೊಬ್ಬ ಯುವಕನು ಸಹಿತ ಕಳ್ಳತನಕ್ಕಾಗಿ ಹಿಂಬಾಲಿಸಿದ್ದಾನೆ.ಒಟ್ಟು ಮೂವರು ಈ ಸಿಸಿಟಿವಿ ದೃಶ್ಯಾವಳಿಯಲ್ಲಿ ಸೇರೆಯಾಗಿದ್ದಾರೆ. ಆದರೆ ಇವರೆಲ್ಲರೂ ಮುಖ ಗುರುತು ಸಿಗದ ಹಾಗೆ ಕರ್ಚಿಫ್ ಧರಿಸಿದ್ದಾರೆ. ಈ ಮೂವರನ್ನು ಇನ್ನು ಬಂಧಿಸಬೇಕಾಗಿದೆ ಆದರೆ ಇವರೆಗೂ ಕಳ್ಳತನಕ್ಕೆ ಪ್ರಯತ್ನಪಟ್ಟ ಈ ಸ್ಥಳವನ್ನು ಇದುವರೆಗೂ ಸ್ಪಷ್ಟವಾಗಿಲ್ಲ ಎಂದು ತಿಳಿದುಬಂದಿದೆ.

ಸಿಸಿತಿವಿಯ ದೃಶ್ಯಾವಳಿ ಪ್ರಕಾರ ಈ ಘಟನೆಯು ಜುಲೈ 10 ರಂದು ಬೆಳಗ್ಗೆ 1.11 ರ ಸುಮಾರಿಗೆ ನಡೆದಿದೆ ಎಂದು ತಿಳಿದುಬಂದಿದೆ.