ತಾಜ್ ಮಹಲ್ ಸಂರಕ್ಷಿಸಿ ಅಥವಾ ನಾಶಪಡಿಸಿ- ಸರ್ಕಾರಕ್ಕೆ ಸುಪ್ರಿಂ ತರಾಟೆ

    

Updated: Jul 11, 2018 , 07:10 PM IST
ತಾಜ್ ಮಹಲ್ ಸಂರಕ್ಷಿಸಿ ಅಥವಾ ನಾಶಪಡಿಸಿ- ಸರ್ಕಾರಕ್ಕೆ ಸುಪ್ರಿಂ ತರಾಟೆ

ನವದೆಹಲಿ: ತಾಜ್ ಮಹಲ್ ನ ಕಳಪೆ ಸ್ಥಿತಿಗೆ ಕೇಂದ್ರ ಮತ್ತು ಉತ್ತರ ಪ್ರದೇಶ ಸರಕಾರವನ್ನು ಸುಪ್ರೀಂ ಕೋರ್ಟ್ ತೀವ್ರ ತರಾಟೆ ತೆಗೆದುಕೊಂಡಿದೆ. ತಾಜ್ ಮಹಲ್  ಅನ್ನು ರಕ್ಷಿಸಲು ಸರಕಾರ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಆದ್ದರಿಂದ ತಾಜ್ ಮಹಲ್ ಅವರನ್ನು ರಕ್ಷಿಸಲು ನ್ಯಾಯಾಲಯ ಆಗ್ರಹಿಸಿದೆ. 

ಬುಧುವಾರದಂದು ವಿಚಾರಣೆ ನಡೆಸಿದ ಕೋರ್ಟ್ ತಾಜ್ ಮಹಲ್ ನ್ನು ರಕ್ಷಿಸಿ ಅಥವಾ ನಾಶಪಡಿಸಿ ಎಂದು ಅದು   ಸರ್ಕಾರಕ್ಕೆ ಚಾಟಿ ಬಿಸಿದೆ.ತಾಜ್ ಮಹಲ್ ರಕ್ಷಿಸಲು ದೂರ ದೃಷ್ಟಿಕೋನ ಹೊಂದಿರುವ  ದಾಖಲೆಯನ್ನು ಸಿದ್ದಪಡಿಸಲು ಉತ್ತರ ಪ್ರದೇಶ ಸರಕಾರಕ್ಕೆ ಆದೇಶಿಸಲಾಗಿತ್ತು ಆದರೆ  ಸರ್ಕಾರ ವಿಳಂಭ ನೀತಿ ಅನುಸರಿಸುತ್ತಿರುವುದರ ಬಗ್ಗೆ  ಆಕ್ರೋಶಗೊಂಡಿರುವ  ಇಂದು ನ್ಯಾಯಮೂರ್ತಿ ಮದನ್ ಬಿ ಲೋಕೂರ್ ಮತ್ತು ಜಸ್ಟಿಸ್ ದೀಪಕ್ ಅವರ ಪೀಠವು ಟೀಕಿಸಿದೆ.

ವಿಚಾರಣೆ ವೇಳೆ ಅಭಿಪ್ರಾಯ ಪಟ್ಟಿರುವ ಪೀಠವು "ತಾಜ್ ಮಹಲ್ ಅನ್ನು ರಕ್ಷಿಸಲು ಯಾವುದೇ ಇಚ್ಛೆ ಇಲ್ಲ ಎಂದು ಕಾಣಿಸುತ್ತದೆ  ತಾಜ್ ಮಹಲ್ ನ್ನು ರಕ್ಷಿಸಬೇಕು, ಇಲ್ಲವಾದರೆ  ಅದನ್ನು ನಾವು ಮುಚ್ಚುತ್ತೇವೆ ಅಥವಾ ನೀವು ಅದನ್ನು ಕೆಡವಿ ಅಥವಾ ಪುನಃಸ್ಥಾಪಿಸಿರಿ " ಎಂದು ಸರ್ಕಾರದ ನಡೆಗೆ  ತನ್ನ ಅಸಮಾಧಾನವನ್ನು ಹೊರ ಹಾಕಿದೆ.

ಇದೇ ವೇಳೆ ತಾಜ ಮಹಲ್ ಸೌಂದರ್ಯದ ಬಗ್ಗೆ ಪ್ರಸ್ತಾಪಿಸಿರುವ ಕೋರ್ಟ್ ತಾಜ್ ಮಹಲ್ ಐಫೆಲ್ ಟವರ್ಗಿಂತ ಹೆಚ್ಚು ಸುಂದರವಾಗಿದೆ ಮತ್ತು ಇದರಿಂದ ದೇಶದ ವಿದೇಶಿ ವಿನಿಮಯ ಸಮಸ್ಯೆಗೆ ಪರಿಹಾರ ನೀಡಬಹುದೆಂದು ನ್ಯಾಯಾಲಯ ಹೇಳಿದೆ." ಟಿವಿ ಟವರ್ ನಂತೆ ಕಾಣುವ ಐಪೆಲ್ ಗೋಪುರವನ್ನು ಸುಮಾರು  80 ಮಿಲಿಯನ್ ಪ್ರವಾಸಿಗರು ನೋಡುತ್ತಾರೆ ಆದರೆ ನಮ್ಮ ತಾಜ್ ಮಹಲ್ ಅದಕ್ಕಿಂತಲೂ ಸುಂದರವಾಗಿದೆ ನೀವು ಅದನ್ನು ಸೂಕ್ತ ರೀತಿಯಲ್ಲಿ ರಕ್ಷಿಸಿದರೆ  ನಮ್ಮ ದೇಶದ ವಿದೇಶಿ ವಿನಿಮಯ ಸಮಸ್ಯೆಯನ್ನು ಬಗೆ ಹರಿಸಬಹುದು" ಎಂದು ಸುಪ್ರಿಂ ಕೋರ್ಟ್ ಅಭಿಪ್ರಾಯಪಟ್ಟಿದೆ.