ಗೋರಖ್ಪುರ್-ಫುಲ್ಪುರ್: ಎಸ್ಪಿ ಪಕ್ಷದ ಕಚೇರಿಯಲ್ಲಿ ವಿಜಯದ ಸಂಭ್ರಮ

ಎಸ್ಪಿ ಕಾರ್ಯಕರ್ತರು ಪರಸ್ಪರ ಸಂತೋಷವನ್ನು ವ್ಯಕ್ತಪಡಿಸಿದರು.

Updated: Mar 14, 2018 , 04:18 PM IST
ಗೋರಖ್ಪುರ್-ಫುಲ್ಪುರ್: ಎಸ್ಪಿ ಪಕ್ಷದ ಕಚೇರಿಯಲ್ಲಿ ವಿಜಯದ ಸಂಭ್ರಮ
Pic: ANI

ಲಕ್ನೋ: ಸಮಾಜವಾದಿ ಪಕ್ಷದ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರು ಗೋರಕ್ಪುರ ಮತ್ತು ಫುಲ್ಪುರ್ ಲೋಕಸಭಾ ಉಪಚುನಾವಣೆಯ ಗೆಲುವಿನ ಸಂಭ್ರಮವನ್ನು ಆರಂಭಿಸಿದರು. ಪ್ರಮುಖ ವಿಷಯ ಎಂದರೆ ಎಸ್ಪಿ ಕಾರ್ಯಕರ್ತರು ಅಖಿಲೇಶ್ ಯಾದವ್ ಗೆ ಘೋಷಣೆ ಕೂಗುವುದರ ನಡುವೆ 'ಭುಅ-ಭತೀಜ ಜಿಂದಾಬಾದ್' ಘೋಷಣೆ ಕೂಗಿದರು. ಎಸ್ಪಿ-ಬಿಎಸ್ಪಿ ಪಕ್ಷದ ಕಾರ್ಯಕರ್ತರಿಬ್ಬರೂ ಪರಸ್ಪರ ಸಂತೋಷ ವ್ಯಕ್ತಪಡಿಸಿದರು. ವಾಸ್ತವವಾಗಿ ಈ ಚುನಾವಣೆಯಲ್ಲಿ ಬಿಎಸ್ಪಿ ತನ್ನ ಅಭ್ಯರ್ಥಿಯನ್ನು ಚುನಾವಣಾ ಕಣಕ್ಕಿಳಿಸುವ ಬದಲಿಗೆ ಎಸ್ಪಿಗೆ ತನ್ನ ಬೆಂಬಲ ವ್ಯಕ್ತಪಡಿಸಿತ್ತು.