ಪರ್ತ್ ಟೆಸ್ಟ್: 277/6, ಗೌರವ ಮೊತ್ತ ಗಳಿಸಿದ ಆಸಿಸ್

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ತಂಡವು ದ್ವಿತೀಯ ಟೆಸ್ಟ್ ನಲ್ಲಿ  ಆರು ವಿಕೆಟ್ ನಷ್ಟಕ್ಕೆ ಮೊದಲ ದಿನ 277 ರನ್ ಗಳಿಸಿದೆ.

Last Updated : Dec 14, 2018, 05:53 PM IST
ಪರ್ತ್ ಟೆಸ್ಟ್: 277/6, ಗೌರವ ಮೊತ್ತ ಗಳಿಸಿದ ಆಸಿಸ್  title=
Photo: @BCCI

ಪರ್ತ್: ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ತಂಡವು ದ್ವಿತೀಯ ಟೆಸ್ಟ್ ನಲ್ಲಿ  ಆರು ವಿಕೆಟ್ ನಷ್ಟಕ್ಕೆ ಮೊದಲ ದಿನ 277 ರನ್ ಗಳಿಸಿದೆ.

ಆಸಿಸ್ ಪರ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಮಾರ್ಕಸ್ ಹ್ಯಾರಿಸ್(70) ಆರನ್ ಫಿಂಚ್ (50)   ಟ್ರಾವಿಸ್ ಹೆಡ್ (58) ಅವರ ಅರ್ಧಶತಕದ ನೆರವಿನಿಂದ ಗೌರವ ಮೊತ್ತವನ್ನು ಗಳಿಸಿತು.
ಭಾರತದ ಇಶಾಂತ್ ಶರ್ಮಾ, ಹನುಮಾ ವಿಹಾರಿ ತಲಾ ಎರಡು ವಿಕೆಟ್ ಗಳನ್ನು ಪಡೆಯುವ ಮೂಲಕ  ಆಸಿಸ್ ತಂಡವನ್ನು ಕಟ್ಟಿಹಾಕಿದರು.

ಒಟ್ಟು ನಾಲ್ಕು ಟೆಸ್ಟ್ ಸರಣಿಯಲ್ಲಿ ಈಗಾಗಲೇ 1-0 ಅಂತರದಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ಈ ಬಾರಿ ಸರಣಿ ಗೆಲ್ಲುವ ಹುಮ್ಮಸ್ಸಿನಲ್ಲಿರುವ ಭಾರತ ತಂಡವು ಮೊದಲ ಟೆಸ್ಟ್ ನಲ್ಲಿ ಗೆಲ್ಲುವು ಮೂಲಕ ಭರ್ಜರಿ ಆರಂಭವನ್ನು ಕಂಡಿದೆ.

Trending News