ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿವೆ ಭಾರತದ ಈ ಹತ್ತು ನಗರಿಗಳು...!

ನಂಬಿದರೆ ನಂಬಿ ಬಿಟ್ಟರೆ ಬಿಡಿ ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಹತ್ತು ನಗರಿಗಳ ಪಟ್ಟಿಯಲ್ಲಿ ಎಲ್ಲ ಭಾರತೀಯ ನಗರಿಗಳೇ ಸ್ಥಾನ ಪಡೆದಿವೆ.

Updated: Dec 6, 2018 , 01:47 PM IST
ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿವೆ ಭಾರತದ ಈ ಹತ್ತು ನಗರಿಗಳು...!
ಸಾಂದರ್ಭಿಕ ಚಿತ್ರ

ನವದೆಹಲಿ: ನಂಬಿದರೆ ನಂಬಿ ಬಿಟ್ಟರೆ ಬಿಡಿ ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಹತ್ತು ನಗರಿಗಳ ಪಟ್ಟಿಯಲ್ಲಿ ಎಲ್ಲ ಭಾರತೀಯ ನಗರಿಗಳೇ ಸ್ಥಾನ ಪಡೆದಿವೆ.

ಈ ಸಂಗತಿ ನಿಜಕ್ಕೂ ಅಚ್ಚರಿ ಹುಟ್ಟಿಸುವಂತದ್ದು ಕಾರಣವಿಷ್ಟೇ ಆಕ್ಸಫರ್ಡ್ ಎಕಾನಾಮಿಕ್ಸ್ ಬಿಡುಗಡೆ ಮಾಡಿರುವ ಟಾಪ್ 10 ಪಟ್ಟಿಯಲ್ಲಿ ಭಾರತೀಯ ನಗರಗಳೇ ಇವೆ.ಈ ವರದಿಯಲ್ಲಿ ಸುರತ್ ಶೇ 9.17 ಬೆಳವಣಿಗೆ ದರವನ್ನು ಹೊಂದುವ ಮೂಲಕ ಮೊದಲ ಸ್ಥಾನವನ್ನು ಪಡೆದಿದೆ. ಇದರ ನಂತರ ಆಗ್ರಾ,ಬೆಂಗಳೂರು,ಹೈದರಾಬಾದ್,ನಾಗಪುರ್, ತಿರುಪುರ್,ನಾಗಪುರ್,ರಾಜಕೋಟ್,ತಿರುಚಿರಾಪಳ್ಳಿ,ಚೆನ್ನೈ ,ವಿಜಯವಾಡ  ಈ ಎಲ್ಲ ನಗರಿಗಳು ಟಾಪ್ 10 ಪಟ್ಟಿಯಲ್ಲಿ ಸ್ಥಾನವನ್ನು ಪಡೆದಿವೆ. 

ಈ ವರದಿಯಲ್ಲಿ ಪ್ರಮುಖವಾಗಿ ಮುಂದಿನ 2019 -2035 ರ ಅವಧಿಯಲ್ಲಿ ಈ ಎಲ್ಲ ನಗರಗಳು ವೇಗವಾಗಿ ಬೆಳೆಯಲಿವೆ ಎಂದು ವರದಿ ತಿಳಿಸಿದೆ.ಈ ಎಲ್ಲ ನಗರಗಳು ತೀವ್ರ ಬೆಳವಣಿಗೆ ಹೊಂದುತ್ತಿದ್ದರು ಸಹಿತ ಇವೆಲ್ಲವೂ ಆರ್ಥಿಕ ಹೊರ ಹೆಚ್ಚಳದಲ್ಲಿ ಜಗತ್ತಿನ ಇತರ ಮೆಟ್ರೋಪಾಲಿಟನ್ ನಗರಗಳಿಗೆ ಹೋಲಿಸಿದ್ದಲ್ಲಿ ಕಡಿಮೆ ಇವೆ ಎಂದು ತಿಳಿದು ಬಂದಿದೆ.ಆಫ್ರಿಕನ್ ಸಿಟಿಯಲ್ಲಿ ತಾಂಜಾನಿಯಾ ಬಂದರು ನಗರಿ ದರ್ ಎಸ್ ಸಲಾಂ ಅಗ್ರಸ್ಥಾನ ಪಡೆದರೆ.ಯುರೋಪ್ ನಲ್ಲಿ ಯೆರೆವನ್,ಉತ್ತರ ಅಮೆರಿಕಾದಲ್ಲಿ ಸ್ಯಾನ್ ಜೋಸ್ ನಗರಗಳು ಅಗ್ರಸ್ಥಾನವನ್ನು ಪಡೆದಿವೆ.

By continuing to use the site, you agree to the use of cookies. You can find out more by clicking this link

Close