#10YearChallenge ರೋಹಿತ್ ಶರ್ಮಾ ನೀಡಿದ ಸಂದೇಶವೇನು ಗೊತ್ತೇ?

ಸಾಮಾಜಿಕ ಜಾಲತಾಣಗಳಲ್ಲಿ ನಡೆದಿರುವ #10YearChallenge ಅಭಿಯಾನಕ್ಕೆ ಭಾರತದ ಕ್ರಿಕೆಟ್ ಆಟಗಾರ ರೋಹಿತ್ ಶರ್ಮಾ ಕೂಡ ಕೈಜೋಡಿಸಿದ್ದಾರೆ.

Last Updated : Jan 18, 2019, 07:09 PM IST
#10YearChallenge ರೋಹಿತ್ ಶರ್ಮಾ ನೀಡಿದ ಸಂದೇಶವೇನು ಗೊತ್ತೇ? title=

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ನಡೆದಿರುವ #10YearChallenge ಅಭಿಯಾನಕ್ಕೆ ಭಾರತದ ಕ್ರಿಕೆಟ್ ಆಟಗಾರ ರೋಹಿತ್ ಶರ್ಮಾ ಕೂಡ ಕೈಜೋಡಿಸಿದ್ದಾರೆ.

ಆದರೆ ರೋಹಿತ್ ಶರ್ಮಾ ಅವರು ಈ ಅಭಿಯಾನದಲ್ಲಿ ವಿಭಿನ್ನ ರೀತಿಯ ಸಂದೇಶವನ್ನು ನೀಡಿದ್ದಾರೆ.ಇದರಲ್ಲಿ ಅವರು ಪ್ರಮುಖವಾಗಿ ಸಮುದ್ರದ ಆಳದಲ್ಲಿರುವ ಹವಳದ ದಂಡೆ 10 ವರ್ಷಗಳ ಹಿಂದೆ ಇದ್ದಿದ್ದಕ್ಕೂ ಮತ್ತು ಈಗ ಬದಲಾಗುತ್ತಿರುವ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿ ಫೋಟೋವೊಂದನ್ನು ಶೇರ್ ಮಾಡಿದ್ದಾರೆ.

ನಾವು ಹತ್ತು ವರ್ಷದ ಚಾಲೆಂಜ್ ನಲ್ಲಿ ನಿಜವಾಗಿಯೂ ಚಿಂತಿಸಬೇಕಾಗಿರುವುದು ಎಂದರೆ ಇದು ಎಂದು ತಿಳಿಸಿದ್ದಾರೆ.ಆಸಿಸ್ ನಲ್ಲಿ ನಡೆಯುತ್ತಿರುವ ಏಕದಿನ ಪಂದ್ಯಗಳಲ್ಲಿ ಬ್ಯುಸಿಯಾಗಿರುವ ರೋಹಿತ್ ಶರ್ಮಾ ಈಗ ಬದಲಾಗುತ್ತಿರುವ ಪರಿಸರದ ಬಗ್ಗೆ ಕಾಳಜಿ ತೋರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ರೋಹಿತ್ ಶರ್ಮಾ ಅವರು ಆಸಿಸ್ ವಿರುದ್ದ ಮೊದಲ ಏಕದಿನ ಪಂದ್ಯದಲ್ಲಿ 133 ರನ್ ಗಳನ್ನು ಗಳಿಸಿದ್ದರು.ಆದರೆ ಇನ್ನೂಳಿದ ಯಾವುದೇ ಆಟಗಾರರು ಅವರಿಗೆ ಸಾಥ್ ನೀಡದ ಪರಿಣಾಮವಾಗಿ ಮೊದಲ ಪಂದ್ಯದಲ್ಲಿ ಭಾರತ ಸೋಲನ್ನು ಅನುಭವಿಸಿತ್ತು.ಈಗ ಅಂತರರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಬಿಟ್ಟರೆ ಅಗ್ರಪಂಥೀಯ ಆಟಗಾರರಾಗಿದ್ದಾರೆ.

Trending News